Asianet Suvarna News Asianet Suvarna News

ಶಿವಮೊಗ್ಗ: ಬಡ ರೋಗಿಗಳಿಗೆ ಉಚಿತ ಆಟೋ ಸೇವೆ

ಶಿವಮೊಗ್ಗದಲ್ಲೊಂದು ಯುವಕರ ತಂಡ  ಬಡವರು, ವೃದ್ಧರು, ಗರ್ಭಿಣಿಯರು, ಅಂಗವಿಕಲರು ಹಾಗೂ ಅಪಘಾತ ಸಂಭವಿಸಿದಾಗ ಆಟೋ ಉಚಿತ ಸೇವೆ ನೀಡಲು ಮುಂದಾಗಿದೆ. ಉಚಿತ ಆಟೋಗಳನ್ನು ಸಮರ್ಪಣೆ ಕಾರ್ಯಕ್ರಮಕ್ಕೆ ಎಸ್‌.ಐ. ವಸಂತಕುಮಾರ್‌ ಚಾಲನೆ ನೀಡಿದರು.

Free auto service to needy in Shivamogga
Author
Bangalore, First Published Aug 4, 2019, 3:09 PM IST

ಶಿರಾಳಕೊಪ್ಪ(ಆ.04): ಉಚಿತ ಆಟೋಗಳನ್ನು ಸಮರ್ಪಣೆ ಕಾರ್ಯಕ್ರಮಕ್ಕೆ ಎಸ್‌.ಐ. ವಸಂತಕುಮಾರ್‌ ಚಾಲನೆ ನೀಡಿದರು.ಪಟ್ಟಣದಲ್ಲಿ ಬಡವರು, ವೃದ್ಧರು, ಗರ್ಭಿಣಿಯರು, ಅಂಗವಿಕಲರು ಹಾಗೂ ಅಪಘಾತ ಸಂಭವಿಸಿದಾಗ ಆಟೋ ಉಚಿತ ಸೇವೆಗೆ ಮುಂದಾದ ಯುವಕರ ಕಾರ್ಯ ಶ್ಲಾಘನೀಯ ಎಂದು ಎಸ್‌.ಐ. ವಸಂತಕುಮಾರ್‌ ಹೇಳಿದರು. 

ಪಟ್ಟಣದ ಹಿರೇಕೆರೂರ ರಸ್ತೆಯಲ್ಲಿ ಇತ್ತೇಹಾದ್‌ ಫೌಂಡೇಷನ್‌ ಆಶ್ರಯದಲ್ಲಿ ಪಟ್ಟಣದಲ್ಲಿ ಅಸಹಾಯಕರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ, ಗರ್ಭಿಣಿಯರಿಗೆ ಆಸ್ಪತ್ರೆಗೆ ತೆರಳಲು ಎರಡು ಉಚಿತ ಆಟೋಗಳನ್ನು ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವಜನಾಂಗ ಕೈಗೊಂಡಿರುವ ಈ ಕಾರ್ಯ ಬಡರೋಗಿಗಳಿಗೆ ಅಸಹಾಯಕರಿಗೆ ಅನುಕೂಲದ ಜೊತೆ ಇತರರಿಗೆ ಮಾದರಿ ಸೇವಾ ಕಾರ್ಯವಾಗಿದೆ ಎಂದು ತಿಳಿಸಿದರು.

24 ಗಂಟೆಯೂ ಸೇವೆ ಲಭ್ಯ:

ಇತ್ತೇಹಾದ್‌ ಫೌಂಡೇಷನ್‌ ಅಧ್ಯಕ್ಷ ಸಂಜೀದ್‌ ಮಾತನಾಡಿ, ಶಿರಾಳಕೊಪ್ಪದ ಯುವಜನಾಂಗ ಒಟ್ಟಾಗಿ ಸೇರಿ ಕಷ್ಟದಲ್ಲಿ ಇರುವವರಿಗೆ ಸೇವೆ ಸಲ್ಲಿಸಬೇಕು ಎಂದು ಯೋಚಿಸಿ ಈ ಕಾರ್ಯ ಮಾಡಿದ್ದೇವೆ. ಈ ಆಟೋ ಸೇವೆ ಮಾಡುವ ಮೊದಲು ಆಂಬ್ಯುಲೆನ್ಸ್‌ ಸೇವೆ ಆರಂಭಿಸಬೇಕು ಎಂಬ ಯೋಚನೆ ಇತ್ತು. ಆದರೆ ಮೊದಲು ಈ ಸೇವೆ ಪ್ರಾರಂಭಿಸೋಣ, ನಂತರ ಆ ಕಾರ್ಯದ ಬಗ್ಗೆ ಹಿರಿಯರೊಂದಿಗೆ ಯೋಚಿಸಿ ಮುಂದುವರಿಯೋಣ ಎಂದು ಈ ಸೇವಾ ಕಾರ್ಯ ಪ್ರಾರಂಭಿಸಿದ್ದೇವೆ. ಈ ಕಾರ್ಯ ದಿನದ 24 ಗಂಟೆ ಉಚಿತವಾಗಿ ದೊರಕಲಿದೆ ಎಂದರು.

ಎಲ್ಲ ಧರ್ಮಗಳ ಬಡವರೂ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಇದಕ್ಕೆಲ್ಲ ನಮ್ಮ ಮುಸ್ಲಿಂ ಸಮಾಜದ 30 ಜನರಿಂದ ಪ್ರತಿ ತಿಂಗಳು ಹಣ ಸಂಗ್ರಹಿಸಲಾಗುತ್ತಿದೆ. ಆ ಹಣದಿಂದ ಈ ಸೇವಾ ಕಾರ್ಯ ಮಾಡಲಾಗುತ್ತಿದೆ ಎಂದರು.

200 ಯೂನಿಟ್’ವರೆಗೆ ಉಚಿತ ವಿದ್ಯುತ್: ಭರ್ಜರಿ ಕೊಡುಗೆ ಘೋಷಣೆ!

ಪಪಂ ನೂತನ ಸದಸ್ಯ ಮಕಬುಲ್‌ ಸಾಬ್‌ ಮಾತನಾಡಿ, ಇದು ಒಕ್ಕೂಟದಿಂದ ಸಾರ್ವಜನಿಕರಿಗೆ ಉಚಿತ ಸೇವೆ. ಅತ್ಯಂತ ಉತ್ತಮ ಸೇವಾ ಕಾರ್ಯವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಇತ್ತೇಹಾರ ಫೌಂಡೇಷನ್‌ ಉಪಾಧ್ಯಕ್ಷ ರಬ್ಬಾನಿ, ಕಾರ್ಯದರ್ಶಿಗಳಾಗಿ ಮೊಹಸೀನ್‌, ಇಮ್ರಾನ್‌ ಹಾಗೂ ಸದಸ್ಯರಾದ ನಬೀಮ್‌ ಜಬ್ಬಾರ, ರಿಶೀಲ್‌ ಹಾಗೂ ಪಪಂ ಸದಸ್ಯರಾದ ಮಕಬುಲ್‌, ರಾಜಾಸಾಹೇಬ್‌, ಸಫೀರ್‌ ಸಾದಿಕ್‌ ಮುದಸೀರ್‌, ಮುಯೀಬ್‌ ಸಾಬ್‌ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios