ಬಡವರು ಇರುವಲ್ಲಿ ಸೇಂಟ್‌ ಮಿಲಾಗ್ರಿಸ್‌ ಕ್ರೆಡಿಟ್‌ ಸೌಹಾರ್ದದ ಜಾರ್ಜ್‌ ಫರ್ನಾಂಡಿಸ್‌ ಇರುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಬೇಕು ಎನ್ನುವುದು ಅವರ ನಿಲುವು. ಸಮಾಜ ಸೇವೆಗೆ ಮಾದರಿಯಾಗಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. 

ಕಾರವಾರ (ಆ.14): ಬಡವರು ಇರುವಲ್ಲಿ ಸೇಂಟ್‌ ಮಿಲಾಗ್ರಿಸ್‌ ಕ್ರೆಡಿಟ್‌ ಸೌಹಾರ್ದದ ಜಾರ್ಜ್‌ ಫರ್ನಾಂಡಿಸ್‌ ಇರುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಬೇಕು ಎನ್ನುವುದು ಅವರ ನಿಲುವು. ಸಮಾಜ ಸೇವೆಗೆ ಮಾದರಿಯಾಗಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಸೇಂಟ್‌ ಮಿಲಾಗ್ರಿಸ್‌ ಸೌಹಾರ್ದ ಕ್ರೆಡಿಟ್‌ ಸೊಸೈಟಿ ಏರ್ಪಡಿಸಿದ್ದ ವಿಶೇಷ ಚೇತನ ಮಕ್ಕಳಿಗೆ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.

ಹಣ ಬಹುತೇಕ ಜನರಲ್ಲಿ ಇರುತ್ತದೆ. ಎಲ್ಲರೂ ಹಣ ಗಳಿಸುತ್ತಾರೆ. ಆದರೆ ಬಡವರು, ನೊಂದವರ ಅವಶ್ಯಕತೆಗೆ ಹಣ ನೀಡುವವರು ಕೆಲವರು ಮಾತ್ರ. ಆ ಸಾಲಿನಲ್ಲಿ ಪ್ರಮುಖವಾಗಿ ಜಾರ್ಜ್‌ ಫರ್ನಾಂಡಿಸ್‌ ನಿಲ್ಲುತ್ತಾರೆ. ವಿಶೇಷ ಚೇತನರು ಎಂದರೆ ದೇವರ ಮಕ್ಕಳಿದ್ದಂತೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಸಂಪೂರ್ಣ ಸಮಾಜದ ಜವಾಬ್ದಾರಿ. ನಮ್ಮ ಊರಿನ ಸೇಂಟ್‌ ಮಿಲಾಗ್ರಿಸ್‌ ಸೊಸೈಟಿ ದೇಶವ್ಯಾಪಿ ವಿಸ್ತರಿಸಲಿ ಎಂದು ಹಾರೈಸಿದರು.

Uttara Kannada; ಸಾವಿರಾರು ವಿದ್ಯಾರ್ಥಿಗಳಿಂದ ತ್ರಿವರ್ಣ ಧ್ವಜ ಅಭಿಯಾನ

ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಕೊರೋನಾ ಸಮಯದಲ್ಲಿ ಮಾನವೀಯತೆ ಎಂದರೆ ಏನು ಎನ್ನುವುದು ಜನತೆಗೆ ಅರಿವಾಗಿದೆ. ಆ ಸಂದರ್ಭದಲ್ಲಿ ಸೇಂಟ್‌ ಮಿಲಾಗ್ರಿಸ್‌ ಸೊಸೈಟಿಗೆ ನೊಂದವರಿಗೆ ನೆರವಾಗಿದ್ದು ಸ್ತುತ್ಯಾರ್ಹ ಎಂದರು. ನಗರಸಭೆ ಅಧ್ಯಕ್ಷ ಡಾ.ನಿತಿನ್‌ ಪಿಕಳೆ ಮಾತನಾಡಿ, ಜಾರ್ಜ್‌ ಫರ್ನಾಂಡಿಸ್‌ ಕೇವಲ ಬ್ಯಾಂಕಿಂಗ್‌ ಉದ್ಯಮದಲ್ಲಷ್ಟೇ ಅಲ್ಲ, ಎಲ್ಲ ಜನಪರ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡು ಮುಂಚೂಣಿಯಲ್ಲಿದ್ದಾರೆ ಎಂದು ಶ್ಲಾಘಿಸಿದರು.

ಬಿಷಪ್‌ ಹೌಸ್‌ ನಿರ್ದೇಶಕ ಫಾ.ನಿರ್ಮಲಕುಮಾರ ಮಿರಾಂಡ, ಸೇಂಟ್‌ ಮಿಲಾಗ್ರಿಸ್‌ ಕಾರ್ಯವನ್ನು ಪ್ರಶಂಸಿಸಿದರು. ನಿವೃತ್ತ ಪ್ರಾಚಾರ್ಯ ಮಹೇಶ ಗೋಳಿಕಟ್ಟೆ, ಗಣ್ಯರಾದ ಕೆ.ಡಿ. ಪೆಡ್ನೇಕರ ಇದ್ದರು. ಸೇಂಟ್‌ ಮಿಲಾಗ್ರಿಸ್‌ ಕ್ರೆಡಿಟ್‌ ಸೌಹಾರ್ದದ ಅಧ್ಯಕ್ಷೆ ರೋಸಲಿನಾ ಫರ್ನಾಂಡಿಸ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಎಲ್ಲ ನೌಕರರಿಗೆ ರಾಷ್ಟ್ರ ಧ್ವಜ ವಿತರಿಸಲಾಯಿತು.

ಭಟ್ಕಳ: ಹೊಸ್ಮಕ್ಕಿ ರಸ್ತೆ ನಡುವೆ 60 ಅಡಿ ಬಾವಿ ನಿರ್ಮಾಣ, ಹೆಚ್ಚಿದ ಕೌತುಕ

ರಾಜ್ಯಾದ್ಯಂತ ವಿಶೇಷ ಚೇತನರಿಗೆ ಚಾದರ ವಿತರಣೆ: ಸೇಂಟ್‌ ಮಿಲಾಗ್ರಿಸ್‌ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಫರ್ನಾಂಡಿಸ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸೊಸೈಟಿ ರಾಜ್ಯಾದ್ಯಂತ 111 ಶಾಖೆಗಳನ್ನು ಹೊಂದಿದೆ. 1,100 ಕೋಟಿ ಠೇವಣಿ ಹೊಂದಿದೆ. ಆ ಮೂಲಕ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಕೋವಿಡ್‌ ಸಮಯದಲ್ಲಿ 5 ಲಕ್ಷನ್ನು ಸರ್ಕಾರಕ್ಕೆ ದೇಣಿಗೆ ನೀಡಲಾಗಿದೆ. ರಾಜ್ಯದೆಲ್ಲೆಡೆ ಕೋವಿಡ್‌ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಗಿತ್ತು. ಸುಮಾರು .16.5 ಲಕ್ಷಕ್ಕೂ ಹಣವನ್ನು ಕೋವಿಡ್‌ ಸಂದರ್ಭದಲ್ಲಿ ಸಮಾಜಕ್ಕಾಗಿ ವಿನಿಯೋಗಿಸಲಾಗಿದೆ. ಈ ಬಾರಿ ರಾಜ್ಯದ ವಿವಿಧೆಡೆ 3 ಸಾವಿರ ವಿಕಲಚೇತನ ಹಾಗೂ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಕೊಲ್ಲಾಪುರ ಚಾದರವನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.