Asianet Suvarna News Asianet Suvarna News

ಇನ್ನು ನಮ್ಮ ಮೆಟ್ರೋ ರೈಲು ಟಿಕೆಟ್‌ ಸ್ಮಾರ್ಟ್‌ಫೋನ್‌ನಲ್ಲೇ ಲಭ್ಯ

ನಮ್ಮ ಮೆಟ್ರೋ ರೈಲು ಟಿಕೆಟ್‌ಗಳನ್ನು ಇನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಬುಕ್ ಮಾಡಬಹುದು. ಹೇಗಂತೀರಾ ಇಲ್ಲಿದೆ ನೋಡಿ.

Get QR-based Namma Metro tickets soon in your smartphones
Author
Bengaluru, First Published Oct 10, 2018, 6:06 PM IST
  • Facebook
  • Twitter
  • Whatsapp

ಬೆಂಗಳೂರು, [ಅ.10]: ಬೆಂಗಳೂರಿನ ಹೊಸತೊಂದು ಹಿರಿಮೆಯ ಗರಿಯಾಗಿರುವ ಮೆಟ್ರೋ ರೈಲು ಸಂಪರ್ಕ ದಿನಗಳೆದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ವಿಸ್ತಾರವನ್ನು ಹಂತ-ಹಂತವಾಗಿ ಹೆಚ್ಚಿಸಿಕೊಳ್ಳುತ್ತಿದೆ.

ಈಗಾಗಲೇ ಜನರ ಹೃದಯವನ್ನು ಗೆದ್ದಿರುವ ನಮ್ಮ ಮೆಟ್ರೋ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ಮೆಟ್ರೋ ಟಿಕೆಟ್‌ಗಾಗಿ ಉಂಟಾಗುವ ಜನದಟ್ಟಣೆಯನ್ನು ಕಡಿಮೆ ಮಾಡಲು ಬಿಎಂಆರ್‌ಸಿಎಲ್‌ ವಿನೂತನ ಸೌಲಭ್ಯಗಳನ್ನು ಜಾರಿಗೆ ತರುತ್ತಿದೆ.

ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! 6 ಬೋಗಿ ಮೆಟ್ರೋಗೆ ಸಿಕ್ತು ಚಾಲನೆ

ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಕೊಳ್ಳುವುದನ್ನು ತಪ್ಪಿಸಲು ಮೆಟ್ರೋ ಕಾರ್ಡ್ ಜಾರಿಗೆ ತರಲಾಗಿತ್ತು. ಇದೀಗ ಮತ್ತೊಂದು ಕ್ಯೂಆರ್‌ ಕೋಡ್‌ ಆಧರಿತ ಟಿಕೆಟ್‌ಗಳನ್ನು ಪರಿಚಯಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ.

ಪ್ರಯಾಣಿಕರು ಮೊಬೈಲ್ ಆ್ಯಪ್‌ ಬಳಸಿ ಹೊರಡುವ ಸ್ಥಳ, ತಲುಪುವ ಸ್ಥಳ, ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ ಟಿಕೆಟ್‌ ಪಡೆಯಬಹುದು. ಆ್ಯಪ್‌ ನಲ್ಲಿ ಕ್ಯೂಆರ್‌ ಕೋಡ್‌ ಕಾಣಿಸುತ್ತದೆ. ಅದನ್ನು ಮೆಟ್ರೋ ನಿಲ್ದಾಣಗಳ ಕ್ಯೂಆರ್‌ ಎನೇಬಲ್ಡ್‌ ಸ್ವಯಂಚಾಲಿತ ಫೇರ್‌ ಕಲೆಕ್ಷನ್‌ ಗೇಟುಗಳಲ್ಲಿ ಪ್ರದರ್ಶಿಸಬಹುದು. 

ಇದು ಜಾರಿಯಾದಲ್ಲಿ ಪ್ರಯಾಣಿಕರು ಪ್ಲಾಸ್ಟಿಕ್‌ ಸ್ಮಾರ್ಟ್‌ ಕಾರ್ಡ್‌ಗಳನ್ನು ಒಯ್ಯುವ ಅಥವಾ ಟಿಕೆಟ್‌ ರೀಚಾರ್ಜ್‌ಗಾಗಿ, ಟೋಕನ್‌ಗಾಗಿ ಕ್ಯೂ ನಿಲ್ಲುವ ಅಗತ್ಯವಿಲ್ಲ. ಮುಖ್ಯವಾಗಿ ಟೈಮ್ ಉಳಿತಾಯ ಆಗುತ್ತದೆ.

ಮೆಟ್ರೋ ನಿಲ್ದಾಣಗಳಲ್ಲಿ 2015ರಲ್ಲೇ ಎಎಫ್‌ಸಿ ಗೇಟುಗಳ ವ್ಯವಸ್ಥೆ ಅಳವಡಿಸಲಾಗಿತ್ತು. ಆದರೆ ಅವುಗಳಲ್ಲಿ ಕ್ಯೂಆರ್ ಟಿಕೆಟ್‌ಗಳನ್ನು ಸ್ವೀಕರಿಸುವ ವ್ಯವಸ್ಥೆ ಇರಲಿಲ್ಲ. ಈಗಿರುವ ವ್ಯವಸ್ಥೆಯನ್ನು ವರ್ಷದೊಳಗೆ ಮೇಲ್ದರ್ಜೆಗೇರಿಸುತ್ತೇವೆ. ಇದರಿಂದ ಪ್ರಯಾಣಿಕರು ಸ್ಮಾರ್ಟ್‌ಫೋನ್ ಮೂಲಕವೇ ಟಿಕೆಟ್‌ ಖರೀದಿಸಲು ನೆರವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಆಡಳಿತ ನಿರ್ದೇಶಕ ಅಜಯ್ ಸೇಥ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಸ್ಮಾರ್ಟ್‌ಫೋನ್ ಮೂಲಕ ಟಿಕೆಟ್‌ ವ್ಯವಸ್ಥೆಯನ್ನು ದೆಹಲಿಯ ಏರ್ಪೋಟ್ ಮಾರ್ಗದ ಮೆಟ್ರೋಗೆ ಪರಿಚಯಿಸಲಾಗಿದೆ ಎಂದು ಸೇಥ್ ತಿಳಿಸಿದರು. 
 

Follow Us:
Download App:
  • android
  • ios