Asianet Suvarna News Asianet Suvarna News

ಸಿದ್ದೇಶ್ವರ ಶ್ರೀಗಳು ಪ್ರಶಸ್ತಿ, ಪ್ರಚಾರ ಬಯಸದ ಅಪರೂಪದ ಸಂತರು: ಎಸ್‌.ವಿ. ಸಂಕನೂರ

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರು ಪ್ರಶಸ್ತಿ-ಪ್ರಚಾರ ಬಯಸದ ಅಪರೂಪದ ಸಂತರಾಗಿದ್ದರು ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿ​ದ​ರು.

Siddeshwar Sri is a rare saint who does not want awards and publicity  rav
Author
First Published Jan 8, 2023, 12:14 PM IST

ಗದಗ (ಜ.8) : ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಅವರು ಪ್ರಶಸ್ತಿ-ಪ್ರಚಾರ ಬಯಸದ ಅಪರೂಪದ ಸಂತರಾಗಿದ್ದರು ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿ​ದ​ರು.

ನಗರ​ದ ಹಾಲಕೆರೆ ಮಠದ ಆನಂದಾಶ್ರಮದಲ್ಲಿ ಆಯೋಜಿಸಿರುವ ಬಸವ ಪುರಾಣ ಪ್ರವಚನ(Basava purana pravachana)ದಲ್ಲಿ ಭಾಗವಹಿಸಿ ಲಿಂ. ಸಿದ್ದೇಶ್ವರ ಶ್ರೀಗಳಿಗೆ(Siddeshwar shree) ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಬಯಸಿದರೂ ನಯವಾಗಿಯೇ ತಿರಸ್ಕರಿಸಿದ್ದ ಸಿದ್ದೇಶ್ವರ ಶ್ರೀಗಳು ಸರಳತೆ-ಸಜ್ಜನಿಕೆಗೆ ವ್ಯಾಖ್ಯಾನರಾಗಿದ್ದರು. ರಾಜ್ಯ ಸರ್ಕಾರ ಅನುದಾನ ನೀಡುವ ಬಯಕೆ ವ್ಯಕ್ತಪಡಿಸಿದರೂ ಅದನ್ನು ನಿರಾಕರಿಸಿದ ನಿರ್ಮೋಹಿಗಳಾಗಿದ್ದರು. ತಮ್ಮ ಸದ್ವಿಚಾರಗಳಿಂದ ಜನ-ಮನ ತಿದ್ದುವ ಕಾಯಕದಲ್ಲಿ ನಿರತರಾಗಿದ್ದ ಅವರ ಆದರ್ಶಗಳನ್ನು ಪಾಲಿಸುವುದು ಅವಶ್ಯಕವಾಗಿದೆ ಎಂದರು.

ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ: ಕೂಡಲಸಂಗಮದಲ್ಲಿ ಭಕ್ತರ ದಂಡು

ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ(abhinava mrityunjaya swamiji) ಮಾತ​ನಾ​ಡಿ, ಅಲ್ಲಮಪ್ರಭುವಿನ ವೈರಾಗ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ತತ್ವನಿಷ್ಠರಾಗಿ ಜೀವನ ಕ್ರಮಿಸಿದ ಸಿದ್ದೇಶ್ವರ ಶ್ರೀಗಳು ತಮ್ಮ ಅಂತಿಮ ಪತ್ರದಲ್ಲಿ ಬಯಲು ಬಯಲಾಗಿತ್ತಯ್ಯ ಎಂಬ ಶೂನ್ಯಸಂಪಾದನೆಯ ಸಿದ್ಧಾಂತವನ್ನು ಉಲ್ಲೇಖಿಸಿದ್ದರು. ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದರು.

ಬಸವಪುರಾಣ ಸಮಿತಿ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನಡೆ- ನುಡಿಗಳು ಒಂದಾಗಿದ್ದಾಗ ಮಾತ್ರ ಶ್ರೇಷ್ಠತೆಯ ಉತ್ತುಂಗವನ್ನು ತಲುಪಲು ಸಾಧ್ಯವಿದ್ದು, ಸಿದ್ದೇಶ್ವರ ಶ್ರೀಗಳು ಅಂಥ ಉತ್ತುಂಗವನ್ನು ತಲುಪಿದ ಮಹಾತ್ಮರಾಗಿದ್ದರು. ಗದುಗಿನಲ್ಲಿ 2004 ಹಾಗೂ 2013ರಲ್ಲಿ ಪ್ರವಚನ ಏರ್ಪಡಿಸಿದಾಗ ಅವರ ಒಡನಾಟ ದೊರೆತಿದ್ದು ನಮ್ಮ ಭಾಗ್ಯವಾಗಿದೆ ಎಂದು ಸ್ಮರಿಸಿದರು.

Big 3: ಇತಿಹಾಸವ ಸೃಷ್ಟಿಸಿದ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ: ವಿಜಯಪುರದ ತ್ರಿಮೂರ್ತಿಗಳ ಕಾರ್ಯ ಶ್ಲಾಘನೀಯ

ಈ ವೇಳೆ ಹಾಲಕೆರೆ ​ಶ್ರೀಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿ ಸಿದ್ದೇಶ್ವರ ಸ್ವಾಮೀಜಿಗಳನ್ನು ಸ್ಮರಿಸಿದರು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಗೌರವ ಅರ್ಪಿಸಲಾಯಿತು. ಎಸ್‌.ಪಿ. ಸಂಶಿಮಠ, ಸದು ಮದರಿಮಠ, ಕಾರ್ಯದರ್ಶಿ ವಿ.ಕೆ. ಗುರುಮಠ, ಲಿಂಗರಾಜ ಮೂಲಿಮನಿ, ಎಸ್‌.ವಿ. ಸಾಲಿಮಠ, ಈರಣ್ಣ ಬಾಳಿಕಾಯಿ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios