Asianet Suvarna News Asianet Suvarna News

ಎಚ್‌ಡಿಡಿ ಭೇಟಿಯಾದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

  • ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭೇಟಿ ಮಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  
  • ನವದೆಹಲಿಯ ಅವರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮಾತುಕತೆ 
BJP Leader CT Ravi meets JDS Supremo HD Devegowda snr
Author
Bengaluru, First Published Aug 11, 2021, 10:11 AM IST
  • Facebook
  • Twitter
  • Whatsapp

ನವೆದೆಹಲಿ (ಆ.11) :  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ನವದೆಹಲಿಯ ಅವರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. 

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿ.ಟಿ.ರವಿ, ತಮ್ಮ ಪಿ.ಎಚ್‌.ಡಿ ಅಧ್ಯಯನದ ಸಲುವಾಗಿ ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ. 88ರ ಹರೆಯದಲ್ಲೂ ದೇವೇಗೌಡರ ಉತ್ಸಾಹ ಮತ್ತು ಲವಲವಿಕೆ ಬಗ್ಗೆ ಪ್ರಶಂಸಿರುವ ಅವರು, ಭಾರತೀಯ ರಾಜಕೀಯ ವಿಚಾರವಾಗಿ ಅವರ ಜ್ಞಾನ ಮತ್ತು ಅನುಭವ ಅಗಾಧವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸಿಎಂ ಆಗಬೇಕೆಂದು ಗಡ್ಡ ಬಿಟ್ಟಿದ್ದಲ್ಲ: ಸಿ.ಟಿ.ರವಿ

ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ(ಕರಾಮುವಿ)ದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಿ.ಟಿ.ರವಿ ಅವರು ಇದೀಗ ಅಲ್ಲೇ ಪಿಎಚ್‌ಡಿ ಸಂಶೋಧನೆ ನಡೆಸುತ್ತಿದ್ದಾರೆ.

 

Follow Us:
Download App:
  • android
  • ios