ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇಗುಲ ಬಂದ್
ಐತಿಹಾಸಿಕ ಸುಬ್ರಹ್ಮಣ್ಯ ದೇಗುಲ ಬಂದ್ ಮಾಡಲಾಗಿದೆ. ದೇಗುಲ ಬಂದ್ ಮಾಡಲು ಕಾರಣವೇನು..?
ದೊಡ್ಡಬಳ್ಳಾಪುರ (ಅ.22): ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಬಂದ್ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಘಾಟಿ ಸುಬ್ರಮಣ್ಯ ದೇವಾಲಯವಿದೆ.
ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿ ಅಟ್ಟಹಾಸ ಇದೀಗ ದೇಗುಲ ಸಿಬ್ಬಂದಿಗೂ ಬಿಟ್ಟಿಲ್ಲ. ದೇವಾಲಯದ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಮದಿದೆ.
ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಎರಡು ದಿನಗಳಿಂದ ದೇವಾಲಯ ಬಂದ್ ಮಾಡಲಾಗಿದೆ. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಕೊರೋನಾ ಅಟ್ಟಹಾಸ: ಮಾಸ್ಕ್ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಭಾರೀ ಸ್ಪಂದನೆ .
ಎರಡು ದಿನಗಳ ಕಾಲ ದೇವಾಯಕ್ಕೆ ಭಕ್ತರಿಗೆ ಪ್ರವೇಶ ಇರುವುದಿಲ್ಲ ಎಂದು ಸುವರ್ಣನ್ಯೂಸ್.ಕಾಂ ಗೆ ದೇವಾಸ್ಥಾನದ ಸಿಬ್ಬಂದಿ ತಿಳಿಸಿದ್ದಾರೆ.
ಕೊರೋನಾ ಮಹಾಮಾರಿ ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈಗಾಗಲೇ ಲಕ್ಷ ಲಕ್ಷ ಸಂಖ್ಯೆ ಜನರು ಇದಕ್ಕೆ ತುತ್ತಾಗಿದ್ದಾರೆ. ಸಾವಿರಾರು ಮಂದಿಯನ್ನು ಮಹಾಮಾರಿ ಬಲೆಪಡೆದುಕೊಂಡಿದೆ.