Asianet Suvarna News Asianet Suvarna News

ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಪೂರೈಕೆಯೂ ಕ್ಯಾಶ್‌ಲೆಸ್‌

ಮನೆ ಮನೆಗೆ ಗ್ಯಾಸ್‌ ಸಿಲಿಂಡರ್‌ ಪೂರೈಕೆಯೂ ನಗದು ರಹಿತವಾಗಲಿದೆ. ಮನೆಗಳಿಗೆ ಗ್ಯಾಸ್‌ ಸಿಲಿಂಡರ್‌ ಪೂರೈಸುವ ಕಂಪನಿಗಳ ಪೈಕಿ ಕೇಂದ್ರ ಸರ್ಕಾರ ಸ್ವಾಮ್ಯದ ಎಚ್‌ಪಿ(ಹಿಂದೂಸ್ತಾನ್‌ ಪೆಟ್ರೋಲಿಯಂ) ಕಂಪನಿ ಕ್ಯಾಶ್‌ಲೆಸ್‌ ಡೆಲಿವರಿ ಯೋಜನೆಯನ್ನು ಜಾರಿಗೆ ತರುತ್ತಿದೆ.

Gas Cylinder supply to be cashless in mangalore
Author
Bangalore, First Published Jan 9, 2020, 12:29 PM IST

ಮಂಗಳೂರು(ಜ.09): ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಯೋಜನೆಗೆ ಪೂರಕವಾಗಿ ಮನೆ ಮನೆಗೆ ಗ್ಯಾಸ್‌ ಸಿಲಿಂಡರ್‌ ಪೂರೈಕೆಯೂ ನಗದು ರಹಿತವಾಗಲಿದೆ. ಮನೆಗಳಿಗೆ ಗ್ಯಾಸ್‌ ಸಿಲಿಂಡರ್‌ ಪೂರೈಸುವ ಕಂಪನಿಗಳ ಪೈಕಿ ಕೇಂದ್ರ ಸರ್ಕಾರ ಸ್ವಾಮ್ಯದ ಎಚ್‌ಪಿ(ಹಿಂದೂಸ್ತಾನ್‌ ಪೆಟ್ರೋಲಿಯಂ) ಕಂಪನಿ ಕ್ಯಾಶ್‌ಲೆಸ್‌ ಡೆಲಿವರಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದನ್ನು ದೇಶಾದ್ಯಂತ ಎಲ್ಲ ಎಚ್‌ಪಿ ಡೀಲರ್‌ಗಳ ಮೂಲಕ ಅನುಷ್ಠಾನಕ್ಕೆ ತರುತ್ತಿದೆ.

ಇದುವರೆಗೆ ಗ್ಯಾಸ್‌ ಸಿಲಿಂಡರ್‌ ರಿಫೀಲ್‌ ಅಥವಾ ಸಿಲಿಂಡರ್‌ ಪಡೆಯಲು ಹೆಲ್ಪ್‌ಲೈನ್‌ ಮೊರೆ ಹೋಗಬೇಕಾಗುತ್ತಿತ್ತು. ಹೆಲ್ಪ್‌ಲೈನ್‌ ಮೂಲಕ ಗ್ಯಾಸ್‌ ಏಜೆನ್ಸಿಗೆ ಕರೆ ಮಾಡಿ ಬುಕ್ಕಿಂಗ್‌ ಮಾಡಬೇಕಾಗಿತ್ತು. ನಿಗದಿತ ಅವಧಿಯಲ್ಲಿ ಮನೆ ಬಾಗಿಲಿಗೆ ಗ್ಯಾಸ್‌ ಸಿಲಿಂಡರ್‌ ಬಂದಾಗ ನಗದು ನೀಡಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ಒಬ್ಬರು ಗ್ಯಾಸ್‌ ಸಿಲಿಂಡರ್‌ಗೆ ಬುಕ್‌ ಮಾಡಿದರೂ ಅದನ್ನು ಬೇರೊಬ್ಬರಿಗೆ ನೀಡಲು ಸಾಧ್ಯವಿತ್ತು. ಅಲ್ಲದೆ ಇಲ್ಲಿ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ದುರುಪಯೋಗದ ಬಗ್ಗೆ ದೂರುಗಳೂ ಕೇಳಿಬರುತ್ತಿದ್ದವು. ಈ ಎಲ್ಲ ತೊಂದರೆ, ಆರೋಪಗಳಿಗೆ ಮುಕ್ತಿ ನೀಡಲು ಈ ಹೊಸ ಡಿಜಿಟಲ್‌ ಸೌಲಭ್ಯ ನೆರವಾಗಲಿದೆ ಎನ್ನುತ್ತಾರೆ ಎಚ್‌ಪಿ ಕಂಪನಿ ಡೀಲರ್‌ಗಳು.

ಬುಕ್ಕಿಂಗ್‌ನಲ್ಲೇ ನಗದು ಪಾವತಿ:

ಹೊಸ ಡಿಜಿಟಲ್‌ ವ್ಯವಸ್ಥೆಯಲ್ಲಿ ಬುಕ್ಕಿಂಗ್‌ ವೇಳೆಯೇ ನಗದು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅಂದರೆ, ಎಚ್‌ಪಿ ಕಂಪನಿಯ ವೆಬ್‌ಸೈಟ್‌ ಅಥವಾ ಯಾವುದೇ ಡಿಜಿಟಲ್‌ ಪೇಮೆಂಟ್‌ ವಿಧಾನದಿಂದ ಮುಂಚಿತ ಪಾವತಿಸಲು ಅವಕಾಶವಿದೆ. ಡಿಜಿಟಲ್‌ ಪೇಮೆಂಟ್‌ ವಿಧಾನದಲ್ಲಿ ಪಾವತಿಸಿದರೆ ಸಾಕಷ್ಟುಆಫರ್‌ಗಳು ಕೂಡ ಸಿಗುತ್ತವೆ. ಇದು ಎಚ್‌ಪಿ ಕಂಪನಿಯ ಆ್ಯಪ್‌ ಮೂಲಕ ಪಾವತಿಸಿದರೂ ರಿಯಾಯ್ತಿ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಗ್ರಾಹಕರಿಗೆ ಎಟಿಎಂ ಮಾದರಿಯ ಎಚ್‌ಪಿ ಗ್ಯಾಸ್‌ ಕಾರ್ಡ್‌ನ್ನು ಕೂಡ ನೀಡಲಾಗುತ್ತಿದೆ.

ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಒಂದೇ ದಿನ 2 ಬಾರಿ ರಕ್ಷಣೆ

ಬುಕ್ಕಿಂಗ್‌ ಬಳಿಕ ನಿಗದಿತ ದಿನದಂದು ಡೀಲರ್‌ಗಳು ಗ್ರಾಹಕರ ಮನೆ ಬಾಗಿಲಿಗೆ ಗ್ಯಾಸ್‌ ಸಿಲಿಂಡರ್‌ ಪೂರೈಸುತ್ತವೆ. ಈ ವೇಳೆ ತೂಕ ಮಾಪನ ಜೊತೆಗೆ ಮೊಬೈಲ್‌ ಡಿವೈಸ್‌ ಮೂಲಕ ಗ್ರಾಹಕರಲ್ಲಿರುವ ಕಾರ್ಡ್‌ನ್ನು ರೀಡ್‌(ಕ್ಯೂಆರ್‌ ಕೋಡ್‌ ಸ್ಕಾ್ಯನ್‌) ಮಾಡುತ್ತಾರೆ. ಆಗ ಗ್ರಾಹಕರು ಬುಕ್ಕಿಂಗ್‌ ವೇಳೆ ನಗದು ಪಾವತಿಸಿದ ವಿವರ ಲಭ್ಯವಾಗುತ್ತದೆ. ಮಾತ್ರವಲ್ಲ ಸರಿಯಾದ ಗ್ರಾಹಕರಿಗೆ ಸಿಲಿಂಡರ್‌ ಡೆಲಿವರಿ ಆದ ಬಗ್ಗೆ ಡೀಲರ್‌ಗಳಿಗೂ ಮಾಹಿತಿ ರವಾನೆಯಾಗುತ್ತದೆ. ಇಲ್ಲಿ ಸಿಲಿಂಡರ್‌ ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ ಎನ್ನುತ್ತಾರೆ ಡೀಲರ್‌ಗಳು.

ಕಾರ್ಡ್‌ ಮೂಲಕವೂ ಬುಕ್ಕಿಂಗ್‌

ಗ್ರಾಹಕರು ಎಚ್‌ಪಿ ಕಾರ್ಡ್‌ ಮೂಲಕವೂ ಗ್ಯಾಸ್‌ ಸಿಲಿಂಡರ್‌ ಬುಕ್ಕಿಂಗ್‌ ಮಾಡಲು ಸಾಧ್ಯವಿದೆ. ಮನೆಗೆ ಸಿಲಿಂಡರ್‌ ಡೆಲಿವರಿಗೆ ಬಂದಾಗ ಮತ್ತೊಂದು ಸಿಲಿಂಡರ್‌ಗೆ ಅಥವಾ ಪಕ್ಕದ ಮನೆಯವರು ಅವರದೇ ಎಚ್‌ಪಿ ಕಾರ್ಡ್‌ ಬಳಸಿ ಡೆಲಿವರಿ ಸಿಬ್ಬಂದಿಯಲ್ಲಿರುವ ಮೊಬೈಲ್‌ ಡಿವೈಸ್‌ ಮೂಲಕ ಬುಕ್ಕಿಂಗ್‌ ಮಾಡಿಸಿಕೊಳ್ಳಬಹುದು. ಗ್ರಾಹಕರು 30 ರು. ನೀಡಿ ಎಚ್‌ಪಿ ಕಾರ್ಡ್‌ನ್ನು ಡೀಲರ್‌ಗಳಿಂದ ಮಾಡಿಸಿಕೊಳ್ಳಬೇಕಾಗುತ್ತದೆ.

ಸ್ನೇಹಿತನ ಮೊದಲ ರಾತ್ರಿಗೆ ಸ್ನೇಹಿತರ ವಿಶ್ ! ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಕೇಂದ್ರ ಸರ್ಕಾರದ ಡಿಜಿಟಲ್‌ ಇಂಡಿಯಾ ಕಲ್ಪನೆಗೆ ಪೂರಕವಾಗಿ ಎಚ್‌ಪಿ ಗ್ಯಾಸ್‌ ವಿತರಣೆಯಲ್ಲೂ ಕ್ಯಾಶ್‌ಲೆಸ್‌ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ನಗದು ಪಾವತಿಯ ತಾಪತ್ರಯ ಇರುವುದಿಲ್ಲ. ಡಿಜಿಟಲ್‌ ಮಾಧ್ಯಮಗಳ ಮೂಲಕ ಪಾವತಿಸಿದರೆ, ಸಾಕಷ್ಟುಆಫರ್‌ಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಮಂಗಳೂರು ಎಚ್‌ಪಿ ಗ್ಯಾಸ್‌ ಡೀಲರ್‌ ಮ್ಯಾನೇಜರ್ ನೌಶೀರ್‌ ಹೇಳಿದ್ದಾರೆ.

-ಆತ್ಮಭೂಷಣ್‌

Follow Us:
Download App:
  • android
  • ios