ಗೋವಾಗೆ ಬಂದ ಪ್ರವಾಸಿಗರಿಗೆ ತಲೆನೋವಾಗಿದ್ದ ಭದ್ರಾವತಿಯ ಐವರು ಅರೆಸ್ಟ್

ಗೋವಾ ಬರುತ್ತಿದ್ದ ಪ್ರವಾಸಿಗರಿಗೆ ತಲೆ ನೋವಾಗಿದ್ದ ಐವರನ್ನು ಅರೆಸ್ಟ್ ಮಾಡಲಾಗಿದೆ

Gang of mobile thieves Arrested snr

ಶಿವಮೊಗ್ಗ (ಅ.09):  ಗೋವಾದ ಹೋಟೆಲ್ , ರೆಸ್ಟೋರೆಂಟ್‌ಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಭದ್ರಾವತಿಯ ಐವರನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 25 ಮೊಬೈಲ್ , ಒಂದು ಲ್ಯಾಪ್‌ಟಾಪ್ ಸೇರಿ 5 ಲಕ್ಷ ರು.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಭದ್ರಾವತಿ ತಾಲೂಕಿನ ದೊಡೇರಿ ಗಂಗೂರು ಗ್ರಾಮದ ಕುಮಾರ್ ಕೃಷ್ಣಪ್ಪ ದೊಡೇರಿ ( 20 ) , ಡಿ.ಆರ್.ಎಸ್ . ರಾಜು ( 22 ) , ಡಿ.ಕೆ.ಎಸ್.ಕೃಷ್ಣಪ್ಪ ( 23 ) , ಡಿ.ಎಸ್.ಶ್ರೀಕಾಂತ್ ( 22 ) , ಡಿ.ಎನ್.ಎಸ್.ರಮೇಶ್ ಬಂಧಿತರು.

ಫ್ರೆಂಡ್‌ ಮನೆಯಲ್ಲೇ ಚಿನ್ನ ಕದ್ದ ಚಾಲಾಕಿ ಕಳ್ಳಿ, ಅಕೆಯ ಸ್ನೇಹಿತ ಅರೆಸ್ಟ್

 2 ತಿಂಗಳ ಹಿಂದಷ್ಟೆ ಗೋವಾಕ್ಕೆ ತೆರಳಿದ್ದ ಆರೋಪಿಗಳು ವಾಸ್ಕೊ ಜುವಾರಿನಗರ ಮತ್ತು - ಬೋಗಮೊಳಾದಲ್ಲಿ ಬಾಡಿಗೆ ಮನೆಯಲ್ಲಿದ್ದರು.  ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ತೆರಳಿ ಅಲ್ಲಿ ಚಾರ್ಜ್‌ಗೆ ಹಾಕಿರುತ್ತಿದ್ದ ಮೊಬೈಲ್ ಕದಿಯುತ್ತಿದ್ದರು.

 ಇನ್ನೂ ಕೆಲ ಹೋಟೆಲ್‌ಗಳಲ್ಲಿ ಗ್ರಾಹಕರು ಟೇಬಲ್ ಮೇಲೆ ಮೊಬೈಲ್ ಇಟ್ಟು ಕೈ ತೊಳೆಯಲು ತೆರಳಿದ್ದ  ಸಮಯದಲ್ಲೂ ಕಳ್ಳತನ ಮಾಡುತ್ತಿದ್ದರು. ಈ ಖದೀಮರ ವಿರುದ್ಧ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಐವರನ್ನು ಅರೆಸ್ಟ್ ಮಾಡಲಾಗಿದೆ. 

Latest Videos
Follow Us:
Download App:
  • android
  • ios