Asianet Suvarna News Asianet Suvarna News

Gadaga: ಶಿವಾನಂದ ಮಠದ ಆಂತರಿಕ ಬಿಕ್ಕಟ್ಟು ಸ್ಫೋಟ, ಮಠದ ಅಂಗಳದಲ್ಲಿ ಹೈಡ್ರಾಮಾ

ಕಳೆದ ಕೆಲ ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಶಿವಾನಂದ ಮಠದ ಕಿರಿ-ಹಿರಿ ಶ್ರೀಗಳ ಮುನಿಸು ಇಂದು ಸ್ಫೋಟಗೊಂಡಿದೆ.‌ ಅನುಮತಿ ಇಲ್ಲದೇ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿಗಳ ಕೋಣೆ ಪ್ರವೇಶಿಸಲಾಗಿದೆ ಅಂತಾ ಆರೋಪಿಸಿ ಕೆಲ ಭಕ್ತರು ಮಠಕ್ಕೆ ಬಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Gadaga Shivanand Math internal crisis exposed gow
Author
First Published Dec 4, 2022, 9:49 PM IST

ವರದಿ : ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್  

ಗದಗ (ಡಿ.4): ಕಳೆದ ಕೆಲ ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಶಿವಾನಂದ ಮಠದ ಕಿರಿ-ಹಿರಿ ಶ್ರೀಗಳ ಮುನಿಸು ಇಂದು ಸ್ಫೋಟಗೊಂಡಿದೆ.‌ ಅನುಮತಿ ಇಲ್ಲದೇ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿಗಳ ಕೋಣೆ ಪ್ರವೇಶಿಸಲಾಗಿದೆ ಅಂತಾ ಆರೋಪಿಸಿ ಕೆಲ ಭಕ್ತರು ಮಠಕ್ಕೆ ಬಂದು ಆಕ್ರೋಶ ವ್ಯಕ್ತ ಪಡಿಸಿದ್ರು. ಕಿರಿಯ ಶ್ರೀಗಳ ಕೋಣೆ ಬೀಗ ಒಡೆದು ಪ್ರವೇಶಿಸಲಾಗಿದೆ ಅಂತಾ ಮಠದ ಆವರಣ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು. ಕಿರಿಯ ಶ್ರೀಗಳು ಮಠದ ಅಂಗಳದಲ್ಲಿ ಕಾರ್ ನಲ್ಲೇ ಕೂತಿದ್ರು. ಮಠದ ಹಿರಿಯ ಶ್ರೀಗಳು ಭಕ್ತರ ಜೊತೆಗೆ ಸಭೆ ನಡೆಸುತ್ತಿದ್ರು. ನಂತ್ರ ಮಾಧ್ಯಮದ ಜೊತೆಗೆ ಮಾತ್ನಡಿದ ಹಿರಿಯ ಶ್ರೀಗಳು, ಬೀಗ ಒಡೆದ ಆರೋಪ ತಳ್ಳಿ ಹಾಕಿ, 28/11/22 ರಂದು ಉತ್ತರಾಧಿಕಾರಿ ಪದಚ್ಯುತ ಗೊಳಿಸಲಾಗಿದೆ ಅಂತಾ ಹೇಳಿದ್ರು.

ಕಿರಿಯ ಶ್ರೀಗಳು ಮಠದ ಪರಂಪರೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಸನಾತನ ಸಂಸ್ಕೃತಿ, ಸಂಪ್ರದಾಯ, ಪೂಜೆ, ಪುನಸ್ಕಾರದ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಮನಸ್ಸಿಗೆ ನೋವಾಗಿ ಹೀಗಾಗಿ ಉತ್ತಾರಿಧಿಕಾರಿಯಿಂದ ತೆಗೆದಿದ್ದೇವೆ‌.. ಕಳೆದ ಎಂಟು ತಿಂಗಳಿಂದ ಮಾನ ಮಾರ್ಯಾದೆ ಕೊಡುತ್ತಿಲ್ಲ.. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂತಾ ಮಾಧ್ಯಮದ ಎದುರು ಹಿರಿಯ ಶ್ರೀಗಳು ಅಸಮಾಧಾನ ತೋಡಿಕೊಂಡರು.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಕಿರಿಯ ಶ್ರೀಗಳ ನಿರಾಕರಣೆ ಮಾಡಿದ್ದಾರೆ. ಇತ್ತ ಮಠದ ಅಂಗಳದಲ್ಲಿ ಬೀಡು ನಿಟ್ಟ ಕಿರಿಯ ಶ್ರೀಗಳ ಭಕ್ತರು, ಶ್ರೀಗಳ ಪರವಾಗಿ ಧರಣಿಗೆ ಕೂತ್ರು. ಪೊಲೀಸರ ಮಧ್ಯ ಪ್ರವೇಶಿಸಿ ಕಿರಿಯ, ಹಿರಿಯ ಶ್ರೀಗಳ ಜೊತೆ ಚರ್ಚೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಲು ಮುಂದಾದ್ರು.

 ಮಠದ ಅಂಗಳದಲ್ಲೇ ಚರ್ಚೆಯಾಗ್ತಿದ್ದ ಆಂತರಿಕ ವಿಚಾರ ಸದ್ಯ ಬಹಿರಂಗವಾಗಿದೆ. ಮಠದ ಉತ್ತಾರಿಕಾರಿಗಳ ಪದತ್ಯುತಿ ಮಾಡಲಾಗಿದೆ ಅಂತಾ ಶ್ರೀಗಳು ಹೇಳಿದ್ದಾರೆ. ಆದ್ರೆ, ಕಿರಿಯ‌ ಶ್ರೀಗಳು ಮಠದಲ್ಲೇ ಇದ್ದಾರೆ. ಉಭಯ ಶ್ರೀಗಳು ಮುಂದೆ ಯಾವ ನಿರ್ಧಾರ ತೆಗೆದುಕೊಳ್ತಾರೆ ಕಾದು ನೋಡ್ಬೇಕಿದೆ.

ಮುರಘಾ ಮಠಕ್ಕೆ ಯೋಗ್ಯರನ್ನು ಆಡಳಿತಾಧಿಕಾರಿ ನೇಮಿಸಿ
ಬೆಳಗಾವಿ: ಲಿಂಗಾಯತರ ಪ್ರಮುಖ ಮಠವಾದ ಚಿತ್ರದುರ್ಗ ಮುರಘಾ ಮಠದಲ್ಲಿ ನಡೆದ ಅನಿಷ್ಠಗಳ ನಂತರ ಈಗ ಆಡಳಿತಾಧಿಕಾರಿ ನೇಮಕ ಮಾಡಲು ಸರ್ಕಾರ ನಿರ್ಧರಿಸುವುದು ಸುಸ್ವಾಗತ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಂ.ಜಾಮದಾರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 300-400 ವರ್ಷಗಳ ಇತಿಹಾಸ ಹೊಂದಿರುವ ಈ ಮಠ ಬಸವತತ್ವ ಪಸರಿಸುತ್ತ ಬಂದಿದೆ. ಈ ಮಠಕ್ಕೆ ಈಗ ಹೊಸ ಆಡಳಿತಾಧಿಕಾರಿ ನೇಮಕ ಮಾಡಲು ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.

Haveri: ಲಿಂಗದಹಳ್ಳಿ ಮಠಕ್ಕೆ ಬಂತು ಮಾನಸ ಸರೋವರದ ಸ್ಪಟಿಕ ಲಿಂಗ: ಬೆಲೆ ಎಷ್ಟು ಗೊತ್ತಾ?

ಆಡಳಿತಾಧಿಕಾರಿಯಾಗಿ ಬಸವತತ್ವ ಆಚರಿಸಿ ಅರಿತವರು ಇರಬೇಕು. ಬಸವತತ್ವದ ಸಾಮಾನ್ಯ ಜ್ಞಾನ ಇದ್ದವರನ್ನು ಆಡಳಿತಾಧಿಕಾರಿ ನೇಮಕ ಮಾಡಬೇಕು. ವೀರಶೈವ ಮತ್ತು ವೈದಿಕ ಹಿನ್ನೆಲೆಯ ಯಾವುದೇ ವ್ಯಕ್ತಿಯನ್ನು ನೇಮಕ ಮಾಡಕೂಡದು. ಲಿಂಗಾಯತ ಸಂಸ್ಕೃತಿ ಅರಿಯದ ವ್ಯಕ್ತಿಯನ್ನು ನೇಮಕ ಮಾಡಿದರೆ ನಮ್ಮ ಸಂಪೂರ್ಣ ವಿರೋಧ ಇದೆ ಎಂದು ಸ್ಪಷ್ಟವಾಗಿ ತಿಳಿಸಿದರು.

ಮುರುಘಾ ಮಠಕ್ಕೆ ಹೊಸ ಪೀಠಾಧಿಪತಿ ನೇಮಕಕ್ಕೆ ವೀರಶೈವ ಮಹಾಸಭಾ ಆಗ್ರಹ: 30 ಜಿಲ್ಲೆಗಳಿಂದ ಪಾದಯಾತ್ರೆ ನಿರ್ಣಯ

ಕಳಂಕ ಹೊತ್ತು ಜೈಲು ಸೇರಿರುವ ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿಯನ್ನು ಪೀಠದಿಂದ ಇಳಿಸಿದ ನಂತರ ಈಗ ಯೋಗ್ಯ ವ್ಯಕ್ತಿಯನ್ನು ಸರ್ಕಾರ ಆಡಳಿತ ಅಧಿಕಾರಿ ನೇಮಕ ಮಾಡುವಾಗ ಬಸವ ತತ್ವ ಅರಿತವರನ್ನೇ ನೇಮಕ ಮಾಡಬೇಕು. ಈ ಮಠದ ಸಂಪ್ರದಾಯಕ್ಕೆ ಧಕ್ಕೆ ತರುವಂತಹ ವ್ಯಕ್ತಿ ನೇಮಕವಾದರೆ ನಾವು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios