Asianet Suvarna News Asianet Suvarna News

ಗದಗ: ಬಡವರಿಗೆ ಜಾಗ ದಾನ ಮಾಡಲು ಮುಂದಾದ ವ್ಯಕ್ತಿಗೆ ಗವಿಮಠದ ಶ್ರೀಗಳಿಂದ ಸನ್ಮಾನ

ಗವಿಮಠದ ಶ್ರೀಗಳು ಈ ಬಾರಿಯ ಸಾಧಕರನ್ನ ಗುರುತಿಸುವ ಹಂತದಲ್ಲಿ ಹಲವರ ಸಲಹೆ ಪಡೆದಿದ್ರು. ಗದಗನ ನಾಗರಾಜ್ ಅವರಿಂದ ದ್ಯಾಮಣ್ಣ ಸಾಧನೆ ಬಗ್ಗೆ ಮಾಹಿತಿ ಪಡಿಸಿದ್ರು. ನಂತ್ರ, ಸುವರ್ಣ ನ್ಯೂಸ್ ನಲ್ಲಿ ಬಂದಿದ್ದ ವೆಬ್ ವರದಿಯನ್ನ ನೋಡಿ, ಸನ್ಮಾನ ಮಾಡೋದಾಗಿ ಇಚ್ಛೆ ವ್ಯಕ್ತಪಡಿಸಿದ್ರು

Gavi Matha Shri Honored to Man Who Came Forward to Donate Land to the Poor grg
Author
First Published Jan 11, 2023, 1:25 PM IST

ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ(ಜ.11): ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ದ್ಯಾಮಣ್ಣ ನೀರಲಿಗಿ ಅವರಿಗೆ ಕೊಪ್ಪಳದ ಗವಿ ಮಠದ ಶ್ರೀಗಳು ಗೌರವಿಸಿ ಸನ್ಮಾನಿಸಿದ್ದಾರೆ. ಸುಪ್ರಸಿದ್ಧ ಗವಿಮಠದ ಜಾತ್ರಾಮಹೋತ್ಸವದ ಅಂಗವಾಗಿ ಇತ್ತೀಚೆಗೆ ಮಠದ ಕೈಲಾಸ ಮಂಟಪದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಗಿದೆ. ಈ ಬಾರಿ ಆರು ಸಾಧಕರನ್ನ ಗುರುತಿಸಿ ಸನ್ಮಾನ ಮಾಡಲಾಗಿದೆ. ಅದ್ರಲ್ಲಿ ಸೂರಣಗಿ ದ್ಯಾಮಣ್ಣ ನೀರಲಗಿಯವರಿಗೂ ಗೌವಿ ಶ್ರೀಗಳ ಆಶೀರ್ವಾದದ ರೂಪದ ಸನ್ಮಾನ ದೊರೆತಿದೆ. ಕಾರ್ಯಕ್ರಮದಲ್ಲಿ ದ್ಯಾಮಣ್ಣ ಅವರನ್ನ ಶ್ರೀಗಳು ಪರಿಚಯಿಸ್ತಿದ್ರೆ ಪಕ್ಕದಲ್ಲೇ ಅಳವಿಡಿಸಿದ್ದ ಎಲ್ ಇಡಿಗಳಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ವೆಬ್‌ನಲ್ಲಿ ಪ್ರಸಾರವಾದ ಕ್ಲಿಪ್ ಪ್ಲೇ ಮಾಡ್ಲಾಗಿತ್ತು. ಆಕ್ಟೋಬರ್ ತಿಂಗಳಲ್ಲಿ ದ್ಯಾಮಣ್ಣ ಅವರ ಸ್ಟೋರಿಯನ್ನ ಸುವರ್ಣ ನ್ಯೂಸ್ ವೆಬ್ ಬಿತ್ತರಿಸಿತ್ತು. 

ವಿಶೇಷ ವ್ಯಕ್ತಿ ಬಗ್ಗೆ ಮಾಹಿತಿ ಪಡೆದು ಸನ್ಮಾನ 

ಗವಿಮಠದ ಶ್ರೀಗಳು ಈ ಬಾರಿಯ ಸಾಧಕರನ್ನ ಗುರುತಿಸುವ ಹಂತದಲ್ಲಿ ಹಲವರ ಸಲಹೆ ಪಡೆದಿದ್ರು. ಗದಗನ ನಾಗರಾಜ್ ಅವರಿಂದ ದ್ಯಾಮಣ್ಣ ಸಾಧನೆ ಬಗ್ಗೆ ಮಾಹಿತಿ ಪಡಿಸಿದ್ರು. ನಂತ್ರ, ಸುವರ್ಣ ನ್ಯೂಸ್ ನಲ್ಲಿ ಬಂದಿದ್ದ ವೆಬ್ ವರದಿಯನ್ನ ನೋಡಿ, ಸನ್ಮಾನ ಮಾಡೋದಾಗಿ ಇಚ್ಛೆ ವ್ಯಕ್ತಪಡಿಸಿದ್ರು. ಅದ್ರಂತೆ ಮಠದಿಂದ ದ್ಯಾಮಣ್ಣ ಅವರಿಗೆ ಬುಲಾವ್‌ ಬಂದಿದ್ದು, ಇತ್ತೀಚೆಗೆ ಶ್ರೀಗಳ ಸಮ್ಮುಖದಲ್ಲಿ ದ್ಯಾಮಣ್ಣ ಅವರಿಗೆ ಸನ್ಮಾನಿಸಲಾಗಿದೆ. 

ಸಿದ್ದೇಶ್ವರ ಶ್ರೀಗಳು ಪ್ರಶಸ್ತಿ, ಪ್ರಚಾರ ಬಯಸದ ಅಪರೂಪದ ಸಂತರು: ಎಸ್‌.ವಿ. ಸಂಕನೂರ

ಅಗಲಿದ ಕಂದನ ಹೆಸರಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾದ ದ್ಯಾಮಣ್ಣ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ದ್ಯಾಮಣ್ಣ ನೀರಲಗಿ ಹಾಗೂ ಜ್ಯೋತಿ ನೀರಲಗಿ ಅನ್ನೋ ದಂಪತಿ, ಗ್ರಾಮದಲ್ಲಿ ಜೀವನ್ ಹೆಸರಿನ ಲೇಔಟ್ ನಿರ್ಮಾಣ ಮಾಡ್ತಿದಾರೆ. ಲೇಔಟ್ ನಲ್ಲಿ ಸುಮಾರು 40 ಸೈಟ್ ನಿರ್ಮಿಸಿ ಬಡವರಿಗೆ ವಸತಿ ರಹಿತರಿಗೆ ಉಚಿತವಾಗಿ ದಾನ ಮಾಡ್ಬೇಕು ಅನ್ಕೊಂಡಿದಾರೆ. ಈ ಮೂಲಕ ಬಾಲ್ಯದಲ್ಲೇ ಇಹ ಲೋಕ ತೆಜಿಸಿದ ಕಂದಮ್ಮ 'ಜೀವನ್' ಹೆಸರನ್ನ ಗ್ರಾಮಸ್ಥರು ಶ್ವಾಶ್ವತವಾಗಿ ನೆನಪ್ಪಿಟ್ಟುಕೊಳ್ಳುವಂತೆ ಮಾಡ್ತಿದಾರೆ.. ಅಲ್ಪಾಯುವಾಗಿದ್ದ ಜೀವನ್ 6 ವರ್ಷದ ವಯೋಮಾನದಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಜೀವನದ ಪಯಣ ಮುಗಿಸಿದ್ದ.. ಮದ್ವೆಯಾಗಿ ಎಂಟು ವರ್ಷದ ಬಳಿಕ ಜೀವನ್ ಹುಟ್ಟಿದ್ದು.. ಕಂದನ ಆಗಮನದಿಂದ ನೀರಲಗಿ ಕುಟುಂಬ ಸಂತೋಷದಲ್ಲಿತ್ತು.. ಒಂದು ವರ್ಷ ಆರೋಗ್ಯವಾಗಿದ್ದ ಜೀವನ್ ನಂತ್ರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ.. 2019 ಡಿಸೆಂಬರ್ 21 ರಂದು ಮೆದುಳು ಜ್ವರದಿಂದ ಮಗು ತೀರಿಹೋಗಿತ್ತು. ಮಗುವಿನ ಟ್ರೀಟ್ಮೆಂಟ್ ಗೆ ಅಂತಾ ಮಾಡಿದ್ದ ಸಾಲವನ್ನ ಮೂರು ಎಕರೆ ಜಮೀನು ಮಾರಾಟ ಮಾಡಿ, ದ್ಯಾಮಣ್ಣ ನೀರಲಗಿ ತೀರಿಸಿದ್ದಾರೆ. ಸದ್ಯ ಇರೋ ಐದು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ ಲೇಔಟ್ ಮಾಡಿ ದಾನ ಮಾಡ್ಬೇಕು ಅನ್ನೋ ಕನಸ್ಸು ಕಟ್ಕೊಂಡಿದಾರೆ.. ಒಂದು ಮಗುವನ್ನ ದತ್ತು ಪಡೆದು ಸಾಕೋದಕ್ಕಿಂತ, ಕಡುಬಡವರ ಕನಸ್ಸಿನ ಮನೆಗೆ ಜಾಗ ಕೊಟ್ಟು ಅವರ ಮಕ್ಕಳಲ್ಲಿ ಜೀವನ್ ಪ್ರತಿರೂಪ ಕಾಣ್ಬೇಕು ಅನ್ನೋದು ನೀರಲಗಿ ಕುಟುಂಬದ ಆಶಯ. 

ಡಿ. 21 ರಂದು ಮಗುವಿನ ಮೂರನೇ ಪುಣ್ಯ ಸ್ಮರಣೆ ದಿನದಂದೇ ಗ್ರಾಮದ ವಸತಿ ರಹಿತ 40 ಕುಟುಂಬಗಳಿಗೆ ನಿವೇಶನ ನೀಡೋ ಯೋಜನೆಯನ್ನ ದ್ಯಾಮಣ್ಣ ಹಾಕ್ಕೊಂಡಿದ್ರು. ಆದ್ರೆ, ಎನ್ ಎ ಆಗದ ಕಾರಣ ತಡವಾಗಿದೆ. ಎನ್ ಎ ಪ್ರಿಕ್ರಿಯೆ ಆರಂಭವಾಗಿದೆ.. ಶೀಘ್ರದಲ್ಲಿ 20 ಫಲಾನುಭವಿಗಳಿಗೆ ಸೈಟ್ ಹಂಚಿಕೆಯಾಗಲಿದೆ ಅಂತಾ ದ್ಯಾಮಣ್ಣ ತಿಳಿಸಿದ್ದಾರೆ.. ಸರ್ವೇ ನಂಬರ 224/1ರಲ್ಲಿ ಎರಡು ಎಕರೆ ಜಾಗ ಇದೆ. ಅದ್ರಲ್ಲಿ 1 ಎಕರೆ ಜಾಗದಲ್ಲಿ 18/30 ವಿಸ್ತೀರ್ಣದ 40 ಸೈಟ್ ನಿರ್ಮಾಣ ಮಾಡೋದಕ್ಕೆ ದ್ಯಾಮಣ್ಣ ಮುಂದಾಗಿದಾರೆ. ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲೇ ಅರ್ಹರ ಆಯ್ಕೆಯಾಗಿದೆ. ಉಳಿದಂತೆ ಗ್ರಾಮದ ಮಹಿಳಾ ಸಂಘ, ಯುವಕ ಮಂಡಳ, ದೇವಸ್ಥಾನಕ್ಕೂ ಜಾಗವನ್ನ ಮೀಸಲಿಡಲಾಗಿದೆ. 
ಸಾಕಷ್ಟು ಜಾಗ ಇದ್ರೂ ತುಂಡು ಭೂಮಿಗಾಗಿ ಜಗಳ ಮಾಡೋ ಜನರ ಮಧ್ಯೆ ದ್ಯಾಮಣ್ಣ ಕುಟುಂಬ ಭಿನ್ನವಾಗಿ ನಿಲ್ಲುತ್ತೆ. ದತ್ತು ಪಡೆದು ಒಂದು ಮಗುವಿಗೆ ಬೆಳಕು ಆಗೋದಕ್ಕಿಂತ ಹತ್ತಾರು ಕುಟುಂಬಕ್ಕೆ ಜಾಗ ದಾನ ಮಾಡಿ ಕನಸ್ಸಿನ ಸೂರು ಕಲ್ಪಿಸಲು ಮುಂದಾಗ್ತಿರೋದು ಅಭಿನಂದನಾರ್ಹ. ಗವಿಮಠದ ಶ್ರೀಗಳು ದ್ಯಾಮಣ್ಣ ಸನ್ಮಾನ ಮಾಡಿದ್ದು ಗದಗ ಜಿಲ್ಲೆಯ ಜನರಿಗೂ ಸೂರಣಗಿ ಗ್ರಾಮಸ್ಥರಿಗೂ ಖುಷಿ ತಂದಿದೆ. 

Follow Us:
Download App:
  • android
  • ios