ಶಿವಮೊಗ್ಗ: ಪೊದೆಯಲ್ಲಿ ಬಿಟ್ಟು ಹೋಗಿದ್ದ ಸೀಳುತುಟಿ ಹೊಂದಿರುವ ಹೆಣ್ಣು ಮಗು ರಕ್ಷಣೆ

ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪಾಲಕರ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿ ನೀಡಲು ಸೂಚನೆ ನೀಡಲಾಗಿದೆ. ಶಿವಮೊಗ್ಗ ಆಲ್ಗೊಳದ ಸರ್ಕಾರಿ ಬಾಲಕ ಬಾಲಮಂದಿರ ಅಧೀಕ್ಷಕರನ್ನು ಸಂಪರ್ಕಿಸಲು ತಿಳಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಎಂ.ರೇಖಾ

Girl Child Protection by Police at Bhadravathi in Shivamogga grg

ಶಿವಮೊಗ್ಗ(ಸೆ.02):  ಪೊದೆಯಲ್ಲಿ ಬಿಟ್ಟು ಹೋಗಿದ್ದ ಹೆಣ್ಣು ಮಗುವನ್ನ ಸ್ಥಳೀಯರು ರಕ್ಷಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ಸೇತುವೆ ಪಕ್ಕದ ಪೊದೆಯೊಂದರಲ್ಲಿ ಪುಟ್ಟ ಹೆಣ್ಣು ಮಗುವೊಂದು ಪತ್ತೆಯಾಗಿತ್ತು. ಯಾರೋ ಮಗುವನ್ನು ಪೊದೆಯಲ್ಲಿ ಬಿಟ್ಟು ಹೋಗಿದ್ದರು. 

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿ ರಕ್ಷಿಸಿದ್ದಾರೆ. ಪೊಲೀಸರು ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಐದಾರು ತಿಂಗಳ ಸೀಳುತುಟಿ ಹೊಂದಿರುವ ಹೆಣ್ಣು ಮಗುವನ್ನು ಡಿಸಿಪಿಯು ಘಟಕ ಮತ್ತು ಭದ್ರಾವತಿ ಹಳೇ ನಗರ ಪೊಲೀಸ್ ಠಾಣಾಧಿಕಾರಿಗಳು ರಕ್ಷಿಸಿದ್ದಾರೆ.  

ತೀ​ರ್ಥ​ಹ​ಳ್ಳಿಯಲ್ಲಿ ಅಪರೂಪದಲ್ಲೇ ಅಪರೂಪವಾದ ಕೆನ್ನಾಯಿ ಗುಂಪು ಪ್ರತ್ಯಕ್ಷ!

ಮಗುವಿನ ಮುಂದಿನ ಪುನರ್ವಸತಿ ಹಿತದೃಷ್ಟಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪಾಲಕರ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿ ನೀಡಲು ಸೂಚನೆ ನೀಡಲಾಗಿದೆ. ಶಿವಮೊಗ್ಗ ಆಲ್ಗೊಳದ ಸರ್ಕಾರಿ ಬಾಲಕ ಬಾಲಮಂದಿರ ಅಧೀಕ್ಷಕರನ್ನು ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಎಂ.ರೇಖಾ ಅವರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios