ವಿವಿಧ ವಾರ್ಡುಗಳಲ್ಲಿ ಪೌರ ಕಾರ್ಮಿಕರು ವಾಹನಗಳ ಮೂಲಕ ಆಗಮಿಸಿದ್ದ ಸಂದರ್ಭದಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ನಾಗರಿಕರು ಸಹಕರಿಸಬೇಕೆಂದು ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಹೇಳಿದರು.

ಗಂಗಾವತಿ (ಜು.08): ನಗರದ ವಿವಿಧ ವಾರ್ಡುಗಳಲ್ಲಿ ಪೌರ ಕಾರ್ಮಿಕರು ವಾಹನಗಳ ಮೂಲಕ ಆಗಮಿಸಿದ್ದ ಸಂದರ್ಭದಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ನಾಗರಿಕರು ಸಹಕರಿಸಬೇಕೆಂದು ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಹೇಳಿದರು. ನಗರದ 3 ಮತ್ತು 4ನೇ ವಾರ್ಡ ಜಯನಗರ ಸತ್ಯನಾರಾಯಣ ಪೇಟೆಯಲ್ಲಿ ನಗರಸಭೆಯವರು ಕೈಗೊಂಡಿರುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರಸಭೆ ಪೌರ ಕಾರ್ಮಿಕರು ದಿನ ನಿತ್ಯ ಮನೆಯ ಕೆಲಸದಂತೆ ಕೆಲಸ ಮಾಡುತ್ತಾರೆ. ಘನ ತ್ಯಾಜ್ಯಗಳ ಬಗ್ಗೆ ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮೂಡಿಸುತ್ತಾರೆ. ಕಾರಣ ಸಾರ್ವಜನಿಕರು ಮನೆ ಮನೆಗೆ ವಾಹನಗಳು ಬಂದಾಗ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ತ್ಯಾಜ್ಯಗಳನ್ನು ಬೇರ್ಪಡಿಸಿ ನಗರಸಭೆಯವರು ಗುರಿತಿಸಿರುವ ಡಬ್ಬಿಗಳಲ್ಲಿ ಹಾಕಬೇಕೆಂದು ಸೂಚಿಸಿದರು. ವಾರ್ಡುಗಳಲ್ಲಿ ಖಾಲಿ ನಿವೇಶನಗಳಿದ್ದು, ಜಾಲಿ ಮುಳ್ಳುಗಳು ಬೆಳಿದಿವೆ. ಈ ಸ್ಥಳಗಳಲ್ಲಿ ವಿಷ ಜಂತುಗಳು ಸಂಚರಿಸುತ್ತಿದ್ದರಿರಂದ ಸಾರ್ವಜನಿಕರು ಭಯ ಬೀತರಾಗಿದ್ದಾರೆ. ನಗರಸಭೆಯವರು ಕ್ರಮ ಕೈಗೊಳ್ಳಬೇಕೆಂದರು.

ಮೇಲಿಂದ ಮೇಲೆ ಹಲ್ಲೆ

ಪತ್ರಕರ್ತ ರಾಮಮೂರ್ತಿ ನವಲಿ ಮಾತನಾಡಿ ನಗರಸಭೆಯ ಕಾರ್ಮಿಕರು ಆಗಮಿಸಿದ್ದ ಸಂದರ್ಭದಲ್ಲಿ ನಾಗರಿಕರು ಸಹಕರಿಸಬೇಕೆಂದು ತಿಳಿಸಿದ ಅವರು ಇತ್ತೀಚಿಗೆ ಪೌರ ಕಾರ್ಮಿಕರ ಮೇಲೆ ಮೇಲಿಂದ ಮೇಲೆ ಹಲ್ಲೆ ಘಟನೆ ನಡೆಯುತ್ತಿವೆ. ಕಾರಣ ಇಂತಹ ಘಟನೆ ಮರುಕಳಿಸದೆ ಮನೆ ಮನೆಗೆ ಪೌರ ಕಾರ್ಮಿಕರು ಬಂದಾಗ ಸಹಕರಿಸಬೇಕೆಂದು ತಿಳಿಸಿದರು. ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಕುರಿತು ನಗರಸಭೆಯವರು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ನಗರಸಭೆಯವರು ಪ್ರಚಾರ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸ ಬೇಕೆಂದರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅದ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅದರಂತೆ ನಗರಸಭೆಯವರು ಕೈಗೊಂಡಿರುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಸಂದರ್ಭದಲ್ಲಿ ಎಲ್ಲರು ಸಹಕರಿಸಬೇಕೆಂದರು. ಈ ವೇಳೆ ಪ್ರಮುಖರಾದ ರಾಘವೇಂದ್ರ ಮೇಗೂರು, ವಾದಿರಾಜಚಾರ ಕಲ್ಮಂಗಿ, ಮಲ್ಲಿಕಾರ್ಜುನ ಟೆಂಗಿನಕಾಯಿ, ಸಹನಾ ಮಲ್ಲಿಕಾರ್ಜುನ ಟೆಂಗಿನಕಾಯಿ, ರೇಷ್ಮಾ ಹಿರೇಮಠ, ಮಂಜುನಾಥಸ್ವಾಮಿ, ಕಮ್ಯೂನಿಟಿ ಮೊಬಲೈಜರ್ ಸಂಗೀತಾ, ಶ್ರೀದೇವಿ, ಮೇಲ್ವಿಚಾರಕಾರದ ಲಕ್ಷ್ಮಣ, ಯೂಸಫ್, ಭೋಗೇಶ ಆದಾಪುರ, ದುರಗಪ್ಪ, ಭೀಮಣ್ಣ, ಮಂಜುನಾಥ, ಕೃಷ್ಣ, ಗಂಗಮ್ಮ, ಬಸಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.