Asianet Suvarna News Asianet Suvarna News

ರಾಯಚೂರು, ಕೊಪ್ಪಳ ಆಯ್ತು ಈಗ ಯಾದಗಿರಿ ಸಂಪೂರ್ಣ ಲಾಕ್‌!

*ಹಳ್ಳಿಗಳಲ್ಲಿ ಹೆಚ್ಚಾಗುತ್ತಿದೆ ಕೊರೋನಾ ಸೊಂಕಿನ ಪ್ರಮಾಣ
* ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳು ಸಂಪೂರ್ಣ ಲಾಕ್‌ಡೌನ್
* ರಾಯಚೂರು, ಕೊಪ್ಪಳ ಆಯ್ತು ಈಗ ಯಾದಗಿರಿ ಜಿಲ್ಲೆ ಸರದಿ

Full Lockdown In Yadagir Over Corona From May 19 to 21 rbj
Author
Bengaluru, First Published May 16, 2021, 10:08 PM IST

ಯಾದಗಿರಿ, (ಮೇ.16): ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವಿಟಿ ಕಡಿಮೆಯಾಗುತ್ತಿದೆ. ಆದ್ರೆ, ಇದೀಗ ಕೋವಿಡ್ 2ನೇ ಅಲೆಯಲ್ಲಿ ಸೋಂಕಿನ ಪ್ರಕರಣಗಳು ಹಳ್ಳಿಗಳಲ್ಲಿ ಹೆಚ್ಚವಾಗುತ್ತಿದೆ.

 ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಮಾಡಲಾಗುತ್ತಿದೆ. ರಾಯಚೂರು ಕೊಪ್ಪಳ ಆಯ್ತು ಇದೀಗ ಯಾದಗಿರಿ ಜಿಲ್ಲೆ ಸರದಿ

ಗ್ರಾಮೀಣ ಭಾಗದಲ್ಲಿ ಕೊರೋನಾ ಸ್ಫೋಟ; ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ!

ಹೌದು.. ಯಾದಗಿರಿ ಜಿಲ್ಲೆಯಲ್ಲಿ 3 ದಿನ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಇಂದು (ಭಾನುವಾರ) ಆದೇಶ ಹೊರಡಿಸಿದ್ದಾರೆ.

ಮೇ19ರ ಬೆಳಿಗ್ಗೆ 6 ಗಂಟೆಯಿಂದ 21ರ ಬೆಳಿಗ್ಗೆ 6 ಗಂಟೆಯವರೆಗೆ ಅಗತ್ಯ ವಸ್ತುಗಳಾದ ಹಾಲು, ಆಸ್ಪತ್ರೆ, ಔಷಧಿ ಅಂಗಡಿ ಹಾಗೂ ಅಂಬ್ಯುಲೆನ್ಸ್, ಪೆಟ್ರೋಲ್ ಪಂಪ್ ಸೇರಿ ಇತರೆ ತುರ್ತು ಸೇವೆಗಳನ್ನು ಹೊರತು ಪಡಿಸಿ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಈ ವೇಳೆಯಲ್ಲಿ ತರಕಾರಿ ಮತ್ತು ಕಿರಾಣಿ ಅಂಗಡಿಗಳು ಸಹ ಬಂದ್ ಆಗಿರಲಿದೆ. ಹೋಟೆಲ್‌ಗಳಲ್ಲಿ ನೀಡುತ್ತಿದ್ದ ಪಾರ್ಸಲ್‌ಗೂ ಅವಕಾಶವಿರಲ್ಲ. ದಿನಪತ್ರಿಕೆ, ಎಟಿಎಂ ಎಂದಿನಂತೆ ಇರಲಿದೆ. ಎಲ್ಲಾ ರೀತಿಯ ಸರಕು ಸಾಗಣೆ ಮತ್ತು ಖಾಲಿ ವಾಹನಗಳಿಗೆ ಅನುಮತಿ, ಆಸ್ಪತ್ರೆಗೆ ಹೋಗುವವರು ಚೆಕ್ ಪೋಸ್ಟ್‌ಗಳಲ್ಲಿ ವೈದ್ಯಕೀಯ ದಾಖಲೆ ತೋರಿಸುವುದು, ಅಂತ್ಯ ಸಂಸ್ಕಾರಕ್ಕೆ ಕೇವಲ 5 ಜನರಿಗೆ ಅವಕಾಶ, ಮದುವೆ ಸಮಾರಂಭಕ್ಕೆ ತಹಸೀಲ್ದಾರರಿಂದ ಅನುಮತಿ ಪಡೆದು 10 ಜನರು ಮಾತ್ರ ಮನೆಯ ಒಳಗಡೆ ನಡೆಸಬಹುದು ಹಾಗೂ ಆಸ್ಪತ್ರೆಗಳ ಒಳ ಹಾಗೂ ಹೊರ ರೋಗಿಗಳ ಉಪಹಾರ/ಊಟದ ವ್ಯವಸ್ಥೆ ಕಲ್ಪಿಸುವುದು ಸಂಬಂಧಪಟ್ಟ ಆಸ್ಪತ್ರೆಗಳ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Follow Us:
Download App:
  • android
  • ios