Asianet Suvarna News Asianet Suvarna News

ಡಿಜಿಟಲ್ ತಂತ್ರಜ್ಞಾನ ಶಿಕ್ಷಣ ವ್ಯವಸ್ಥೆಯ ಭವಿಷ್ಯ: ಸಚಿವ ಎಂ.ಸಿ.ಸುಧಾಕರ್

ಡಿಜಿಟಲ್ ತಂತ್ರಜ್ಞಾನ ಶಿಕ್ಷಣ ವ್ಯವಸ್ಥೆಯ ಭವಿಷ್ಯವಾಗಿದ್ದು, ಇದರಲ್ಲಿ ಭಯರಹಿತ ವ್ಯವಸ್ಥೆ ತರುವಲ್ಲಿ ಇಂದಿನ ವಿಶ್ವವಿದ್ಯಾಲಯಗಳು ಸಂಶೋಧನೆ ಕೈಗೊಳ್ಳಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

Future of digital technology education system Says Minister Dr MC Sudhakar gvd
Author
First Published Oct 28, 2023, 11:59 PM IST

ಬೆಳಗಾವಿ (ಅ.28): ಡಿಜಿಟಲ್ ತಂತ್ರಜ್ಞಾನ ಶಿಕ್ಷಣ ವ್ಯವಸ್ಥೆಯ ಭವಿಷ್ಯವಾಗಿದ್ದು, ಇದರಲ್ಲಿ ಭಯರಹಿತ ವ್ಯವಸ್ಥೆ ತರುವಲ್ಲಿ ಇಂದಿನ ವಿಶ್ವವಿದ್ಯಾಲಯಗಳು ಸಂಶೋಧನೆ ಕೈಗೊಳ್ಳಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಆಯೋಜಿಸಿದ್ದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ (AIU) ಸಹಯೋಗದಲ್ಲಿ ದಕ್ಷಿಣ ವಲಯ ಕುಲಪತಿಗಳ ಸಮ್ಮೇಳನ-2023 ಉದ್ಘಾಟಿಸಿ ಮಾತನಾಡಿದ ಅವರು, ಇವತ್ತಿನ ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಔದ್ಯೋಗಿಕ ರಂಗದ ಬೇಡಿಕೆಗಳು ತ್ವರಿತಗತಿಯಲ್ಲಿ ಬದಲಾವಣೆಯಾಗಿದ್ದು, ಅದಕ್ಕೆ ತಕ್ಕಂತೆ ವಿವಿಗಳು ವಿದ್ಯಾರ್ಥಿಗಳಿಗೆ ಕೌಶಲಭರಿತ ಶಿಕ್ಷಣ ನೀಡಬೇಕಿದೆ. 

ಡಿಜಿಟಲ್ ಕ್ಷೇತ್ರದಲ್ಲಿನ ಬದಲಾವಣೆ ನಮಗೆ ಒದಗಿಸಿಕೊಡಬಹುದು. ಅದಕ್ಕೆ ತಕ್ಕಂತೆ ಪ್ರಾಧ್ಯಾಪಕರಿಗೂ ತರಬೇತಿ ನೀಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಭಾರತೀಯ ವಿಶ್ವವಿದ್ಯಾಲಯಗಳ ಸಂಘದ (AIU) ಪ್ರಧಾನ ಕಾರ್ಯದರ್ಶಿ ಪಂಕಜ್ ಮಿತ್ತಲ್‌ ಮಾತನಾಡಿ, ದಕ್ಷಿಣ ವಲಯದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದಲ್ಲಿ ಈ ಮುಂಚೆ ಒಟ್ಟು 6 ಸಭೆ ಮಾಡಲಾಗಿದೆ. ಐದು ವಲಯ ಸಮಾರಂಭ ಮಾಡಲಾಗಿದೆ. ಕನಾಟಕದಲ್ಲಿ ಮೊಟ್ಟ ಮೊದಲಬಾರಿಗೆ ದಕ್ಷಿಣ ವಲಯದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಕುಲಪತಿಗಳ ಸಮ್ಮೇಳನ ಆಯೋಜಿಸಲಾಗಿದೆ. 

ಡಿಕೆಶಿ ಸಿಎಂ ಆಗುವುದರಲ್ಲಿ ಯಾವ ಅನುಮಾನವಿಲ್ಲ: ಶಾಸಕ ಉದಯ್

ಸಭೆಯಲ್ಲಿ 2023 ರಿಂದ 2047 ರ ಮಧ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಸಂಶೋಧನೆ,ನಿರ್ಧಾರ ಕೈಗೊಳ್ಳುವಲ್ಲಿ ಡಿಜಿಟಲ್ ಪರಿವರ್ತನೆ ಹೇಗೆಲ್ಲ ಕೆಲಸ ಮಾಡಬಹುದು ಎಂಬುದನ್ನು ವಿವರಿಸುತ್ತ ಬರಲಾಗುತ್ತಿದೆ. ಅನೇಕ ವಿಷಯ ಕಲಿಯಬಹುದಾಗಿದೆ. ಸಂಘ ಇಡೀ ವಿಶ್ವದಲ್ಲಿಯೇ ಅತ್ಯಧಿಕ ಸದಸ್ಯರನ್ನು ಹೊಂದಿದ್ದು, ವಿಶ್ವದ ಅತ್ಯಂತ ಹಳೆಯ ಸಂಘಗಳಲ್ಲಿ ಎರಡನೇಯ ಸ್ಥಾನದಲ್ಲಿದೆ ಎಂದು ತಿಳಿಸಿದರು. ಎಐಯು ಅಧ್ಯಕ್ಷ ಹಾಗೂ ಮೇಘಾಲಯ ಯುಎಸ್‌ಟಿಎಂ ಕುಲಪತಿ ಪ್ರೊ.ಜಿ.ಡಿ ಶರ್ಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ರಾಷ್ಟ್ರ ತಂತ್ರಜ್ಞಾನಕ್ಕೆ ವ್ಯಾಪಾರ ಮಾಡುವ ಸ್ಥಳವಾಗದೆ ಇಲ್ಲಿನ ವಿದ್ಯಾರ್ಥಿಗಳು ತಂತ್ರಜ್ಞಾನ ಹುಟ್ಟು ಹಾಕಿ ಆರ್ಥಿಕವಾಗಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿರಬೇಕು ಎಂದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾಲಯದ ಬೆಳವಣಿಗೆ, ಸಾಧನೆಯ ಜೊತೆಗೆ ಹಮ್ಮಿಕೊಂಡಿರುವ ಕಾಯಕ್ರಮಗಳು, ಸಾಧಿಸಿದ ಸಾಧನೆಗಳ ಸ್ವರೂಪ ತಿಳಿಸಿದರು. ಬಳಿಕ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕರ್ನಾಟಕ ಉನ್ನತ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಮಾತನಾಡಿದರು. ಸುಮಾರು 80ಕ್ಕಿಂತ ಹೆಚ್ಚು ಕುಲಪತಿಗಳು, 100ಕ್ಕೂ ಹೆಚ್ಚು ಪ್ರಾಚಾರ್ಯರು ಹಾಗೂ ಔದ್ಯೋಗಿಕ ರಂಗದ ಪ್ರತಿನಿಧಿಗಳು, ಕುಲಸಚಿವ ಪ್ರೊ.ಬಿ.ಇ.ರಂಗಸ್ವಾಮಿ ಇತರರು ಭಾಗವಹಿಸಿದ್ದರು.

ಹಾಸನ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ ಟವರ್‌ಗೆ ಪ್ರಾಮುಖ್ಯತೆ: ಸಂಸದ ಪ್ರಜ್ವಲ್ ರೇವಣ್ಣ

ಕೊರೋನಾ ನಂತರದ ಕಾಲಘಟ್ಟದಲ್ಲಿ ಅನೇಕ ವಿಭಾಗದಲ್ಲಿ ಡಿಜಿಟಲ್ ವಿಭಾಗದ ಕ್ರಾಂತಿಕಾರಿ ಬದಲಾವಣೆ ತಂದಿದೆ. ಅದರಲ್ಲೂ ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ಕಾಣಬಹುದಾಗಿದೆ. ಎಟಿಎಂನಿಂದ ಬದಲಾಗಿ ಡಿಜಿಟಲ್ ಆ್ಯಪ್ ಮೂಲಕ ಹಣಕಾಸು ವ್ಯವಹಾರ ಬಂದಿದೆ. ಇದು ಮನುಷ್ಯನ ಬದುಕನ್ನು ಪಾರದರ್ಶಕವನ್ನಾಗಿ ಮಾಡುವುದರ ಜತೆಗೆ ಮತ್ತಷ್ಟು ವೇಗ ಹೆಚ್ಚಿಸಿದೆ.
ಡಾ.ಎಂ.ಸಿ.ಸುಧಾಕರ, ಉನ್ನತ ಶಿಕ್ಷಣ ಸಚಿವರು.

Follow Us:
Download App:
  • android
  • ios