ಬೆಂಗಳೂರು (ಸೆ.03): ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಸೆ. 7ರಂದು ಬೆಂಗಳೂರಿನ ಉತ್ತರ ಭಾಗದ ಏರಿಯಾಗಳಲ್ಲಿ ಬಾರ್ ಬಂದ್ ಮಾಡುವಂತೆ  ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. 

 ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ಇರುವ ಹಿನ್ನೆಲೆ ಈ ಆದೇಶವನ್ನು ಹೊರಡಿಸಲಾಗಿದೆ.   ಸೆ.7ರಂದು 57 ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಐದು ಸಾವಿರ ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಮದ್ಯ ಖರೀದಿಗೆ ಕರ್ನಾಟಕದಲ್ಲಿ ಆಧಾರ್ ಕಡ್ಡಾಯ? ಕುಡುಕರ ರಕ್ಷಣೆಗೆ 6 ಸಲಹೆ

ಅಷ್ಟೇ ಅಲ್ಲದೇ ಅಹಿತಕರ ಘಟನೆ ಸಾಧ್ಯತೆ ಎಂದು ಗುಪ್ತಚರ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತವಾಗಿ ನಗರ ಪೊಲೀಸ್ ಈ ಕ್ರಮಕೈಗೊಂಡಿದೆ.

ಬೆಂಗಳೂರಿನ ಪ್ರಮುಖ ಏರಿಯಾಗಳಾದ ಆರ್ ಟಿ ನಗರ , ಸಂಜಯ್  ನಗರ , ಜೆ ಸಿ ನಗರ , ಹೆಬ್ಬಾಳ , ಡಿಜೆ ಹಳ್ಳಿ ,ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್, ವೈನ್ ಶಾಪ್ ಹಾಗು ಪಂಬ್ ಬಂದ್ ಮಾಡುವಂತೆ  ಭಾಸ್ಕರ್ ರಾವ್ ಅವರು ಇಂದು [ಮಂಗಳವಾರ] ಆದೇಶ ಹೊರಡಿಸಿದ್ದಾರೆ.

ಮೇಲೆ ಹೇಳಲಾಗಿರುವ ಏರಿಯಾಗಳಲ್ಲಿ ಸೆ.7 ಬೆಳಗ್ಗೆ 6ರಿಂದ ಸೆ.8  ಬೆಳಗ್ಗೆ 9ರ ವರೆಗೆ ಮದ್ಯ ಮರಾಟವನ್ನು ನಿಷೇಧಿಸಲಾಗಿದೆ.