Haveri: ಲಿಂಗದಹಳ್ಳಿ ಮಠಕ್ಕೆ ಬಂತು ಮಾನಸ ಸರೋವರದ ಸ್ಪಟಿಕ ಲಿಂಗ: ಬೆಲೆ ಎಷ್ಟು ಗೊತ್ತಾ?

* ಮಾನಸ ಸರೋವರದಿಂದ ಲಿಂಗದಹಳ್ಳಿ ಮಠಕ್ಕೆ ಬಂದ ಸ್ಫಟಿಕ ಲಿಂಗ
* ಹೊಸ ವರ್ಷದಲ್ಲಿ ಲಿಂಗ ಪ್ರತಿಷ್ಠಾಪನೆ ಸಮಾರಂಭ
* ಲೋಕ ಕಲ್ಯಾಣಾರ್ಥವಾಗಿ ಸ್ಫಟಿಕ ಲಿಂಗ ಪ್ರತಿಷ್ಠಾಪನೆ

1 crore Rs crystal lingam from Manasarovar came to Lingadahalli Mutt

ಹಾವೇರಿ (ಡಿ.1) : ರಾಣೆಬೆನ್ನೂರು ತಾಲೂಕು ಲಿಂಗದಹಳ್ಳಿಯ ಮಠದಲ್ಲಿ ಕಳ್ಳತನವಾಗಿದ್ದ  ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ಪಟಿಕ ಲಿಂಗ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಮಠದಲ್ಲಿ ಪೂಜಾ ಕಾರ್ಯಗಳಿಗೆ ಅನುಕೂಲವಾಗುವಂತೆ ಮಾನಸ ಸರೋವರದಿಂದ ಹೊಸ ಸ್ಪಟಿಕಲಿಂಗ ಖರೀದಿಸಿ ತರಲಾಗಿದೆ. 

ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿಯ ಶ್ರೀ ರಂಭಾಪುರಿ ಪೀಠದ ಶಾಖಾ ಹಿರೇಮಠದ ಶ್ರೀ ರೇಣುಕಾಚಾರ್ಯರ ಮಂದಿರಲ್ಲಿದ್ದ ಐಸಿಹಾಸಿಕ ಸ್ಪಟಿಕಲಿಂಗ ಕಳ್ಳತನವಾಗಿ 6 ತಿಂಗಳು ಕಳೆದಿದೆ. ಇನ್ನೂ ಸ್ಪಟಿಕ ಲಿಂಗ ಪತ್ತೆಯಾಗದ ಕಾರಣ ಚೀನಾ ವ್ಯಾಪ್ತಿಯಲ್ಲಿರುವ ಕೈಲಾಸ ಮಾನಸ ಸರೋವರದಿಂದ 1 ಕೋಟಿ ರೂ.ಗೂ ಅಧಿಕ ಮೌಲ್ಯದ ಹೊಸ ಸ್ಪಟಿಕಲಿಂಗ ಖರೀದಿಸಿ ತರಲಾಗಿದೆ. ಹೊಸ ಸ್ಪಟಿಕಲಿಂಗ ಒಂದೂವರೆ ಅಡಿ ಎತ್ತರ, 10 ಇಂಚು ಅಗಲ ಇದೆ.

ರಾಣಿಬೆನ್ನೂರು: ಹಿರೇಮಠದಲ್ಲಿದ್ದ ದಕ್ಷಿಣ ಭಾರತದ ಬೃಹತ್ ಸ್ಪಟಿಕಲಿಂಗ ಕಳ್ಳತನ

ಲೋಕಕಲ್ಯಾಣಾರ್ಥ ಲಿಂಗ ಖರೀದಿ: ಈಗಾಗಲೆ ಮಠದಲ್ಲಿನ ಶ್ರೀ ರೇಣುಕಾಚಾರ್ಯ ಮೂರ್ತಿ ದೇವರ ಎದುರು ಇಟ್ಟು ಪೂಜಿಸಲಾಗುತ್ತಿದೆ. ಅಲ್ಲದೆ, ಮೊದಲಿಂಗಗಿಂತಲೂ ಹೆಚ್ಚು ಆಕರ್ಷಕವಾಗಿದೆ. ಸಾಲ ಮಾಡಿಯಾದರೂ ಸರಿ ಲೋಕಕಲ್ಯಾಣಾರ್ಥ ಮಠದಲ್ಲಿ ಸ್ಪಟಿಕಲಿಂಗ ಪ್ರತಿಷ್ಠಾಪನೆ ಅವಶ್ಯ ಎಂಬ ಉದ್ದೇಶದಿಂದ ಮಠದ ಪೀಠಾಧಿಪತಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೊಸ ಲಿಂಗ ಖರೀದಿ ಮಾಡಿದ್ದಾರೆ. ಅಂದಾಜು 1 ಕೋಟಿ ರೂ.ಗಿಂತ ಅಧಿಕ ಹಣ ನೀಡಿ ಸ್ಪಟಿಕಲಿಂಗ ಜತೆಗೆ ನಾಲ್ಕು ಪಚ್ಚೆ ಲಿಂಗ ಖರೀದಿ ಮಾಡಲಾಗಿದೆ.

ಸ್ಪಟಿಕ ಲಿಂಗ ಖರೀದಿಗೆ ಸಾಲ: ಭಕ್ತರು ನೀಡಿದ ಹಣದ ಜತೆಗೆ ತಮ್ಮ ಹೆಸರಿನಲ್ಲಿದ್ದ ಜೀವ ವಿಮೆ ಪಾಲಿಸಿ ಮೇಲೆ, ಬ್ಯಾಂಕ್ ಹಾಗೂ ಕೆಇಬಿ ಸೊಸೈಟಿಯಲ್ಲಿ ಸಾಲ ಮಾಡಿ ಹೊಸ ಸ್ಪಟಿಕ ಲಿಂಗ ಖರೀದಿಸಲಾಗಿದೆ. ರಾಜಸ್ಥಾನದ ದಾಮೋದರಜಿ ಎಂಬುವರ ಮೂಲಕ ಕೈಲಾಸ ಮಾನಸ ಸರೋವರದಲ್ಲಿಯ ಪರಿಚಯಸ್ಥರಿಂದ ಲಿಂಗ ತರಿಸಿಕೊಳ್ಳಲಾಗಿದೆ.

ಹೊಸ ವರ್ಷದ ಜನವರಿ 23ರಂದು ಸ್ಪಟಿಕಲಿಂಗ ಪ್ರತಿಷ್ಠಾಪನೆ, ಧರ್ಮಸಭೆ ಏರ್ಪಡಿಸಲಾಗಿದೆ. ಈ ಹಿಂದಿನ ಸ್ಪಟಿಕಲಿಂಗ ಕಳುವಾದ ಹಿನ್ನೆಲೆಯಲ್ಲಿ ಹೊಸದಾಗಿ ತಂದಿರುವ ಸ್ಪಟಿಕಲಿಂಗ ರಕ್ಷಣೆಗಾಗಿ ಅಗತ್ಯ ಭದ್ರತೆ ವದಗಿಸಲಾಗಿದೆ. ಮಠದ ಸುತ್ತಲೂ ಹೊಸದಾಗಿ ಸಿಸಿ ಕ್ಯಾಮರಾ ಅಳವಡಿಸಿ  ಕಾವಲು ಕಾಯಲಾಗುತ್ತಿದೆ  ಎಂದು ಮಠದ ಪೀಠಾಧ್ಯಕ್ಷರು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios