ಸೋಮವಾರ ಬೆಳಗ್ಗೆ ಇಬ್ಬರು ಅಧಿಕಾರಿಗಳು ಜಿಲ್ಲಾಧಿಕಾರಿಗಳ ನಿವಾಸದಿಂದ ಅಗ್ನಿಶಾಮಕ ದಳ ಕಚೇರಿ, ಸಿದ್ದಾರ್ಥ ಕಾಲೇಜಿನ ಮಾರ್ಗವಾಗಿ ತಮ್ಮ ತಮ್ಮ ಕಚೇರಿಗಳಿಗೆ ಸೈಕಲ್‌ ತುಳಿಯುತ್ತ ತಲುಪಿದರು. ಈ ವೇಳೆ ರಸ್ತೆ ಮಾರ್ಗವಾಗಿ ಸಾಗುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಅಧಿಕಾರಿಗಳ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೀದರ್(ಡಿ.05):  ರಸ್ತೆ ಸುರಕ್ಷತಾ ಅಭಿಯಾನದ ಹಿನ್ನೆಲೆಯಲ್ಲಿ ಜನರಿಗೆ ಅರಿವು ಮೂಡಿಸಲು ಸೋಮವಾರ ಬೀದರ್‌ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಅವರು ಸೈಕಲ್‌ ಮೂಲಕ ಕಚೇರಿಗೆ ತೆರಳಿದರು.

ಸೋಮವಾರ ಬೆಳಗ್ಗೆ ಇಬ್ಬರು ಅಧಿಕಾರಿಗಳು ಜಿಲ್ಲಾಧಿಕಾರಿಗಳ ನಿವಾಸದಿಂದ ಅಗ್ನಿಶಾಮಕ ದಳ ಕಚೇರಿ, ಸಿದ್ದಾರ್ಥ ಕಾಲೇಜಿನ ಮಾರ್ಗವಾಗಿ ತಮ್ಮ ತಮ್ಮ ಕಚೇರಿಗಳಿಗೆ ಸೈಕಲ್‌ ತುಳಿಯುತ್ತ ತಲುಪಿದರು. ಈ ವೇಳೆ ರಸ್ತೆ ಮಾರ್ಗವಾಗಿ ಸಾಗುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಅಧಿಕಾರಿಗಳ ಈ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಅಶೋಕ್‌ಗೆ ಅವರ ಪಕ್ಷದಲ್ಲೆ ನೆಲೆಯಿಲ್ಲ: ಸಚಿವ ಈಶ್ವರ ಖಂಡ್ರೆ ಲೇವಡಿ

ಒಂದು ದಿನ ಸೈಕಲ್‌ ಬಳಸಲು ಕರೆ: 

ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಅವರು ಎಲ್ಲ ಇಲಾಖೆ ಅಧಿಕಾರಿಗಳು ವಾರದಲ್ಲಿ ಒಂದು ದಿನ ಸೋಮವಾರ ಬೈಸಿಕಲ್‌ ಮೇಲೆ ತಮ್ಮ ಕಚೇರಿಗೆ ತೆರಳಬೇಕೆಂದು ಕರೆ ನೀಡಿದರು.