ಮಂಗಳೂರು(ಮೇ 28): ಮೋದಿ ಜೀ ನಾನು ದೊಡ್ಡವಳಾದ ಮೇಲೆ ಸೈನ್ಯಕ್ಕೆ ಸೇರಬೇಕೆಂಬ ಕನಸು ಹೊತ್ತಿದ್ದೇನೆ. ಇದು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟಹಳ್ಳಿ ಮಿತ್ತೂರಿನ ಹರೀಶ್‌ ಮತ್ತು ಚಂಚಲಾಕ್ಷಿ ದಂಪತಿ ಪುತ್ರಿ ಸಹನಾ ಎಂಬ ಬಾಲಕಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರ.

ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈಕೆ ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಮರು ಉತ್ತರ ಬಂದಿದೆ.

ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಲೋಕಾಯುಕ್ತಕ್ಕೆ ಕಾಂಗ್ರೆಸ್‌ ದೂರು

ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಬಾಲಕಿ, ನೃತ್ಯ, ಸಂಗೀತ, ಕರಾಟೆ, ಚಿತ್ರ ಬಿಡಿಸುದರಲ್ಲಿ ಎತ್ತಿದ ಕೈ, ಓದಿನಲ್ಲೂ ಮುಂದಿದ್ದಾಳೆ. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮುಂದಿರುವ ಬಾಲಕಿ ಭಾರತದ ಪ್ರಧಾನ ಮಂತ್ರಿಗೆ ಪತ್ರ ಬರೆದು ಸೈನ್ಯಕ್ಕೆ ಸೇರುವ ತನ್ನ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾಳೆ.

ಬಾಲಕಿ ಬರೆದಿರುವ ಪತ್ರದಲ್ಲಿ ಏನಿದೆ?: ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ ಅವರಿಗೆ ನನ್ನ ನಮಸ್ಕಾರಗಳು, ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಚೆನ್ನಾಗಿದ್ದೇನೆ. ನೀವು ಚೆನ್ನಾಗಿದ್ದೀರಿ ಎಂದು ನಂಬುವೆ.

ಕುರುಗೋಡು: ಟಿಪ್ಪರ್‌-ಟಾಟಾ ಏಸ್‌ ಡಿಕ್ಕಿ, 15 ಜನ​ರಿಗೆ ಗಾಯ

ನಾನು ನಮ್ಮ ದೇಶದ ಗಡಿ ಕಾಯುವ ವೀರ ಯೋಧರ ಬಗ್ಗೆ ನಿಮ್ಮಲ್ಲಿ ಮಾತನಾಡಬೇಕು. ಅವರಿಗೆ ನನ್ನ ನಮನವನ್ನು ನಿಮ್ಮ ಮುಖಾಂತರ ತಿಳಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾಳೆ.

ನಮ್ಮ ದೇಶಕ್ಕೆ ಪಾಕ್‌, ಚೀನಾದ ವಸ್ತುಗಳು ಬೇಡವೇ ಬೇಡ. ನಮ್ಮ ಸೈನಿಕರು ದೇಶಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಭಾರತಾಂಬೆಯನ್ನು ಕಾಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರವು ನನ್ನ ಹೃದಯವಿದ್ದಂತೆ. ನಮ್ಮ ದೇಶವು ಸಂಪ್ರದಾಯ, ಸಂಸ್ಕೃತಿ ಇರುವ ದೇಶ. ಗುಜರಾತ್‌ ಮತ್ತು ಅಸ್ಸಾಂ, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ ಭಾರತಾಂಬೆಯ ಶಿರ ಇದ್ದಂತೆ. ಗುಜರಾತ್‌ ಮತ್ತು ಆ ಕಡೆಯ ಮೇಘಾಲಯ, ಅಸ್ಸಾಂ, ಮಣಿಪುರಿ ಎರಡು ರಾಜ್ಯಗಳನ್ನು ಭಾರತಾಂಬೆಯ ಕೈ ಎನ್ನುತ್ತಾರೆ. ಕೇರಳ, ಕರ್ನಾಟಕ, ತಮಿಳುನಾಡು ಭಾರತಾಂಬೆಯ ಕಾಲು ಇದ್ದಂತೆ, ಭಾರತಾಂಬೆಯ ಪಾದಗಳಿಗೆ ನಾನೂ ಪುಷ್ಪಗಳನ್ನು ಪೂಜಿಸುತ್ತಾ ಗೌರವಿಸುತ್ತಿದ್ದೇನೆ. ನಮ್ಮ ಸೈನಿಕರಿಗೆ ಮನದಾಳದ ನಮನವನ್ನು ನಿಮ್ಮ ಮೂಲಕ ತಿಳಿಸಲು ಇಚ್ಛಿಸುತ್ತೇನೆ ಎಂದು ಪತ್ರದಲ್ಲಿ ನಮೂದಿಸಿದ್ದಾಳೆ.

ಜೂನ್‌ 1ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ

ಇನ್ನು ಬಾಲಕಿ ಕಳುಹಿಸಿದ ಪತ್ರಕ್ಕೆ ಪ್ರಧಾನಿ ಮೋದಿಯವರು ಹಸ್ತಾಕ್ಷರ ಕಳುಹಿಸಿ ಶುಭ ಹಾರೈಸಿದ್ದಾರೆ. ಮೋದಿಯವರಿಗೆ ಪತ್ರ ಬರೆದು ಯೋಧರಿಗೆ ನಮನ ಸಲ್ಲಿಸಿದ್ದ ಬಾಲಕಿ ಕಾರ್ಯಕ್ಕೆ ಇಡೀ ಗ್ರಾಮದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದೆ.