ಕೋಲಾರ(ಜು.25): ಬೆಂಗಳೂರಿನ ಕೆ.ಆರ್‌.ಪುರಂನ ಬ್ರಿಲಿಯಂಟ್‌ ಕೋಚಿಂಗ್‌ ಅಕಾಡೆಮಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳ ಕಾಲ ಉಚಿತ ತರಬೇತಿ ನೀಡಲಾಗುತ್ತಿದ್ದು, ಬಡ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕೆಂದು ನಿರ್ದೇಶಕ ವಿಜಯ್‌ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಎಎಸ್‌, ಪಿಎಸ್‌ಐ, ಎಫ್‌ಡಿಎ, ಪಿಡಿಎ, ಆರ್‌ಆರ್‌ಬಿ ಹಾಗೂ ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಸಕ್ತ ಬಡ, ಮಾಧ್ಯಮ ವರ್ಗದ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 100 ಮಂದಿ ಅಭ್ಯರ್ಥಿಗಳಿಗೆ ಉಚಿತ ಶಿಬಿರ ನಡೆಸಲಾಗುತ್ತಿದೆ ಎಂದರು.

ಕುವೆಂಪು ವಿವಿ: ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ

ನೂತನ ಬ್ಯಾಚ್‌ ಆರಂಭ:

ಜು.26ರಿಂದ ನೂತನ ಬ್ಯಾಚ್‌ಗಳು ಆರಂಭವಾಗುತ್ತಿದ್ದು, ಅಸಕ್ತ ಅಭ್ಯರ್ಥಿಗಳು ಕೂಡಲೇ ನೇರವಾಗಿ ಅಕಾಡಮಿಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ. ಅಕಾಡೆಮಿಯಲ್ಲಿ ಉತ್ತಮ ಗ್ರಂಥಾಲಯ ಸೌಲಭ್ಯವಿದ್ದು, ತರಗತಿಗಳು ಮುಗಿದ ಬಳಿಕ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಕುಳಿತು ಓದಿಕೊಳ್ಳಬಹುದು.

ಪದವಿ ಹಾಗೂ ಸ್ನಾತಕೋತರ ಪದವಿ ಮುಗಿಸಿ ಅಂತಿಮ ಸೆಮಿಸ್ಟರ್‌ ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಸಹ ಪ್ರವೇಶ ಪಡೆಯಬಹುದು ಎಂದರು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ 9902829811 ಸಂಪರ್ಕಿಸಬಹುದು. ವಿಳಾಸ ಬ್ರಿಲಿಯಂಟ್‌ ಕೋಚಿಂಗ್‌ ಅಕಾಡಮಿ, ವಿನಾಯಕ ಜ್ಯುವೆಲ್ಲರ್ಸ್‌ ಪಕ್ಕ ಕೆ.ಆರ್‌.ಪುರಂ ಬಸ್‌ ನಿಲ್ದಾಣದ ಹತ್ತಿರ ಬೆಂಗಳೂರು-36 ಸಂಪರ್ಕಿಸಬಹುದು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ