ಬೀದರ್‌ನಲ್ಲಿ ಡಿ. 17ರಂದು ಸೌಹಾರ್ದ ಟಿ-10 ಕ್ರಿಕೆಟ್ ಟೂರ್ನಿ
ನೆಹರು ಕ್ರೀಡಾಂಗಣದಲ್ಲಿ ಡಿ. 17ರಂದು ನಡೆಯಲಿರುವ ಕ್ರಿಕೆಟ್ ಟೂರ್ನಿಗೆ ಅಗತ್ಯ ಸಿದ್ದತೆಗಳನ್ನು ಈಗಾಗಲೇ ಪತ್ರಕರ್ತರ ಕ್ರಿಕೆಟ್ ಕ್ಲಬ್ ಮಾಡಿಕೊಂಡಿದ್ದು ಜಿಲ್ಲಾಡಳಿತ ಅಗತ್ಯ ಸಹಯೋಗ ನೀಡಲಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಇಲಾಖೆಗಳ ತಂಡಗಳನ್ನು ಸೇರಿಸಿಕೊಂಡು ಟೂರ್ನಿ ಆಯೋಜಿಸೋಣ ಎಂದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ್(ಡಿ.13): ಇದೇ ಡಿ. 17ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಹಾಗೂ ಬೀದರ್ ಪತ್ರಕರ್ತರ ಕ್ರಿಕೆಟ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿರುವ ಬೀದರ್ ಚಾಂಪಿಯನ್ಸ್ ಟ್ರೋಫಿ ಸೌಹಾರ್ದ ಟಿ-10 ಕ್ರಿಕೆಟ್ ಟೂರ್ನಾಮೆಂಟ್ ಪೋಸ್ಟರ್ ಅನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು(ಬುಧವಾರ) ಆಯೋಜಿಸಲಾಗಿದ್ದ ಸಭೆಯಲ್ಲಿ ಟೂರ್ನಾಮೆಂಟ್ ಪೋಸ್ಟರ್ ಬಿಡುಗಡೆಗೊಳಿಸಿದ ಅವರು ವಿವಿಧ ಇಲಾಖೆಗಳು ಹಾಗೂ ಪತ್ರಿಕಾ ಮಾಧ್ಯಮದವರ ಮಧ್ಯದಲ್ಲಿ ಸಮನ್ವಯತೆ ಹಾಗೂ ಸೌಹಾರ್ದತೆಯ ವಾತಾವರಣ ಬೆಳೆಯಲು ಕ್ರೀಡೆ ಸೂಕ್ತ ವೇದಿಕೆಯಾಗಿದೆ ಎಂದರು.
ಬೀದರ್: ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಶಾಸಕ ಶೈಲೇಂದ್ರ ಬೆಲ್ದಾಳೆ
ನೆಹರು ಕ್ರೀಡಾಂಗಣದಲ್ಲಿ ಡಿ. 17ರಂದು ನಡೆಯಲಿರುವ ಕ್ರಿಕೆಟ್ ಟೂರ್ನಿಗೆ ಅಗತ್ಯ ಸಿದ್ದತೆಗಳನ್ನು ಈಗಾಗಲೇ ಪತ್ರಕರ್ತರ ಕ್ರಿಕೆಟ್ ಕ್ಲಬ್ ಮಾಡಿಕೊಂಡಿದ್ದು ಜಿಲ್ಲಾಡಳಿತ ಅಗತ್ಯ ಸಹಯೋಗ ನೀಡಲಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಇಲಾಖೆಗಳ ತಂಡಗಳನ್ನು ಸೇರಿಸಿಕೊಂಡು ಟೂರ್ನಿ ಆಯೋಜಿಸೋಣ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್ಎಲ್ ಮಾತನಾಡಿ, ಟೂರ್ನಮೆಂಟ್ ವೈವಿಧ್ಯಮಯವಾಗಿರಲಿ. ಸೌಹಾರ್ದ ಕ್ರಿಕೆಟ್ ಟೂರ್ನಿ ಪ್ರತಿಯೊಂದು ಹಂತದಲ್ಲಿ ಮಾದರಿಯಾಗಿರುವಂತೆ ಆಯೋಜಿಸೋಣ, ಪ್ರತಿಯೊಂದು ತಂಡದಲ್ಲಿ 7 ಜನ ಅಧಿಕಾರಿಗಳು ಹಾಗೂ ಇನ್ನುಳಿದ 4 ಜನ ಸಿಬ್ಬಂದಿಗಳನ್ನು ಆಟಗಾರರನ್ನಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡೋಣ ಎಂದರಲ್ಲದೆ ಟೂರ್ನಿಗೆ ಪೊಲೀಸ್ ಇಲಾಖೆ ಕೂಡ ಅಗತ್ಯ ಸಹಯೋಗ ನೀಡಲಿದೆ ಎಂದರು.
ಸೈಕಲ್ ಏರಿ ಜಾಗೃತಿ ಮೂಡಿಸಿದ ಬೀದರ್ ಡಿಸಿ, ಎಸ್ಪಿ..!
ಜಿಪಂ ಸಿಇಒ ಶಿಲ್ಪಾ ಎಂ ಅವರು ಮಾತನಾಡಿ, ಜಿಲ್ಲಾ ಪಂಚಾಯತ್ ವತಿಯಿಂದಲೂ ಕ್ರಿಕೆಟ್ ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಮುಂದಿನ ದಿನಗಳಲ್ಲಿ ಆರ್ಡಿಪಿಆರ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಮಧ್ಯ ಟೂರ್ನಿ ಆಯೋಜಿಸಲು ಜಿಲ್ಲಾಧಿಕಾರಿಗಳು ನೀಡಿರುವ ಸಲಹೆಯನ್ನು ಶೀಘ್ರದಲ್ಲಿ ಕಾರ್ಯಗತಗೊಳಿಸಲು ಮುಂದಾಗುತ್ತೇವೆ ಎಂದರು.
ಬೀದರ್ ಪತ್ರಕರ್ತರ ಕ್ರಿಕೆಟ್ ಕ್ಲಬ್ ವ್ಯವಸ್ಥಾಪಕ, ಪತ್ರಕರ್ತ ಅಪ್ಪಾರಾವ್ ಸೌದಿ ಮಾತನಾಡಿ, ಟೂರ್ನಿಯಲ್ಲಿ ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್, ಬೀದರ್ ಪತ್ರಕರ್ತರ ಕ್ರಿಕೆಟ್ ಕ್ಲಬ್, ಬ್ರಿಮ್ಸ್ ವೈದ್ಯಾಧಿಕಾರಿಗಳ ಹಾಗೂ ಪಶು ಸಂಗೋಪನಾ ಇಲಾಖೆಯ ತಂಡ ಸೇರಿದಂತೆ 6 ತಂಡಗಳು ಭಾಗವಹಿಸಲಿದ್ದು, ಚಾಂಪಿಯನ್ಸ್ ಟ್ರೋಫಿ ತಲಾ 10 ಓವರ್ಗಳ ಪಂದ್ಯ ಆಗಿರಲಿದ್ದು ನಾಕ್ ಔಟ್ ಟೂರ್ನಿ ಇದಾಗಿದ್ದರಿಂದ ಒಟ್ಟು 5 ಪಂದ್ಯಗಳು ನಡೆಯಲಿವೆ, ಡಿ. 17ರಂದು ಬೆಳಿಗ್ಗೆ 8ರಿಂದ ಪಂದ್ಯಾವಳಿ ಆರಂಭವಾಗಲಿದೆ ಎಂದು ವಿವರಿಸಿದರು.