6 ಸೋಲು ಕಂಡ ನನಗೆ ನಿಮ್ಮ ಸೇವೆಗೆ ಅವಕಾಶ ನೀಡಿ: ಎಂಆರ್‌ಕೆ

ಎಸ್‌.ಜಯಣ್ಣ, ಎಸ್‌.ಬಾಲರಾಜು, ಜಿ.ಎನ್‌. ನಂಜುಂಡಸ್ವಾಮಿ ಅವರಿಗೆ ಸೇವೆ ಮಾಡಲು ಅವಕಾಶ ನೀಡಿದಂತೆ ನನಗೂ ನಿಮ್ಮ ಸೇವೆ ಮಾಡಲು ಒಮ್ಮೆ ಅವಕಾಶ ನೀಡಬೇಕು. ಸಂತೇಮರಳ್ಳಿಯಲ್ಲಿ ಒಂದು ಮತದಿಂದ ಸೋತು 19 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿದ್ದರೂ 6 ಸೋಲು ಕಂಡಿದ್ದೇನೆ. ಈ ಬಾರಿ ನನಗೊಂದು ಅವಕಾಶ ನೀಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌. ಕೃಷ್ಣಮೂರ್ತಿ ಮನವಿ ಮಾಡಿದರು.

Give me a chance at your service: MRK snr

  ಕೊಳ್ಳೇಗಾಲ :  ಎಸ್‌.ಜಯಣ್ಣ, ಎಸ್‌.ಬಾಲರಾಜು, ಜಿ.ಎನ್‌. ನಂಜುಂಡಸ್ವಾಮಿ ಅವರಿಗೆ ಸೇವೆ ಮಾಡಲು ಅವಕಾಶ ನೀಡಿದಂತೆ ನನಗೂ ನಿಮ್ಮ ಸೇವೆ ಮಾಡಲು ಒಮ್ಮೆ ಅವಕಾಶ ನೀಡಬೇಕು. ಸಂತೇಮರಳ್ಳಿಯಲ್ಲಿ ಒಂದು ಮತದಿಂದ ಸೋತು 19 ವರ್ಷಗಳಿಂದಲೂ ಸಕ್ರಿಯ ರಾಜಕಾರಣದಲ್ಲಿದ್ದರೂ 6 ಸೋಲು ಕಂಡಿದ್ದೇನೆ. ಈ ಬಾರಿ ನನಗೊಂದು ಅವಕಾಶ ನೀಡಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌. ಕೃಷ್ಣಮೂರ್ತಿ ಮನವಿ ಮಾಡಿದರು.

ಅವರು ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಹೊಮ್ಮ, ಇರಸವಾಡಿ, ಗಂಗವಾಡಿ, ಹೊಂಗನೂರು, ಮಸಣಾಪುರ, ಇರಸವಾಡಿ, ಗೂಳಿಪುರ ಗ್ರಾಪಂಗಳಲ್ಲಿ ಚುನಾವಣಾ ಪ್ರಚಾರದ ಸಭೆಯನ್ನುದ್ದೇಶಿಸಿ ಮಾತನಾಡಿ, ನಾನು ರಾಜಕೀಯದಲ್ಲಿ ಎಂದು ಕಳಂಕವಿಲ್ಲದನು, ನಮ್ಮ ತಂದೆಯವರಂತೆ ರಾಜಕಾರಣಕ್ಕೆ ಕೈ, ಬಾಯಿ ಮತ್ತು ಕಚ್ಚೆಯನ್ನು ಶುದ್ಧವಾಗಿಟ್ಟುಕೊಂಡಿದ್ದೇನೆ, ನಾನು, ಹಲವು ಸೋಲು ಕಂಡರೂ ನನ್ನ ಬೆಂಬಲಿಗರು,

ಕಾರ್ಯಕರ್ತರ ಸಂಕಷ್ಟಕ್ಕೆ ನನ್ನಿಂದಾದ ಕೆಲಸ ಕಾರ್ಯಗಳಿಗೆ ಸ್ಪಂದಿಸಿದ್ದೇನೆ, ಸೋತರೂ ಈ ಕ್ಷೇತ್ರದ ಬಿಟ್ಟು ತೆರಳಿಲ್ಲ, ಅಂತಹ ಅಭಿಮಾನ ನನಗೆ ಜನರ ಮೇಲಿದೆ ಕಾರಣವಿಷ್ಟೆ. ಲೋಕಸಭೆ, ವಿಧಾನಸಭೆಗಳಲ್ಲಿ ನಾನು ಸ್ಪರ್ಧಿಸಿದ ವೇಳೆ ಗೆಲ್ಲಲಾಗದಿದ್ದರೂ ಗೆಲುವಿನ ಸಮೀಪದಲ್ಲೆ ಪ್ರತಿ ಚುನಾವಣೆಯಲ್ಲಿ 50ಸಾವಿರಕ್ಕಿಂತ ಹೆಚ್ಚು ಮತ ನೀಡಿ ನನ್ನ ಬೆಂಬಲಿಸುತ್ತಿರುವ ನೀವೆಲ್ಲರೂ ಈ ಬಾರಿ ಶಾಸಕ ಮಹೇಶ್‌ ಅವರನ್ನು ತಿರಸ್ಕರಿಸಿ ನನಗೊಂದು ಅವಕಾಶ ನೀಡಿ. ನಾನು ಕ್ಷೇತ್ರವನ್ನು ಸಿಂಗಾಪುರ್‌ ಮಾಡುತ್ತೇನೆ ಎಂಬ ಹುಸಿ ಭರವಸೆ ನೀಡಲ್ಲ, ನನಗೆ ಮತ ನೀಡಿದ ಮತದಾರರ ಸ್ವಾಭಿಮಾನಕ್ಕೆ ಧಕ್ಕೆ, ಕುಂದುಂಟು ಮಾಡುವ ಕೆಲಸ ಎಂದಿಗೂ ಮಾಡಲ್ಲ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗುವೆ ಎಂದರು.

ಮಾಜಿ ಶಾಸಕ ಎಸ್‌.ಜಯಣ್ಣ ಮಾತನಾಡಿ, ಶಾಸಕ ಮಹೇಶ್‌ ಅವರು ಬರೀ ಸುಳ್ಳಿನ ಆಶ್ವಾಸನೆ ನೀಡಿ ಜನರನ್ನು ನಂಬಿಸಿದ್ದಾರೆ. ಇವರಿಂದ ನೂರಾರು ಮಂದಿ ನಿರುದ್ಯೋಗಿಗಳು, ವಿದ್ಯಾರ್ಥಿಗಳು ಕೆಲಸವೂ ಇಲ್ಲದೆ, ಅತ್ತ ಇವರಿಗೆ ದುಡಿದದ್ದಕ್ಕಾಗಿ ಪ್ರತಿಪಲವೂ ಇಲ್ಲದೆ ಅತಂತ್ರರಾಗಿದ್ದಾರೆ. ಹಾಗಾಗಿ ಅವರನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಿ ಕೃಷ್ಣಮೂರ್ತಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದರು.

ಉಪ್ಪಾರ ಸಮಾಜದ ಮುಖಂಡ ಪಿ. ಮಾದೇಶ್‌, ಕೊಳ್ಳೇಗಾಲ ಭೀಮನಗರದ ರಾಜಶೇಖರಮೂರ್ತಿ ಮಾತನಾಡಿ, ಶಾಸಕ ಮಹೇಶ್‌ ಅವರಿಗೆ ಎರಡು ಮುಖವಿದೆ. ಅವರೊಬ್ಬ ಸುಳ್ಳುಗಾರ, ಹಾಗಾಗಿ ಅವರನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಿ ಎಂದರು.

ಜಿಪಂನ ಮಾಜಿ ಉಪಾಧ್ಯಕ್ಷ ಯೋಗೀಶ್‌ ಮಾತನಾಡಿ, ಹಲವು ಸೋಲಿನ ಸರಮಾಲೆಯನ್ನೆ ಕಂಡಿರುವ ಸಜ್ಜನ ವ್ಯಕ್ತಿ ಅವರನ್ನು ಈಬಾರಿ ಅತ್ಯಧಿಕ ಮತದಿಂದ ಗೆಲ್ಲಿಸಿ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರು ಮಾತನಾಡಿ ಕೃಷ್ಣಮೂರ್ತಿ ಅವರು ಕಳಂಕವಿಲ್ಲದ ವ್ಯಕ್ತಿತ್ವ, ಈ ಭಾಗದಿಂದ ಈ ಬಾರಿ ಅವರಿಗೆ ಅತ್ಯಧಿಕ ಮತ ಬರುವ ನಿಟ್ಟಿನಲ್ಲಿ ಮತದಾರರು ಆಶೀರ್ವದಿಸಿ ಎಂದರು.

ಈಸಂದರ್ಭದಲ್ಲಿ ಜಿ.ಎನ್‌. ನಂಜುಂಡಸ್ವಾಮಿ, ಕೊಪ್ಪಾಳಿ ಮಹದೇವನಾಯಕ, ಅಗರ ವೆಂಕಟೇಶ್‌, ದೇಶವಳ್ಳಿ ನಟರಾಜು, ಕಂದಳ್ಳಿ ನಂಜುಂಡಸ್ವಾಮಿ, ಇರಸವಾಡಿ ನಾಗರಾಜು , ಗಣಿಗನೂರು ಬಂಗಾರು, ಹಾಲಿನ ಮಹದೇವ ಶೆಟ್ರು, ದುಗ್ಗಟ್ಟಿಮಾದೇಶ್‌, ವೈ ವಿ ಮಹೇಶ, ಸಿದ್ದರಾಜು ಇದ್ದರು.

Latest Videos
Follow Us:
Download App:
  • android
  • ios