ಕಸದ ಬಗೆಗಿನ ಮನೋಭಾವ ಬದಲಾದರೆ ಕಸವೂ ರಸ : ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಯೋಜನಾ ನಿರ್ದೇಶಕ

ಕಸದ ಬಗೆಗಿನ ನಮ್ಮ ಮನೋಭಾವ ಬದಲಾದರೆ ಕಸವೂ ರಸವಾಗುತ್ತದೆ. ಚಿನ್ನದ ಬೆಲೆ ತರುತ್ತದೆ ಎಂದು ಭಾರತ ಸರ್ಕಾರದ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸ್ ತಿಳಿಸಿದರು.

Garbage becomes juice if attitude towards garbage changes : Waste Resource Management Project Director snr

  ಮೈಸೂರು :  ಕಸದ ಬಗೆಗಿನ ನಮ್ಮ ಮನೋಭಾವ ಬದಲಾದರೆ ಕಸವೂ ರಸವಾಗುತ್ತದೆ. ಚಿನ್ನದ ಬೆಲೆ ತರುತ್ತದೆ ಎಂದು ಭಾರತ ಸರ್ಕಾರದ ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸ್ ತಿಳಿಸಿದರು.

ಕಲಾಮಂದಿರದಲ್ಲಿ ಬುಧವಾರ ಜಿಪಂ ವತಿಯಿಂದ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ- 2023 ಪ್ರಶಸ್ತಿ ಪ್ರದಾನ, ಸ್ವಚ್ಛ ಹೀ ಸೇವಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಉಡುಪಿ ಜಿಲ್ಲೆ ವಂಡ್ಸೆ ಗ್ರಾಮ ಪಂಚಾಯಿತಿಯನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಿಕೊಂಡು ಘನತ್ಯಾಜ್ಯ ನಿರ್ವಹಣೆ ಮೂಲಕ ಲಕ್ಷಾಂತರ ಆದಾಯ ಗಳಿಸುವಂತೆ ಮಾಡಿದ ಯಶಸ್ವಿ ಕಥನವನ್ನು ಅವರು ವಿವರಿಸಿದರು.

ಉತ್ಪತ್ತಿ ಆಗುವ ಕಸವನ್ನು ಏನೂ ಮಾಡಲು ಆಗದು. ಕಸ ನೋಡಿದಾಗ ನಮಗೆ ಕಿರಿಕಿರಿ ಆಗುತ್ತದೆ. ಕಸವನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಶೇ. 60ರಷ್ಟು ಸಾbfiz ಕಾರಣವಾಗಿದೆ. ನಾವು ಎಸೆದ ಕಸದಲ್ಲಿ ನಮಗೆ ಕಚ್ಚುವ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತಿದೆ ಎಂದು ನಾವು ಎಂದಾದರೂ ಭಾವಿಸಿದ್ದೇವೆಯೇ? ಎಂದು ಅವರು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ಘನತ್ಯಾಜ್ಯ ನಿರ್ವಹಣೆಗೆ ಸಮುದಾಯದ ಸಹಭಾಗಿತ್ವ ಬಳಸಿಕೊಳ್ಳಬೇಕು. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಬೇಕು. ದ್ರವ ತ್ಯಾಜ್ಯ ನಿರ್ವಹಣೆ, ಬ್ಲಾಕ್ ವಾಟರ್ ಮ್ಯಾನೇಜ್ ಮೆಂಟ್ ಸಮರ್ಪಕ ರೀತಿಯಲ್ಲಿ ಜಾರಿಗೊಳಿಸಬೇಕು. ನರೇಗಾ ಮೂಲಕ ಉದ್ಯೋಗ ಕೊಡಿ. ಪ್ರತಿ ಗ್ರಾಮವನ್ನು ಶುಚಿಯಾಗಿಡಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಚಾಲನ ಪರವಾನಗಿ ವಿತರಣೆ

ಜಿಪಂ ವತಿಯಿಂದ ಚಾಲನೆ ತರಬೇತಿ ಪಡೆದ ಎಂ. ಕಾವ್ಯಾ, ಕೆ.ಎಸ್. ಕಾವ್ಯ, ಸೌಜನ್ಯಾ, ರೇಣುಕಾ, ತುಳಸಿ, ಪವಿತ್ರ ಮತ್ತು ವಿಜಿ ಅವರಿಗೆ ಚಾಲನ ಪರವಾನಗಿ (ಡಿಜಿಟಲ್ ಕಾರ್ಡ್) ವಿತರಿಸಲಾಯಿತು.

ಪ್ರಶಸ್ತಿ ಪ್ರದಾನ

ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ- 2023 ಸಮೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹುಣಸೂರು ತಾಲೂಕಿನ ಗಾವಡಗೆರೆ, ಬಿಳಿಕೆರೆ, ಬಿನ್ನಿಕುಪ್ಪೆ, ಟಿ. ನರಸೀಪುರ ತಾಲೂಕಿನ ಬೀಡನಹಳ್ಳಿ, ಗರ್ಗೇಶ್ವರಿ, ಮೈಸೂರು ತಾಲೂಕಿನ ಇಲವಾಲ, ನಾಗವಾಲ, ಸರಗೂರು ತಾಲೂಕಿನ ಇಟ್ನ, ಎಚ್.ಡಿ. ಕೋಟೆ ತಾಲೂಕಿನ ನಾಗನಹಳ್ಳಿ, ನಂಜನಗೂಡು ತಾಲೂಕಿನ ಹೊರಳವಾಡಿ ಗ್ರಾಪಂಗಳ ಅಧ್ಯಕ್ಷರು, ಪಿಡಿಒಗಳನ್ನು ಸನ್ಮಾನಿಸಲಾಯಿತು.

ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಕಲಿಕೆ ಉತ್ತೇಜಿಸುವ ಗ್ರಂಥ ಮಿತ್ರ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಚಾಲನೆ ನೀಡಿದರು.

ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಗಣೇಶ್ ಹೆಗಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವರ್ಷಗಳ ಹಿಂದೆ ಆಕಾಂಕ್ಷ ಸಂಸ್ಥೆಯಡಿ ಗ್ರಂಥಮಿತ್ರ ಯೋಜನೆ ರೂಪಿಸಿದೆವು. ಇದು ಯಶಸ್ವಿಯಾಗಿ ನಡೆದಿದೆ. ಸಾವಿರಾರು ಮಕ್ಕಳಲ್ಲಿ ಸ್ಫೂರ್ತಿ ನಡೆದಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಚೇತರಿಕೆ ಕಂಡಿದ್ದಾರೆ ಎಂದು ವಿವರಿಸಿದರು. ಮೈಸೂರಿನ ಅಮೃತ ವಿದ್ಯಾಪೀಠಂ ಸ್ವಯಂ ಸೇವಕರು ಮೈಸೂರು ಜಿಲ್ಲೆಯಲ್ಲಿ ಪ್ರತಿ ಶನಿವಾರ ಕಲಿಕೆ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸಮಾರಂಭ ಉದ್ಘಾಟಿಸಿದರು. ಜಿಪಂ ಉಪ ಕಾರ್ಯದರ್ಶಿ ಕೃಷ್ಣಂರಾಜು, ಡಿಎಚ್ಒ ಡಾ. ಕುಮಾರಸ್ವಾಮಿ ಇದ್ದರು.

ಜಿಪಂ ಸಹಾಯಕ ಕಾರ್ಯದರ್ಶಿ ಕುಲದೀಪ್ ಸ್ವಾಗತಿಸಿದರು. ಸಹಾಯಕ ಯೋಜನಾಧಿಕಾರಿ ಸುಬ್ರಮಣ್ಯ ಶರ್ಮ ವಂದಿಸಿದರು. ಆಡಳಿತ ಶಾಖೆ ಅಧೀಕ್ಷಕ ಮಹದೇವಸ್ವಾಮಿ ನಿರೂಪಿಸಿದರು.

Latest Videos
Follow Us:
Download App:
  • android
  • ios