Asianet Suvarna News Asianet Suvarna News

ಕುಟುಂಬಕ್ಕೆ ಗೊತ್ತಿಲ್ಲದೇ ಗೌರಿ ಲಂಕೇಶ್ ಹೆಸರಲ್ಲಿ ಬರೋಬ್ಬರಿ 7 ಕೋಟಿ ಸಂಗ್ರಹ!

ಪತ್ರಕರ್ತೆ ಗೌರಿ ಲಂಕೇಶ್ ಹೆಸರಿನಲ್ಲಿ ಟ್ರಸ್ಟ್/ ಹಣ ಸಂಗ್ರಹಣೆ ಮಾಡಿದ್ದರೆ ತನಿಖೆ ಆಗಲಿ/ ಸಹೋದರ ಇಂದ್ರಜಿತ್ ಲಂಕೇಶ್ ಒತ್ತಾಯ

Gauri Lankesh brother Indrajit Lankesh spar over financial irregularities
Author
Bengaluru, First Published Dec 17, 2019, 10:27 PM IST

ಬೆಂಗಳೂರು(ಡಿ. 17)  ಗೌರಿ ಲಂಕೇಶ್ ಟ್ರಸ್ಟ್ ಮೂಲಕ ಚಂದಾ ಪಡೆದ ವಿಚಾರಕ್ಕೆ ಸಂಬಂಧಿಸಿ ಗೌರಿ ಲಂಕೇಶ್ ಸಹೋದರ  ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅನೇಕ ವಿಚಾರಗಳನ್ನು ಹೇಳಿದ್ದಾರೆ.

ನಾನು ಗೌರಿ ಲಂಕೇಶ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಏನೇ ಹೇಳಿಕೆ ಕೊಟ್ಟರೂ ಕವಿತಾ ಲಂಕೇಶ್ ಪ್ರತಿಕ್ರಿಯೆ ನೀಡ್ತಿದ್ದಾರೆ. ಇನ್ಮುಂದೆ ನನಗೆ ಮತ್ತೆ ಕವಿತಾಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಗೌರಿ ಲಂಕೇಶ್ ಟ್ರಸ್ಟ್ ಬಗ್ಗೆ ಸಾಕಷ್ಟು ಸುದ್ದಿ ಆಗುತ್ತಿದೆ. ಹಲವರು ನನಗೆ ಕರೆ ಮಾಡಿ, ಗೌರಿ ಲಂಕೇಶ್ ಟ್ರಸ್ಟ್ ಮುಖಾಂತರ ಚಂದಾ ವಸೂಲಿ ಮಾಡ್ತಿದ್ದೀರಾ ಅಂತಾ ಕೇಳ್ತಿದ್ದಾರೆ. ಯಾರು  ಕಲೆಕ್ಟ್ ಮಾಡ್ತಿದ್ದಾರೆ, ಯಾಕೆ ಕಲೆಕ್ಟ್ ಮಾಡ್ತಿದ್ದಾರೆ ಅನ್ನೋದರ ಬಗ್ಗೆ ತನಿಖೆ ಆಗ್ಬೇಕು ಎಂದು ಇಂದ್ರಜಿತ್ ಒತ್ತಾಯಿಸಿದರು.

ಒಂದು ಪಿಸ್ತೂಲ್ ಗಾಗಿ ಒಂದು ಕೋಟಿ ರೂ ಖರ್ಚು!

7 ಕೋಟಿ ಯಷ್ಟು ಚಂದಾ ವಸೂಲಿ ಮಾಡಿದ್ದಾರಂತೆ. ಗೌರಿ ಲಂಕೇಶ್ ರವರ ಅಸ್ತಿಗೂ ನನಗೂ ಸಂಬಂಧ ಇಲ್ಲ. ಗೌರಿ ಲಂಕೇಶ್ ರವರ ಹೆಸ್ರಲ್ಲಿ ಚಂದಾ ವಸೂಲಿಗೆ ಕುರಿತಂತೆ ಟ್ರಸ್ಟ್ ಮೇಲೆ ತನಿಖೆ ಅಗಬೇಕು. ಕವಿತಾ ಲಂಕೇಶ್ ಟ್ರಸ್ಟ್ ನಲ್ಲಿ ನಾನೂ ಇದ್ದೇನೆ. ಕಲೆಕ್ಟ್ ಅದ ಹಣದ ದಾಖಲೆ ನೀಡುತ್ತೇವೆ ಎಂದು ಹೇಳಿದರು.

ತಮ್ಮ ತಂದೆ ಪ್ರಾರಂಭಿಸಿದ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ಮಾಧ್ಯಮ ಆಯ್ತು, ಸಿನಿಮಾ ಆಯ್ತು ಎಂದು ನನ್ನ ಪಾಡಿಗೆ ನಾನು ಇದ್ದೇನೆ.  ಟ್ರಸ್ಟ್ ನಲ್ಲಿ ಯಾರು ಹಣ ಸಂಗ್ರಹಿಸುತ್ತಿದ್ದಾರೆ. ಇದರ ಉದ್ದೇಶ ಏನು ಎಂದು ತಿಳಿಯಬೇಕಿದೆ.

Follow Us:
Download App:
  • android
  • ios