ಆರು ತಿಂಗಳಲ್ಲಿ ಕಸ ಮುಕ್ತ ಕ್ಷೇತ್ರ : ಶಾಸಕ ಎಸ್.ಎ. ರಾಮದಾಸ್
ಮುಂದಿನ ಆರು ತಿಂಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಕಸದಿಂದ ಮುಕ್ತವಾಗಲಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ಮೈಸೂರು : ಮುಂದಿನ ಆರು ತಿಂಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಕಸದಿಂದ ಮುಕ್ತವಾಗಲಿದೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
5ನೇ ಯೋಗಕ್ಷೇಮ ಯಾತ್ರೆ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 49 ವಾರ್ಡಿನ ನೂರೊಂದು ಗಣಪತಿ ವೃತ್ತದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಬಹುದೊಡ್ಡ ಸಮಸ್ಯೆ ಆಗಿದ್ದ ಕಸಕ್ಕೆ ಸದ್ಯದಲ್ಲೇ ಮುಕ್ತಿ ದೊರೆಯುತ್ತದೆ. ಈ ತಿಂಗಳಲ್ಲಿ ಕೆಸರೆ ಪ್ಲಾಂಟ್ ತೆರೆಯುತ್ತಿದ್ದು, 200 ಟನ್ ಕಸ ಅಲ್ಲಿಗೆ ಶಿಫ್ಟ… ಆಗಲಿದೆ. ಇನ್ನು 3 ತಿಂಗಳಲ್ಲಿ ರಾಯನಕೆರೆ ಪ್ಲಾಂಟ್ ತೆರೆಯಲಿದ್ದು, ಆನಂತರ ಅಲ್ಲಿಗೆ 200 ಟನ್ ಕಸ ರವಾನೆ ಆಗಲಿದೆ. ಆಗ ಕಸದ ಹೊರೆ ತಗ್ಗಲಿದೆ ಎಂದರು.
ಕಸ ವಿಲೇವಾರಿಗೆ ಪ್ರಧಾನಿಗಳು ಪ್ರತಿ ಜಿಲ್ಲೆಗೆ ಹಣ ನೀಡಿದ್ದು, . 56 ಕೋಟಿಗಳಿಗೆ ಇಲ್ಲಿನ ಟೆಂಡರ್ ಆಗಿದೆ. ಮುಂದಿನ ಆರು ತಿಂಗಳಲ್ಲಿ ಇಲ್ಲಿನ ಕಸ ಸಿಮೆಂಟ್ ಕೈಗಾರಿಕಗೆ ಹೋಗಲಿದೆ. ಮಾತ್ರವಲ್ಲ, ಕ್ಷೇತ್ರ ವ್ಯಾಪ್ತಿಯಲ್ಲಿ 100 ಕಡೆ ಸ್ವಚ್ಛತಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರ ಕಸಮುಕ್ತ ಕ್ಷೇತ್ರ ಆಗಲಿದೆ ಎಂದು ತಿಳಿಸಿದರು.
ಕ್ಷೇತ್ರದ ಕೆಲ ಕಡೆಗಳಲ್ಲಿ ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಮಾತ್ರವಲ್ಲ, 30 ಎಂಎಲ್ಡಿ ನೀರನ್ನು ಹೆಚ್ಚುವರಿಯಾಗಿ ಕ್ಷೇತ್ರಕ್ಕೆ ತರಲಾಗುತ್ತಿದೆ. ಇದರಿಂದಾಗಿ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದರು.
ಮಹತ್ವದ ಜವಾಬ್ದಾರಿ
ಮೈಸೂರು (ಅ.14): ಟಿ. ನರಸೀಪುರ (T Narasipura) ವಿಧಾನಸಭಾ ಕ್ಷೇತ್ರವನ್ನು (Constituency) ಮುಂದಿನ ಚುನಾವಣೆಯಲ್ಲಿ (Election) ಬಿಜೆಪಿ (BJP) ಗೆಲ್ಲಿಸುವ ದೃಷ್ಟಿಯಿಂದ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಬಲಪಡಿಸಲು ಮಾಜಿ ಸಚಿವ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ (SA Ramadas) ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದರು.
ವಿದ್ಯಾರಣ್ಯಪುರಂನ ಶಾಸಕರ ಕಚೇರಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಕ್ಷೇತ್ರದ ಮುಖಂಡರೊಡನೆ ಮಾತುಕತೆ ನಡೆಸಿದರು. ಸಭೆಯಲ್ಲಿ ಟಿ. ನರಸೀಪುರ ವಿಧಾನ ಮಂಡಲದ ಬಿಜೆಪಿ (BJP) ಪದಾಧಿಕಾರಿಗಳ ಅಭಿಪ್ರಾಯಗಳನ್ನು ಆಲಿಸಿದ ಶಾಸಕರು ಮಾತನಾಡಿ, ಟಿ. ನರಸೀಪುರ ಮಂಡಲದ ಬಿಜೆಪಿಯಲ್ಲಿ ಸಂಘಟನೆಯ ಜವಬ್ದಾರಿಯನ್ನು ನನಗೆ ನೀಡಿದ್ದು ಇನ್ನು ಮುಂದೆ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಬಲಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ (Central Govt) ಯೋಜನೆಯನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡಬೇಕು ಎಂದು ತಿಳಿಸದರು.
ಬೊಮ್ಮಾಯಿ ಸಾಹೇಬ್ರು ಕ್ಯಾಪ್ಟನ್, 29 ಪ್ಲೇಯರ್ಸ್, ನೋಡುವವರು ಕರ್ನಾಟಕದ 7 ಕೋಟಿ ಜನ!
ರಾಜ್ಯ ಸಂಘಟನೆಯು ಒಂದು ಕ್ಷೇತ್ರದ ಜವಬ್ದಾರಿ ತೆಗೆದುಕೊಳ್ಳಬೇಕು. ನನಗೆ ಯಾವ ಕ್ಷೇತ್ರ ಬೇಕೋ ಆ ಕ್ಷೇತ್ರದ ಆಯ್ಕೆಯನ್ನು ಮಾಡಲು ತಿಳಿಸಿತು. ಆದರೆ ನಾನು ಯಾವ ಕ್ಷೇತ್ರ ಕಷ್ಟಕರವಾಗಿದೆ ಆ ಕ್ಷೇತ್ರವನ್ನೇ ನನಗೆ ಜವಬ್ದಾರಿ ನೀಡಲು ಕೋರಿದ ನಂತರ ಟಿ.ನರಸೀಪುರದ ಜವಾಬ್ದಾರಿ ನೀಡಿರುತ್ತಾರೆ. ಪ್ರತಿಯೊಬ್ಬರು ಟಿ. ನರಸೀಪುರ ಕ್ಷೇತ್ರವನ್ನು ಬಿಜೆಪಿ ಕ್ಷೇತ್ರವನ್ನಾಗಿಸಲು ದುಡಿಯಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ಭಾರತೀ ಶಂಕರ್, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಮೈಸೂರು ವಿಭಾಗದ ಪ್ರಭಾರಿ ಮೈ.ವಿ. ರವಿಶಂಕರ್ ಇದ್ದರು.
ಹಿಂದೆ ಸಂಪುಟ ವಿಸ್ತರಣೆ ವೇಳೆ ಅಸಮಾಧಾನಗೊಂಡಿದ್ದ ರಾಮದಾಸ್
ನಾನು ಮುಖ್ಯಮಂತ್ರಿ (CM ) ಅವರಿಗೆ ಪತ್ರ (Letter) ಕೊಟ್ಟು ಬಂದಿದ್ದೇನೆ. ಅದನ್ನು ಕೊನೆಯವರೆಗೆ ಓದಲು ಮನವಿ ಮಾಡಿದ್ದೇನೆ. ಕೆಟ್ಟದಿರಬಹುದು ಒಳ್ಳೆಯದಿರಬಹುದು ನೋವಾಗಬಹುದು. ಆದರೆ ರಾಜ್ಯದ ಹಿತದೃಷ್ಟಿಯಿಂದ ಅದನ್ನು ಬರೆದಿದ್ದೇನೆ ಎಂದು ಮೈಸೂರು (Mysuru) ಕೆಆರ್ ಕ್ಷೇತ್ರದ ಬಿಜೆಪಿ ಶಾಸಕ ಹಾಗು ಮಾಜಿ ಸಚಿವ ಎಸ್ ಎ ರಾಮದಾಸ್ ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ತೋಡಿಕೊಂಡಿದ್ದರು.
ಮೈಸೂರಿಗೆ ಸಿಎಂ ಬಂದಾಗ ಯಾಕೆ ಭೇಟಿಯಾಗಿಲ್ಲ; ಮುಚ್ಚಿದ ಲಕೋಟೆಯಲ್ಲಿ ಉತ್ತರ ಕೊಟ್ಟ ರಾಮದಾಸ್!
ನಾನು ಅಸಮಾಧಾನದಿಂದ ಸಿಎಂ ಭೇಟಿ ಮಾಡದೆ ಉಲಿದಿದ್ದಲ್ಲ. ಮುಖ್ಯಮಂತ್ರಿ ಅವರನ್ನು ಮೈಸೂರಿನಲ್ಲಿ ಯಾಕೆ ಭೇಟಿ ಮಾಡಿಲ್ಲ ಎಂಬುದರ ಬಗ್ಗೆ 6 ಪುಟಗಳ ವಿವರಾವದ ಪತ್ರ ಬರೆದಿದ್ದೆನೆ. ಸಮಾಧಾನ ಅಸಮಾಧಾನ ವಿಚಾರ ಇಲ್ಲ. ಮುಂಬರುವ 2023ರ ಚುನಾವಣೆ (2023 Election) ದೃಷ್ಟಿಯಿಂದ ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಲು ಸೂಚಿಸಿದ್ದೇನೆ ಎಂದಿದ್ದರು.