ವಿನೂತನ ಪ್ರತಿಭಟನೆಗಳ ಮೂಲಕವೇ ಮಲೆನಾಡಿನಲ್ಲಿ ಮನೆ ಮಾತಾಗಿರುವ ಗ್ರಾಮಪಂಚಾಯಿತಿ ಸದಸ್ಯ  ಆಶ್ರಫ್ ಒತ್ತುವರಿ ಜಾಗ ತೆರವುಗೊಳಿಸುವಲ್ಲಿ  ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ಬಿಜೆಪಿ ಪ್ಲಾಗ್ ಹಿಟ್ಕೋಂಡು ಪಾದಯಾತ್ರೆಗೆ ಮುಂದಾಗಿದ್ದಾರೆ.

ಚಿಕ್ಕಮಗಳೂರು (ಜ.10): ವಿನೂತನ ಪ್ರತಿಭಟನೆಗಳ ಮೂಲಕವೇ ಮಲೆನಾಡಿನಲ್ಲಿ ಮನೆ ಮಾತಾಗಿರುವ ಆಶ್ರಫ್ ಇಂದು ಏಕಾಂಕಿಯಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಒತ್ತುವರಿ ಜಾಗ ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ಬಿಜೆಪಿ ಪ್ಲಾಗ್ ಹಿಟ್ಕೋಂಡು ಪಾದಯಾತ್ರೆಗೆ ಗ್ರಾಮಪಂಚಾಯಿತಿ ಸದಸ್ಯ ಆಶ್ರಫ್ ಮುಂದಾಗಿದ್ದಾರೆ. ಎಷ್ಟೇ ಬಾರಿ ಹೇಳಿದರೂ ಒತ್ತುವರಿ ಜಾಗವನ್ನ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ 36 ಕಿ.ಮೀ. ಏಕಾಂಗಿಯಾಗಿ ಪಾದಯಾತ್ರೆ ನಡೆಸುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. ಎನ್. ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 136ರಲ್ಲಿ 2.30 ಎಕರೆ ಗೋಮಾಳವನ್ನ ಪ್ರಭಾವಿಯೊಬ್ಬರು ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದಾರೆ.

ಈ ಬಗ್ಗೆ ಎನ್.ಆರ್.ಪುರ ತಹಶೀಲ್ದಾರ್ ಜಂಟಿ ಸರ್ವೇಗೆ ಸೂಚಿಸಿದ್ದರು. ಅಧಿಕಾರಿಗಳು ಗೋಮಾಳವೆಂದು ವರದಿ ನೀಡಿದ್ದಾರೆ. ಆದರೆ, ಈವರೆಗೂ ಅಧಿಕಾರಿಗಳು ಒತ್ತುವರಿ ತೆರವು ಮಾಡಿಲ್ಲ. ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಜನ ನಿವೇಶನ ರಹಿತರಿದ್ದು, ಹಲವರಿಗೆ ವಸತಿ ಸೌಲಭ್ಯಗಳಿಲ್ಲ. ಅಧಿಕಾರಿಗಳು ಕೂಡಲೇ ಒತ್ತುವರಿ ಜಾಗವನ್ನ ತೆರವು ಮಾಡಿ ಸರ್ಕಾರಿ ಬಳಕೆಗೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಲೆ​ನಾ​ಡಿ​ನಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ಮನವಿ: 
ಮಲೆನಾಡು ಭಾಗದಲ್ಲಿ ಮಾನವ- ಪ್ರಾಣಿ ಸಂಘರ್ಷ ದಿನೇದಿನೇ ಹೆಚ್ಚಾಗುತ್ತಿದೆ. ಕೃಷಿಕರು, ಬೆಳೆಗಾರರು ಜೀವಭಯದಲ್ಲೇ ದಿನ ದೂಡಬೇಕಾ​ಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್‌ ಒತ್ತಾಯಿಸಿದ್ದಾರೆ.

ಕಾಡಾನೆಗಳ ನಿರಂತರ ದಾಳಿಯ ನಡುವೆ ಇತ್ತೀಚೆಗೆ ಕಾಡುಕೋಣಗಳ ಹಾವಳಿಯೂ ವಿಪರೀತವಾಗಿದೆ. ಜೀವಹಾನಿ ಜೊತೆಗೆ ಅಪಾರ ಪ್ರಮಾಣದ ಬೆಳೆಯನ್ನೂ ಹಾನಿಗೀಡು ಮಾಡುತ್ತಿವೆ. ಕೆಲವೇ ತಿಂಗಳ ಹಿಂದೆ ಕಳಸಾ ಸಮೀಪ ಕಾಡುಕೋಣದ ದಾಳಿಯಿಂದ ತೋಟದ ಮಾಲೀಕರೊಬ್ಬರು ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ನಿನ್ನೆಯಷ್ಟೇ ಮಲ್ಲಂದೂರು ಸಮೀಪ ನಿಡಗೋಡು ಗ್ರಾಮದಲ್ಲಿ ಮನೋಜ್‌ ಎಂಬ ಯುವಕನ ಮೇಲೆ ಕಾಡುಕೋಣ ದಾಳಿ ನಡೆಸಿದೆ. ಅವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಡಾನೆಗಳ ದಾಳಿಯಿಂದ ಈಗಾಗಲೇ ಸಾಕಷ್ಟುಸಾವು-ನೋವು, ಕಷ್ಟ- ನಷ್ಟಗಳನ್ನು ಅನುಭವಿಸಿರುವ ಬೆನ್ನಲ್ಲೇ ಕಾಡು ಕೋಣಗಳ ಹಾವಳಿ ತೀವ್ರಗೊಳ್ಳುತ್ತಿರುವುದು ಮಲೆನಾಡಿಗರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದಿದ್ದಾರೆ. ಅರಣ್ಯ ಇಲಾಖೆಯಲ್ಲಿ ಈಗ ಯುವ ಅಧಿಕಾರಿಗಳ ತಂಡ ಇದ್ದು, ಪ್ರಾಣಿಗಳ ಹಾವಳಿ ತಡೆಗೆ ಚುರುಕಿನ ಕಾರ್ಯಾಚರಣೆ ನಡೆಸಬೇಕು. ಪಟಾಕಿಗಳನ್ನು ಸಿಡಿಸಿ, ಪ್ರಾಣಿಗಳನ್ನು ಬೆದರಿಸುವಂತಹ ಸವಕಲು ಕ್ರಮವನ್ನು ಕೈಬಿಟ್ಟು ಅವುಗಳನ್ನು ಅರಣ್ಯಕ್ಕೆ ಸ್ಥಳಾಂತರಿಸಿ ಮತ್ತೆ ಅವು ಹೊರಕ್ಕೆ ಬಾರದಂತೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕಾಡುಕೋಣ ದಾಳಿಯಿಂದ ಗಾಯಗೊಂಡಿರುವ ಯುವಕ ಮನೋಜ್‌ನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವ ಜೊತೆಗೆ ಅವರ ಕುಟುಂಬ ನಿರ್ವಹಣೆಗೆ ಸೂಕ್ತ ಪರಿಹಾರವನ್ನೂ ನೀಡಬೇಕು ಹಾಗೆಯೇ ಕಳಸಾದಲ್ಲಿ ಕಾಡುಕೋಣ ದಾಳಿಯಿಂದ ಮೃತ ಪಟ್ಟಕೃಷಿಕ ವ್ಯಕ್ತಿಯ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಲೆ​ನಾ​ಡಿ​ನಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ಮನವಿ: 
ಮಲೆನಾಡು ಭಾಗದಲ್ಲಿ ಮಾನವ- ಪ್ರಾಣಿ ಸಂಘರ್ಷ ದಿನೇದಿನೇ ಹೆಚ್ಚಾಗುತ್ತಿದೆ. ಕೃಷಿಕರು, ಬೆಳೆಗಾರರು ಜೀವಭಯದಲ್ಲೇ ದಿನ ದೂಡಬೇಕಾ​ಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್‌ ಒತ್ತಾಯಿಸಿದ್ದಾರೆ.

ಕಾಡಾನೆಗಳ ನಿರಂತರ ದಾಳಿಯ ನಡುವೆ ಇತ್ತೀಚೆಗೆ ಕಾಡುಕೋಣಗಳ ಹಾವಳಿಯೂ ವಿಪರೀತವಾಗಿದೆ. ಜೀವಹಾನಿ ಜೊತೆಗೆ ಅಪಾರ ಪ್ರಮಾಣದ ಬೆಳೆಯನ್ನೂ ಹಾನಿಗೀಡು ಮಾಡುತ್ತಿವೆ. ಕೆಲವೇ ತಿಂಗಳ ಹಿಂದೆ ಕಳಸಾ ಸಮೀಪ ಕಾಡುಕೋಣದ ದಾಳಿಯಿಂದ ತೋಟದ ಮಾಲೀಕರೊಬ್ಬರು ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ನಿನ್ನೆಯಷ್ಟೇ ಮಲ್ಲಂದೂರು ಸಮೀಪ ನಿಡಗೋಡು ಗ್ರಾಮದಲ್ಲಿ ಮನೋಜ್‌ ಎಂಬ ಯುವಕನ ಮೇಲೆ ಕಾಡುಕೋಣ ದಾಳಿ ನಡೆಸಿದೆ. ಅವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Chitradurga: ಗಿರ್‌, ಮಲೆನಾಡು ಗಿಡ್ಡ ತಳಿ ಹಸುಗಳಿಂದ ಲಕ್ಷಾಂತರ ಲಾಭ: ಸಗಣಿ-ಗಂಜಲಕ್ಕೆ ಭಾರಿ ಬೆಲೆ

ಕಾಡಾನೆಗಳ ದಾಳಿಯಿಂದ ಈಗಾಗಲೇ ಸಾಕಷ್ಟುಸಾವು-ನೋವು, ಕಷ್ಟ- ನಷ್ಟಗಳನ್ನು ಅನುಭವಿಸಿರುವ ಬೆನ್ನಲ್ಲೇ ಕಾಡು ಕೋಣಗಳ ಹಾವಳಿ ತೀವ್ರಗೊಳ್ಳುತ್ತಿರುವುದು ಮಲೆನಾಡಿಗರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದಿದ್ದಾರೆ. ಅರಣ್ಯ ಇಲಾಖೆಯಲ್ಲಿ ಈಗ ಯುವ ಅಧಿಕಾರಿಗಳ ತಂಡ ಇದ್ದು, ಪ್ರಾಣಿಗಳ ಹಾವಳಿ ತಡೆಗೆ ಚುರುಕಿನ ಕಾರ್ಯಾಚರಣೆ ನಡೆಸಬೇಕು. ಪಟಾಕಿಗಳನ್ನು ಸಿಡಿಸಿ, ಪ್ರಾಣಿಗಳನ್ನು ಬೆದರಿಸುವಂತಹ ಸವಕಲು ಕ್ರಮವನ್ನು ಕೈಬಿಟ್ಟು ಅವುಗಳನ್ನು ಅರಣ್ಯಕ್ಕೆ ಸ್ಥಳಾಂತರಿಸಿ ಮತ್ತೆ ಅವು ಹೊರಕ್ಕೆ ಬಾರದಂತೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು: ಮಲೆನಾಡಲ್ಲಿ ಮನೆ ಸಮೀಪವೇ ಬರುತ್ತಿರುವ ಕಾಡಾನೆಗಳು, ಆತಂಕದಲ್ಲಿ ಜನತೆ..!

ಕಾಡುಕೋಣ ದಾಳಿಯಿಂದ ಗಾಯಗೊಂಡಿರುವ ಯುವಕ ಮನೋಜ್‌ನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವ ಜೊತೆಗೆ ಅವರ ಕುಟುಂಬ ನಿರ್ವಹಣೆಗೆ ಸೂಕ್ತ ಪರಿಹಾರವನ್ನೂ ನೀಡಬೇಕು ಹಾಗೆಯೇ ಕಳಸಾದಲ್ಲಿ ಕಾಡುಕೋಣ ದಾಳಿುಂದ ಮೃತ ಪಟ್ಟಕೃಷಿಕ ವ್ಯಕ್ತಿಯ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.