ಉತ್ತರ ಕನ್ನಡ: ಚಾಲಕನ ನಿರ್ಲಕ್ಷ್ಯದಿಂದ ಗ್ಯಾಸ್ ಟ್ಯಾಂಕರ್ ಪಲ್ಟಿ; ಕೆಲಕಾಲ ಆತಂಕ

ಚಾಲಕನ ನಿರ್ಲಕ್ಷ್ಯದಿಂದ ಗ್ಯಾಸ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದ ಘಟನೆ ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

Gas tanker overturned due to driver's negligence at uttara kannada rav

ಕಾರವಾರ, ಉತ್ತರಕನ್ನಡ (ಮಾ.30): ಚಾಲಕನ ನಿರ್ಲಕ್ಷ್ಯದಿಂದ ಗ್ಯಾಸ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದ ಘಟನೆ ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಗ್ಯಾಸ್ ಟ್ಯಾಂಕರನ್ನು‌ ನ್ಯೂಟ್ರಲಲ್ಲಿ ಹಾಕಿ ಚಹಾ ಕುಡಿಯಲು ತೆರಳಿದ್ದ ಚಾಲಕ. ಹ್ಯಾಂಡ್ ಬ್ರೇಕ್ ಸಹ ಹಾಕದೆ ಚಾಲಕನ ನಿರ್ಲಕ್ಷ್ಯದ ವಹಿಸಿದ ಕಾರಣ ತನ್ನಷ್ಟಕ್ಕೇ ತಾನೇ ಚಲಿಸಿರುವ ಟ್ಯಾಂಕರ್ ಮುಂದೆ ಸಾಗಿ ಕಾಮತ್ ಎಕ್ಸಿಕ್ಯೂಟಿವ್ ಸಮೀಪದ  ರಸ್ತೆಯ ಪಕ್ಕದಲ್ಲಿನ ಹೊಂಡಕ್ಕೆ ಬಿದ್ದಿದೆ. ಈ ವೇಳೆ ಟ್ಯಾಂಕರ್ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿದ್ದರಿಂದ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.

ಹಾಸನ: ಏಕಾಏಕಿ ಕಾಡಾನೆ ದಾಳಿ; ರೈತನ ಸ್ಥಿತಿ ಗಂಭೀರ!

ಗ್ಯಾಸ್ ತುಂಬಿರುವ ಟ್ಯಾಂಕರ್ ಬಿದ್ದಿರೋದ್ರಿಂದ ಆತಂಕದಲ್ಲಿರುವ ಸುತ್ತಮುತ್ತಲಿನ ಜನರು. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿರುವ ಹೊನ್ನಾವರ ಪೊಲೀಸರು ಹಾಗೂ ಅಗ್ನಿಶಾಮಕ ದಳ. ಸದ್ಯಕ್ಕೆ ಯಾವುದೇ ಅನಿಲ ಸೋರಿಕೆಯಾಗಿಲ್ಲ. ಟ್ಯಾಂಕರನ್ನು ಸ್ಥಳಾಂತರ ಮಾಡಲು ಮುಂದುವರಿದ ಪ್ರಯತ್ನ ಹೊನ್ನಾವರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಕಾಳ ವಾಹನ ಸಂಚಾರ ಅಸ್ತವ್ಯಸ್ತ

Latest Videos
Follow Us:
Download App:
  • android
  • ios