*  ಹೊನ್ನಾವರದಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ*  ವಲಸಿಗರಿಂದ ಸೊರಗಿ ಹೋಗಿದ್ದ ಜೆಡಿಎಸ್‌*  ಜೆಡಿಎಸ್‌ ಮರು ಕಾಯಕಲ್ಪಕ್ಕೆ ಗಣಪಯ್ಯ ಗೌಡರ ಯತ್ನ

ಹೊನ್ನಾವರ(ಆ.11): ಉ.ಕ. ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸುವಲ್ಲಿ ಬಹುಪಾಲು ವಲಸಿಗರಿಂದ ಸೊರಗಿ ಹೋಗಿದ್ದ ಜೆಡಿಎಸ್‌ಗೆ ಹೈಕಮಾಂಡ್‌ ಮರಳಿ ಸಶಕ್ತವನ್ನಾಗಿಸುವಲ್ಲಿ ಹೊನ್ನಾವರದ ಹಿರಿಯ ಮುಖಂಡ ಗಣಪಯ್ಯ ಮಂಜು ಗೌಡ ಗುಣವಂತೆ ಅವರಿಗೆ ಜಿಲ್ಲಾಧ್ಯಕ್ಷರಾಗಿ ಪಟ್ಟ ಕಟ್ಟಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಜೆಡಿಎಸ್‌ ಮರು ಕಾಯಕಲ್ಪಕ್ಕೆ ಜಿಲ್ಲಾ ಘಟಕ ಸೇರಿದಂತೆ ಆಯಾ ತಾಲೂಕು ಘಟಕಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿ ಪಕ್ಷಕ್ಕೆ ಶಕ್ತಿ ಹೆಚ್ಚಿಸುವಲ್ಲಿ ಗಣಪಯ್ಯ ಎಂ. ಗೌಡರು ವ್ಯಾಕ್ಸಿನ್‌ ನೀಡಿದ್ದಾರೆ.

ಹೊನ್ನಾವರದ ಸೋಷಿಯಲ್‌ ಕ್ಲಬ್‌ ಹಾಲ್‌ನಲ್ಲಿ ಮಂಗಳವಾರ ಪಕ್ಷದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನು ಕೆಲ ತಾಲೂಕುಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿರುವುದಾಗಿ ತಿಳಿಸಿದ್ದಾರೆ.

ಜಿಲ್ಲಾ ಕಮೀಟಿಯ ಕಾರ್ಯಾಧ್ಯಕ್ಷರಾಗಿ ಮುಂಡಗೋಡನ ಮುನಾಫ ಮಿರ್ಜಾನಕರ್‌ ಹಾಗೂ ಕುಮಟಾದ ಸೂರಜ್‌ ನಾಯ್ಕ ಸೋನಿ, ಉಪಾಧ್ಯಕ್ಷರಾಗಿ ಪರಮೇಶ್ವರ ತಿಪ್ಪಯ್ಯ ನಾಯ್ಕ ಮೂಡ್ಕಣಿ ಹಾಗೂ ಜಿ.ಕೆ. ಪಟಗಾರ ಹುಬ್ಬಣಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ವಿ.ಎಂ. ಭಂಡಾರಿ ಹೊನ್ನಾವರ, ಖಜಾಂಚಿಯಾಗಿ ಗೋವಿಂದರಾಯ ಶ್ಯಾನಭಾಗ್‌ ಹೊಳೆಗದ್ದೆ, ಕಾರ್ಯದರ್ಶಿಯಾಗಿ ನ್ಯಾಯವಾದಿ ದತ್ತು ಎಚ್‌. ಪಟಗಾರ ಕುಮಟಾ, ಸಂಘಟನಾ ಕಾರ್ಯದರ್ಶಿಯಾಗಿ ಸುಬ್ಬಯ್ಯ ನಾರಾಯಣ ನಾಯ್ಕ ಕೂಜಳ್ಳಿ, ಮಹಾಬಲೇಶ್ವರ ಗೌಡ ಬೆಲೆಹಿತ್ಲು, ಎನ್‌.ಎಸ್‌. ಭಟ್ಟಮಣದೂರು ಶಿರಸಿ, ನಾರಾಯಣ ನಾಯ್ಕ ಶಿರಸಿ ಶಹರ, ದೀಪಕ್‌ ಶಂಕರ ರೇವಣಕರ್‌ ಶಿರಸಿ, ಸತೀಶ್‌ ಹೆಗಡೆ ಬೈಲಳ್ಳಿ ಸಿದ್ದಾಪುರ, ಮೋಹನ ಗೌಡ ಕಿಲವಳ್ಳಿ ಸಿದ್ದಾಪುರ, ಗಜಾನನ ನಾಯ್ಕ ಘಟ್ಟಿಕೈ ಕಾನಸೂರು, ಕೆ.ಬಿ. ನಾಯ್ಕ ಕಾನಳ್ಳಿ ಸಿದ್ದಾಪುರ ಅವರನ್ನು ನೇಮಕಗೊಳಿಸಲಾಗಿದೆ.

ಎಚ್‌ಡಿಡಿ ಭೇಟಿಯಾದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಹೊನ್ನಾವರ ತಾಲೂಕು ಪದಾಧಿಕಾರಿಗಳು:

ಹೊನ್ನಾವರ ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷರಾಗಿ ಸುಬ್ರಾಯ ಈರು ಗೌಡ ಕರ್ಕಿಕೋಡಿ, ಮಂಕಿ ಘಟಕದ ಅಧ್ಯಕ್ಷರಾಗಿ ಟಿ.ಟಿ. ನಾಯ್ಕ ಮೂಡ್ಕಣಿ, ಕಾರ್ಯಾಧ್ಯಕ್ಷರಾಗಿ ಗೋವಿಂದ ಶಂಭು ಗೌಡ ಹೆಬ್ಬಾರಹಿತ್ಲು ಗುಣವಂತೆ, ಉಪಾಧ್ಯಕ್ಷರಾಗಿ ನರಸಿಂಹ ತಿಮ್ಮಪ್ಪ ನಾಯ್ಕ ಬೇರಂಕಿ, ಉದಯ ತಿಮ್ಮಪ್ಪ ಗೌಡ ಹೊಸಾಡ, ಖಜಾಂಚಿಯಾಗಿ ಗಿರೀಶ ವೆಂಕಪ್ಪ ಶೆಟ್ಟಿಉಪೋ›ಣಿ, ಪ್ರಧಾನ ಕಾರ್ಯದರ್ಶಿಯಾಗಿ ಪರಮೇಶ್ವರ ಸುಬ್ರಾಯ ಗೌಡ ಕಡ್ಲೆ ಅವರನ್ನು ನೇಮಕ ಮಾಡಿದ್ದಾರೆ.

ಭಟ್ಕಳ ತಾಲೂಕು ಪದಾಧಿಕಾರಿಗಳು:

ಭಟ್ಕಳ ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷರಾಗಿ ಇನಾಯಿತುಲ್‌ ಸಾಬಂದ್ರಿ ಭಟ್ಕಳ, ಕಾರ್ಯಾಧ್ಯಕ್ಷರಾಗಿ ದೇವಯ್ಯ ನಾಯ್ಕ ಮುಟ್ಟಳ್ಳಿ, ಉಪಾಧ್ಯಕ್ಷರಾಗಿ ಪಾಂಡುರಂಗ ಜಟ್ಟಾನಾಯ್ಕ ಕಾಯ್ಕಿಣಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ಕೃಷ್ಣಾನಂದ ಪೈ ಚೌತನಿ, ಖಜಾಂಚಿಯಾಗಿ ಗಣೇಶ್‌ ಹಳ್ಳೇರ ಮುಂಡಳ್ಳಿ ಅವರನ್ನು ನೇಮಕಗೊಳಿಸಲಾಗಿದೆ.

ಜೆಡಿಎಸ್ ತೊರೆದು ಮತ್ತೆ ಮಾತೃಪಕ್ಷಕ್ಕೆ : ಕಾಂಗ್ರೆಸ್ ಸೇರಿದ ಮುಖಂಡರು

ಕುಮಟಾ ತಾಲೂಕು ಪದಾಧಿಕಾರಿಗಳು:

ಕುಮಟಾ ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷರಾಗಿ ಸಿ.ಜಿ. ಹೆಗಡೆ ಕಲ್ಲಬ್ಬೆ, ಕಾರ್ಯಾಧ್ಯಕ್ಷರಾಗಿ ಬಲೀಂದ್ರ ಕುಪ್ಪಾ ಗೌಡ ತೊರಕೆ, ಉಪಾಧ್ಯಕ್ಷರಾಗಿ ತುಳಸಿದಾಸ್‌ ವಿನಾಯಕ ಶೇಟ್‌ ಸಾಂತಗಲ್‌, ಪ್ರಧಾನ ಕಾರ್ಯದರ್ಶಿಯಾಗಿ ದತ್ತಾ ಎಚ್‌. ಪಟಗಾರ್‌ ಜೇಷ್ಟಪುರ ಅವರನ್ನು ನೇಮಕಗೊಳಿಸಲಾಗಿದೆ.

ಜೆಡಿಎಸ್‌ ಮುಖಂಡರಾದ ಶಶಿಭೂಷಣ ಹೆಗಡೆ, ಸೂರಜ್‌ ಸೋನಿ, ಪಿಟಿ ನಾಯ್ಕ, ವಿ.ಎಂ. ಭಂಡಾರಿ, ಸುಬ್ರಾಯ ಗೌಡ, ಟಿಟಿ ನಾಯ್ಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದು ಪಕ್ಷವನ್ನು ಸಂಘಟಿಸಲು ಸಲಹೆ, ರೂಪುರೇಷೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕಾ ಘಟಕಗಳ ಪದಾಧಿಕಾರಿಗಳ ಪಟ್ಟಿಬಿಡುಗಡೆಗೊಳಿಸಿ ಮಾತನಾಡಿದ ಗಣಪಯ್ಯ ಮಂಜು ಗೌಡ.