ಹುಬ್ಬಳ್ಳಿ(ಮಾ.08): ಇಂದು ವಿಶ್ವಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಾಗಿ ಈ ವಿಶೇಷ ದಿನದಂದು ಸೊಲ್ಲಾಪುರ-ಧಾರವಾಡ ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. ಹೌದು ರೈಲು ಚಾಲನೆಯಿಂದ ಹಿಡಿದು ಎಲ್ಲರೂ  ಮಹಿಳಾ ಸಿಬ್ಬಂದಿಗಳೇ.

 

ಮಹಿಳಾ ಸಿಬ್ಬಂದಿಗಳೇ ಇದ್ದ ರೈಲು ಇಂದು(ಭಾನುವಾರ) ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಸೊಲ್ಲಾಪುರ ಧಾರವಾಡ ರೈಲು ಹೊರಟಿದೆ. ಮಹಿಳಾ ಸಿಬ್ಬಂದಿಗಳ ರೈಲಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಚಾಲನೆ ನೀಡಿದ್ದಾರೆ.

 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಒಂದು ವಾರದ ಹಿಂದೆ ಬೆಂಗಳೂರು ಮೈಸೂರು ರೈಲಿನಲ್ಲಿ ಮಹಿಳಾ ಸಿಬ್ಬಂದಿಗಳೇ ಇದ್ದರು. ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ವೈರಲ್ ವಿಡಿಯೋ ನೋಡಿ ಕೇಂದ್ರ ರೈಲ್ವೆ ಸಚಿವರು ಒಂದು ವಾರದ ಮೊದಲೇ ಮಹಿಳಾ ಸಿಬ್ಬಂದಿಗೆ ಮಹಿಳಾ ದಿನಾಚರಣೆ ಶುಭಾಶಯ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಹಿಳಾ ದಿನಾಚರಣೆಯ ಸ್ಪೆಷಲ್: ಸೊಲ್ಲಾಪುರ-ಧಾರವಾಡ ರೈಲಿನ ಮಹಿಳಾ ಸಿಬ್ಬಂದಿಯ ಕೆಲ ಫೋಟೋಸ್