Asianet Suvarna News Asianet Suvarna News

Mangaluru: ಭದ್ರತೆ ಲೋಪಕ್ಕಾಗಿ ಜಾಗತಿಕವಾಗಿ ನಿಷೇಧಿಸ್ಪಟ್ಟ ಚೀನಾ ಕಂಪನಿ ಸಿಸಿ ಕ್ಯಾಮರಾ ಮಂಗಳೂರಲ್ಲಿ ಅಳವಡಿಕೆ

ಜಾಗತಿಕವಾಗಿ ಭದ್ರತಾ ದೋಷವಿರುವ ಚೀನಾ ಮೂಲದ ಹಿಕ್ವಿಷನ್‌ ಕಂಪನಿಯ ಸಿಸಿಟಿವಿ ಕ್ಯಾಮರಾಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ, ಉಗ್ರರ ಉಪಟಳವಿರುವ ಮಂಗಳೂರು ಮಹಾನಗರದಲ್ಲಿ ಗುಪ್ತ ಮಾಹಿತಿಗಳನ್ನು ಕದಿಯುವ ಚೀನಾ ಮೂಲದ ಕಂಪನಿಯ ಸಿಸಿ ಕ್ಯಾಮರಾಗಳನ್ನು ಮಂಗಳೂರು ಸ್ಮಾರ್ಟ ಸಿಟಿ ಯೋಜನೆಯಡಿ ಅಳವಡಿಕೆ ಮಾಡಲಾಗುತ್ತಿದೆ. 

Globally banned China CC camera Installation in Mangalore sat
Author
First Published Dec 6, 2022, 1:22 PM IST

ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಗಳೂರು (ಡಿ.6): ನಗರದ ಭದ್ರತೆಯ ಹಿತದೃಷ್ಟಿಯಿಂದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರು ‌ಮಹಾನಗರ ಪಾಲಿಕೆ ಅಳವಡಿಸಿರೋ ಸಿಸಿಟಿವಿ ಕ್ಯಾಮಾರಗಳಿಂದಲೇ ಮಂಗಳೂರಿನ ಭದ್ರತೆಗೆ ಅಪಾಯವಿದೆ ಎಂಬ ಗಂಭೀರ ಆರೋಪವನ್ನ ಕಾಂಗ್ರೆಸ್ ಮಾಡಿದೆ. ಚೀನಾ ನಿರ್ಮಿತ ಸಿಸಿ ಕ್ಯಾಮರಾಗಳು ಭದ್ರತೆ ದೃಷ್ಟಿಯಿಂದ ಭಾರಿ ಪ್ರಮಾಣದಲ್ಲಿ ಅಪಾಯಕಾರಿ ಆಗಲಿವೆ ಎಂದು ಕೇಳಿಬಂದಿದೆ. 

ನಗರದ ಭದ್ರತೆಗೆ ಅಳವಡಿಸಿರೋ ಸಿಸಿಟಿವಿ ಕ್ಯಾಮಾರಗಳಿಂದಲೇ ಸೆಕ್ಯೂರಿಟಿ ಥ್ರೆಟ್ ಇದ್ದು, ಮಂಗಳೂರಿನ ಸ್ಮಾರ್ಟ್ ಸಿಟಿ (Mangaluru Smart City) ಯೋಜನೆ ವಿರುದ್ದ ಭದ್ರತಾಲೋಪದ ಅಪಸ್ವರ (security threat) ವ್ಯಕ್ತವಾಗಿದೆ. ‌ಚೀನಾ ಮೂಲದ ಕಂಪೆನಿಗಳ ಸಿಸಿಟಿವಿ (China Companies CCTV) ಅಳವಡಿಸಿರುವ ಮಂಗಳೂರು ಮಹಾನಗರ ಪಾಲಿಕೆ, ಹಿಕ್ವಿಷನ್ (Hikvision) ಬ್ರಾಂಡ್ ಸಿಸಿ ಕ್ಯಾಮರಾಗಳ ಮೂಲಕ ಮಂಗಳೂರಿನಲ್ಲಿ ಕಣ್ಗಾವಲು ಇರಿಸಿದೆ. ಆದರೆ ಅಮೆರಿಕಾ, ಯಕೆ ಸೇರಿ ಹಲವು ದೇಶಗಳಲ್ಲಿ ನಿಷೇಧವಾಗಿರುವ ಹಿಕ್ವಿಷನ್ ಕಂಪೆನಿ ಸಿಸಿ ಕ್ಯಾಮರಾಗಳನ್ನ ದೇಶದ ಆಂತರಿಕ ಭದ್ರತೆಗೆ ಅಪಾಯ ಹಿನ್ನೆಲೆ ನಿರ್ಬಂಧಿಸಲಾಗಿದೆ. ವೈಯಕ್ತಿಕ ಡಾಟಾ ಕಳವು (Personal Deta Theft), ಗುಪ್ತ ಮಾಹಿತಿಗಳ ಕಳವು (confidential information theft) ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಭಾರತದಲ್ಲೂ ಸರ್ಕಾರಿ ಟೆಂಡರ್ ಗಳಲ್ಲಿ ಹಿಕ್ವಿಷನ್ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ ಇದೆ. ಇದಕ್ಕೆ ಕಾರಣ ಹಿಕ್ವಿಷನ್ ಕಂಪನಿ ಚೀನಾ ಸರ್ಕಾರದ ಪಾಲುದಾರಿಕೆ ಹೊಂದಿರೋ ಕಂಪೆನಿ ಎನ್ನಲಾಗಿದೆ. 

ಮಂಗಳೂರು ಭದ್ರತೆಗೆ ಸಿಸಿ ಕ್ಯಾಮೆರಾಗಳೇ ಡೇಂಜರ್: ಸ್ಮಾರ್ಟ್‌ ಸಿಟಿ ಯೋಜನೆ ವಿರುದ್ಧ ಭದ್ರತಾ ಲೋಪ ಅಪಸ್ವರ

ಚೀನಾ ಬ್ರ್ಯಾಂಡ್‌ ಬಗ್ಗೆ ಕಾಂಗ್ರೆಸ್ ಆಕ್ಷೇಪ: ಭಾರತದ ಆಂತರಿಕ ಭದ್ರತೆಗೆ ಚೀನಾದಿಂದ ಅಪಾಯ ಇದ್ದರೂ ಸರ್ಕಾರದಿಂದಲೇ ಚೀನಾ ಬ್ರಾಂಡ್ ಗಳ ಬಳಕೆ ಬಗ್ಗೆ ಕಾಂಗ್ರೆಸ್ ‌ಆಕ್ಷೇಪ ಎತ್ತಿದೆ. ಅಮೆರಿಕಾ, ಯು.ಕೆ ಸೇರಿ ಹಲವು ದೇಶಗಳಲ್ಲಿ ಭದ್ರತೆ ಕಾರಣದಿಂದ ಹಿಕ್ವಿಷನ್ ಕಂಪನಿ ಕ್ಯಾಮಾರಗಳ ಮಾರಾಟ ಮತ್ತು ಬಳಕೆಗೆ ನಿರ್ಬಂಧವಿದೆ. ಹೀಗಿದ್ದರೂ ಮಂಗಳೂರು ಮಹಾನಗರ ಪಾಲಿಕೆಯಿಂದಲೇ ಚೀನಾ ವಸ್ತುಗಳಿಗೆ ಮಣೆ ಹಾಕಲಾಗಿದೆ. ಕಮಿಷನ್ ಆಸೆಗೆ ಚೀನಾ ವಸ್ತುಗಳನ್ನೇ ಸ್ಮಾರ್ಟ್ ಸಿಟಿ ಯೋಜನೆಗೆ ಬಳಕೆ ಮಾಡಿರೋ ಆರೋಪವನ್ನ ಕಾಂಗ್ರೆಸ್ ಮಾಡಿದೆ. ಕಮಾಂಡ್ ಕಂಟ್ರೋಲ್‌ ಸೆಂಟರ್ ಯೋಜನೆಯಡಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ನಗರದ ಪ್ರಮುಖ ಜಾಗಗಳಲ್ಲಿ ಹಿಕ್ವಿಷನ್ ಬ್ರಾಂಡ್ ಬಳಕೆಯಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಬಳಕೆ: ಮಂಗಳೂರು ಮಹಾನಗರದಲ್ಲಿ ಮೊದಲ ಹಂತದ 23 ಕೋಟಿ ರೂ. ವೆಚ್ಚದ ಸ್ಮಾರ್ಟ್ ಸಿಟಿ ಕಮಾಂಡ್ ಕಂಟ್ರೋಲ್‌ ಸೆಂಟರ್ ಯೋಜನೆ ಪೂರ್ಣವಾಗಿದೆ. ಎರಡನೇ ಹಂತದಲ್ಲಿ 32 ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ಸಿದ್ದತೆ ನಡೆದಿದೆ. ಪುನಃ ಮತ್ತೊಮ್ಮೆ ಪಾಲಿಕೆಯು ಚೀನಾ ಮೂಲದ ಹಿಕ್ವಿಷನ್ (Hikvision) ಮತ್ತು  ದಹುವಾ (Dahua) ಬ್ರಾಂಡ್ ಬಳಕೆಗೆ ಪ್ಲಾನ್ ಮಾಡಲಾಗಿದೆ. ಆದರೆ, ಜಾಗತಿಕವಾಗಿ ನಿಷೇಧ ಹೇರಲಾಗಿರುವ ಹಿಕ್ವಿಷನ್ ಮತ್ತು ದಹುವಾ ಸಿಸಿ ಕ್ಯಾಮಾರಗಳನ್ನು (CCTV Camera) ಬಳಸುತ್ತಿರುವ ಮಂಗಳೂರು ಪಾಲಿಕೆ ಬಿಜೆಪಿ ಆಡಳಿತದ ವಿರುದ್ದ ಕಾಂಗ್ರೆಸ್ ಕಿಡಿ ಕಾರಿದೆ‌. ಕಮಿಷನ್ ಆಸೆಗೆ ನಗರದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿದ ಆರೋಪ ವ್ಯಕ್ತವಾಗಿದ್ದು, ಕಡಿಮೆ ದರದ ಚೀನಾ ಸಿಸಿ ಕ್ಯಾಮರಾ ಅಳವಡಿಸಿ ಭಾರೀ ಗೋಲ್ ಮಾಲ್ (Golmal) ಆರೋಪ ವ್ಯಕ್ತವಾಗಿದೆ.

'ಭಾವನೆಗೆ ಧಕ್ಕೆ ತರಲ್ಲ' ಚೀನಾ ಕಂಪನಿಯ ಪ್ರಾಯೋಜಕತ್ವ ಕೈಬಿಟ್ಟ ಭಾರತ

ಸ್ಮಾರ್ಟ್ ಸಿಟಿ ಯೋಜನೆಯಡಿ ಗೋಲ್ಮಾಲ್: ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-2, ಒಟ್ಟು ಮೊತ್ತ 32 ಕೋಟಿ ರೂ. ಯೋಜನೆ ಆಗಿರುತ್ತದೆ. ಈ ಯೋಜನೆಯಲ್ಲಿ ಸುಮಾರು 6 ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತದೆ. ಕೇರಳ ಸ್ಟೇಟ್ ಇಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ (Keltan Ltd, ಮೆಡ್ರಾಸ್ ಸೆಕ್ಯುರಿಟೀಸ್ ಪ್ರಿಂಟರ್ ಪ್ರೈವೆಟ್ ಲಿಮಿಟೆಡ್, ಸಿ.ಎಂ.ಎಸ್ ಕಂಪ್ಯೂಟರ್ ಲಿಮಿಟೆಡ್, ಮ್ಯಾಟ್ರಿಕ್ಸ್ ಸೆಕ್ಯುಲಿಟಿ ಆ್ಯಂಡ್ ಸರ್ವಲೆನ್ಸ್ ಪ್ರೈವೆಟ್ ಲಿಮಿಟೆಡ್, ಐ.ಟಿ.ಐ ಲಿಮಿಟೆಡ್ ಅಂಡ್ ಟೆಕ್ನಾಸಿಸ್ ಸೆಲ್ಯುಲಿಟೀಸ್ ಸಿಸ್ಟಂ ಪ್ರೈವೆಟ್ ಲಿಮಿಟೆಡ್ ಆಗಿವೆ. ಇದರಲ್ಲಿ ಮೆಡ್ರಾಸ್ ಸೆಲ್ಯುಲಾರಿಟಿ ಕಂಪೆನಿ (Madras Cellularity Company) ಮತ್ತು ಸಿ.ಎಂ.ಎಸ್ ಕಂಪೆನಿಗಳು (CMS Company) ಟೆಕ್ನಿಕಲ್ ಬಿಡ್ಡಿನಲ್ಲಿ ಅನರ್ಹ ಎಂದು ಆದೇಶವಾಗಿರುತ್ತದೆ. ಇದರಲ್ಲಿ ಸಿ.ಎಂ.ಎಸ್‌ ಕಂಪೆನಿಯು ಭಾರತ ದೇಶದಲ್ಲಿಯೇ ಕಮಾಂಡ್‌ ಕಂಟ್ರೋಲ್ ಸೆಂಟರ್ (Command Control Centers) ಅನುಷ್ಠಾನ ಮಾಡುವುದರಲ್ಲಿ ದಿಗ್ಗಜನಾಗಿದ್ದು, ಇವರು ಸೀಮನ್ ಎಂಬ ವಿದೇಶಿ ಕಂಪೆನಿಯಿಂದ ತಾಂತ್ರಿಕತೆಯನ್ನು ಪಡೆದಿರುವ ಕಂಪೆನಿಯಾಗಿರುತ್ತದೆ. 

ಟೆಂಡರ್‌ ಹಂಚಿಕೆಗೆ ಕಮಿಷನ್ ಲಾಬಿ: ಈಗಾಗಲೇ ಮುಂಬೈ ನಗರ, ಗುಜರಾತಿನ ಅಹ್ಮದಾಬಾದ್ ಹಾಗೂ ಬರೋಡ ಮುಂತಾದ ಬೃಹತ್ ನಗರಗಳಲ್ಲಿ ಕಮಾಂಡ್ ಕಂಟ್ರೋಲ್ ವ್ಯವಸ್ಥೆಯನ್ನು (Command Control system) ಅಳವಡಿಸಿರುವ ಕಂಪೆನಿಯಾಗಿದೆ‌. ಇದರಲ್ಲಿ ಐ.ಟಿ.ಐ ಲಿಮಿಟೆಡ್ (ಸರಕಾರಿ ಸ್ವಾಮ್ಯ) ಹೆಚ್ಚಿನ ಮೊತ್ತವನ್ನು ಸಲ್ಲಿಸಿದ ಕಾರಣ ಹೊರಬಿದ್ದಿದೆ. ಮ್ಯಾಟ್ರಿಕ್ಸ್ ಎಂಬ ಕಂಪೆನಿ ಟೆಕ್ನಿಕಲ್ ಬಿಡ್ ನಲ್ಲಿ ಪ್ರಥಮ ಅಂಕವನ್ನು ಪಡೆದ ಕಂಪೆನಿ ಆಗಿದ್ದು, ಹೆಚ್ಚಿನ ಮೊತ್ತವನ್ನು ಬಿಡ್ಡಿಂಗ್ ಮಾಡಿ ಹೊರಬಿದ್ದಿರುತ್ತದೆ. ಈ ನಡುವೆ ಕಮಾಂಡ್‌ ಕಂಟ್ರೋಲ್ ಸೆಂಟರ್ ಫೇಸ್‌-2 ಟೆಂಡರ್ ನಲ್ಲಿ ಬಿಪಿಸಿ ಸೆರೀಸ್ ಪ್ರೈವೆಟ್ ಲಿಮಿಟೆಡ್ (BPC Series P.Ltd ಎಂಬ ಕಂಪೆನಿಯು ಅರ್ಹ ಕಂಪೆನಿ ಎಂದು ಆಯ್ಕೆ ಮಾಡಲಾಗಿದೆ. ಆದರೆ ಈ ಕಂಪೆನಿಯು ಭೋಪಾಲ್‌ ಮತ್ತು ಘಾಜಿಯಾಬಾದ್ ನಲ್ಲಿ ಇಂಥದ್ದೇ ಯೋಜನೆ ಅನಷ್ಠಾನ ಮಾಡುವಲ್ಲಿ ವೈಫಲ್ಯವನ್ನು ಕಂಡು ಕಪ್ಪು ಪಟ್ಟಿಗೆ ಸೇರ್ಪಡೆಯಾಗಿರುತ್ತದೆ. ಈ ಕಂಪೆನಿಗೆ ಈ ಯೋಜನೆ ಸಿಗುವಂತೆ ಮಾಡಲು ಈ ಯೋಜನೆಯ ಕನ್ಸಲ್ಟೆಂಟ್ ಇರುವಂತಹ ನೈಸ್ ಎನ್ ಸೋನ್ ಕಂಪೆನಿಯ ಒತ್ತಡ ಹೇರುತ್ತಿದೆ. ಜೊತೆಗೆ ಇದರಲ್ಲಿ ಕಮಿಷನ್ ಲಾಬಿ ಇದೆ ಎ‌ನ್ನುವುದು ಕಾಂಗ್ರೆಸ್ ಆರೋಪ.

Follow Us:
Download App:
  • android
  • ios