ಚಿಕ್ಕಮಗಳೂರು ಹಬ್ಬಕ್ಕೆ ಭರದ ಸಿದ್ದತೆ: ಪ್ರಧಾನಿ ಮೋದಿ ಆಗಮನದ ನಿರೀಕ್ಷೆ

ಜಿಲ್ಲಾ ಉತ್ಸವದ ಯಶಸ್ವಿಗೆ ಅಧಿಕಾರಿಗಳಿಂದ ಶ್ರಮ 
ಉತ್ಸವವನ್ನು ರಂಗಾಗಿ ಆಚರಿಸಲು ಜಿಲ್ಲಾಡಳಿತದಿಂದ  ಸಕಲ ಸಿದ್ದತೆ 
ಕಾಫಿವಾಲ್, ಕಾಫಿಬೀಜದ ಮಾದರಿ ಸ್ತಬ್ದಚಿತ್ರ ನಿರ್ಮಾಣ

Full preparation for Chikmagalur festival Expectation of PM Modi arrival sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.11):  ಚಿಕ್ಕಮಗಳೂರು ನಗರದ ನೇತಾಜಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜನವರಿ 18 ರಿಂದ 22ರವರೆಗೆ ನಡೆಯುವ ಚಿಕ್ಕಮಗಳೂರು ಹಬ್ಬಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಹಬ್ಬದ ಯಶಸ್ವಿಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಕಳೆದ ಬಾರಿ ನಡೆದ ಚಿಕ್ಕಮಗಳೂರು ಹಬ್ಬಕ್ಕೆ ಕೆಲವರ ವಿರೋಧದ ನಡುವೆಯೂ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದ ಹಬ್ಬವನ್ನು ಈ ವರ್ಷ ಮತ್ತಷ್ಟು ರಂಗಾಗಿ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಬ್ಬ ಇನ್ನೂ 7 ದಿವಸ ಬಾಕಿ ಇದ್ದು, ಎಲ್ಲಾ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ.

ಚಿಕ್ಕಮಗಳೂರು ಹಬ್ಬದ ಉದ್ಘಾಟನೆಗೆ ಈಗಾಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುವುದು ಖಾತ್ರಿಯಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಕರೆತರುವ ಪ್ರಯತ್ನಕ್ಕೆ ಕೈ ಹಾಕಿರುವ ಶಾಸಕ ಸಿ.ಟಿ.ರವಿ, ದೆಹಲಿಯಲ್ಲಿ ಬೀಡುಬಿಟ್ಟು ಪ್ರಧಾನಿಗೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಲು ಮುಂದಾಗಿದ್ದಾರೆ. ಒಮ್ಮೆ ಮೋದಿಯವರು ಬರುವುದು ನಿಶ್ಚಿತವಾದರೆ ಕಾರ್ಯಕ್ರಮ ಕಲರ್ಫುಲ್ ಆಗಲಿದೆ. ಜಿಲ್ಲಾ ಆಟದ ಮೈದಾನದ ಮುಖ್ಯ ವೇದಿಕೆಗೆ ಸೋಮವಾರ ಗುದ್ದಲಿಪೂಜೆ ನೆರವೇರಿಸಲಾಗಿದೆ. 

Karnataka Tourism: ಇನ್ಮುಂದೆ ಟ್ರಾಫಿಕ್  ಜಾಮ್ ನಿಂದ ಮುಕ್ತವಾಗಲಿದೆ ಮುಳ್ಳಯ್ಯನಗಿರಿ!

ನಗರವೆಲ್ಲ ವಿದ್ಯುತ್‌ ದೀಪಗಳಿಂದ ಝಗಮಗ:
ಇಂದು ವೇದಿಕೆ ನಿರ್ಮಾಣ ಕಾರ್ಯ ಬಿರುಸುಗೊಂಡಿದ್ದರೆ, ಇಡೀ ನಗರವನ್ನು ವಿದ್ಯುತ್‌ ದೀಪಗಳಿಂದ ಝಗಮಗಿಸುವಂತೆ ಮಾಡಲು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನೇತೃತ್ವದಲ್ಲಿ ಮಂಗಳವಾರ  ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಭಾಗವಹಿಸಿ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಕುವೆಂಪು ಕಲಾಮಂದಿರ, ಸ್ಕೌಟ್ಸ್ ಮತ್ತು ಗೈಡ್ಸ್ಭವನ, ಶಂಕರದೇವರ ಮಠ, ಗಾಯತ್ರಿಕಲ್ಯಾಣ ಮಂಟಪಗಳಲ್ಲಿ ವಿವಿಧ ಕಾರ್ಯಕ್ರಮ ನಡೆಯುವುದರಿಂದ ವೇದಿಕೆ ಅಲಂಕಾರಕ್ಕೆ ವಿವಿಧ ಕಲಾವಿದರನ್ನು ಗುರುತಿಸಿ ಅವರುಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಈಗಾಗಲೇ ಅವರುಗಳ ತಮ್ಮ ಕೆಲವು ಕಲಾವಿದರುಗಳೊಂದಿಗೆ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಸ್ತಬ್ಧ ಚಿತ್ರಗಳ ನಿರ್ಮಾಣದಲ್ಲಿ ಹೆಸರು ಮಾಡಿರುವ ಕರ್ಷಕಾವ ಅವರಿಗೆ ಕುವೆಂಪು ಕಲಾಮಂದಿರದಲ್ಲಿ ಒಳ ಮತ್ತು ಹೊರಾಂಗಣ ನಿರ್ಮಾಣದ ಜಬ್ದಾರಿಯನ್ನು ನೀಡಿದ್ದು, ನಗರದ ಮುಖ್ಯರಸ್ತೆಗಳನ್ನು ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಿದ್ದಾರೆ.

ಆಕರ್ಷಕ ಸ್ತಬ್ಧಚಿತ್ರ ,ಟ್ಯಾಬ್ಲೊ ನಿರ್ಮಾಣ: ಕಾಫಿನಾಡೆಂದು ಪ್ರಸಿದ್ಧ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಗೆ ಮೆರಗು ನೀಡುವ ಕಾಫಿವಾಲ್, ಕಾಫಿಬೀಜದ ಮಾದರಿಯನ್ನು ತಯಾರಿಸುತ್ತಿದ್ದಾರೆ. ಮೈಸೂರಿನಲ್ಲಿ ನಡೆದ ನಾಡಹಬ್ಬಕ್ಕೆ ಜಿಲ್ಲೆಯ ಸ್ತಬ್ಧಚಿತ್ರ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತ್ತು. ಅದೇ ಮಾದರಿಯಲ್ಲಿ ನದಿದೇವತೆಗಳ ಹೆಸರಿನಲ್ಲಿ ಹರ್ಷಕಾವ ಅವರ ಕೈಚಳಕದಲ್ಲಿ ಆಕರ್ಷಕ ಸ್ತಬ್ಧಚಿತ್ರ ಮೂಡಿಬರುವ ಮೂಲಕ ಜಿಲ್ಲೆಯ ಜನರ ಗಮನ ಸೆಳೆಯಲಿದೆ. ಈಗಾಗಲೇ ಟ್ಯಾಬ್ಲೊ ನಿರ್ಮಾಣಕಾರ್ಯ ಬಿರುಸುಗೊಂಡಿದೆ. ವಿವಿಧ ಕಲಾವಿದರುಗಳನ್ನು ಉತ್ತೇಜಿಸುವ ರೀತಿಯಲ್ಲಿ ಕಲಾತ್ಮಕವಾಗಿ ಕುವೆಂಪು ಕಲಾಮಂದಿರದ ವೇದಿಕೆ ನಿರ್ಮಾಣಗೊಳ್ಳುತ್ತಿದ್ದು, ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಚಿಕ್ಕಮಗಳೂರು ಹಬ್ಬಕ್ಕೆ ಬರುವ ಸಾರ್ವಜನಿಕರನ್ನು ವೇದಿಕೆಗಳು ಕಣ್ಮನ ಸೆಳೆಯಲಿವೆ.

Chikkamagalauru: ಬಿಜೆಪಿ ಪ್ಲಾಗ್ ಹಿಡಿದು ಏಕಾಂಗಿಯಾಗಿ ಪಾದಯಾತ್ರೆ ಮೂಲಕ ಆಶ್ರಫ್ ಪ್ರತಿಭಟನೆ

ಶಾಲಾ- ಕಾಲೇಜುಗಳ ಆವರಣದಲ್ಲೂ ಹಬ್ಬ:  ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ವಿಶ್ವಕರ್ಮ ಆಚಾರ್ಯ ಅವರ ನೇತೃತ್ವದಲ್ಲಿ ಎಐಟಿ ಕಾಲೇಜಿನ ಆವರಣದಲ್ಲಿ ನಡೆಯುವ ವಸ್ತುಪ್ರದರ್ಶನಕ್ಕೆ ವಿವಿಧ ಇಲಾಖೆಗಳ ಮಾದರಿ ನಿರ್ಮಾಣಗೊಳ್ಳುತ್ತಿದೆ. ಮೆಡಿಕಲ್‌ ಕಾಲೇಜು, ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಶಾಲಾಭಿವೃದ್ಧಿ ಯೋಜನೆಗಳು, ಕಿರುನೀರು ಘಟಕಗಳ ನಿರ್ಮಾಣಕಾರ್ಯ ಭರದಿಂದ ಸಾಗಿದ್ದು, ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಚಿಕ್ಕಮಗಳೂರು ಹಬ್ಬಕ್ಕೆ ಬರುವವರ ಸ್ವಾಗತಿಸಲು ಮುಖ್ಯ ರಸ್ತೆಗಳನ್ನು ಸ್ವಾಗತಕಮಾನುಗಳು ನಿರ್ಮಾಣ ಗೊಳ್ಳುತ್ತಿದ್ದು, ನಗರದಲ್ಲಿರುವ ಮುಖ್ಯ ವೃತ್ತಗಳು ಅಲಂಕೃತಗೊಳ್ಳಲಿವೆ. ಒಟ್ಟಾರೆಯಾಗಿ ಹಬ್ಬವು ಕಲಾತ್ಮಕವಾಗಿ ರಂಗುಗೊಳ್ಳುತ್ತಿದ್ದು, ಸಾರ್ವಜನಿಕರನ್ನು ಆಕರ್ಷಿಸಲಿದೆ.

Latest Videos
Follow Us:
Download App:
  • android
  • ios