ಶಿರಸಿ(ಜೂ.24): ಜಿಲ್ಲಾ ಆಟೋ ಚಾಲಕರ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಾಗೂ ಆಯಾ ತಾಲೂಕಿನ ಸಂಘದ ಸಹಕಾರದಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಅಂಗವಿಕಲ ಬಡ ಮತ್ತು ಬಸ್‌ ಮತ್ತು ವಾಹನ ಸೌಲಭ್ಯ ಇಲ್ಲದೇ ಇರುವ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಆಟೋ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷ ವಿಶ್ವನಾಥ ಗೌಡ ತಿಳಿಸಿದ್ದಾರೆ.

ಬಹಳ ವರ್ಷಗಳಿಂದ ನಮ್ಮ ಸಂಘ ವಿವಿಧ ರೀತಿಯ ಸಮಾಜ ಸೇವೆ ಕೆಲಸಗಳನ್ನು ನಿರ್ವಹಿಸುತ್ತ ಬಂದಿದೆ. ಈ ವರ್ಷ ಕೊರೋನಾ ಕಾರಣದಿಂದ ಬಸ್‌ ಸಂಪರ್ಕ ಹಿಂದಿನಂತೆ ಸರಿ ಇಲ್ಲದೇ ಇರುವುದರಿಂದ ಹಾಗೂ ಟೆಂಪೋ ಸಂಚಾರ ಇಲ್ಲದೇ ಇರುವುದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಪೂಜೆ ಸಲ್ಲಿಸಲು ಬಂದ ಯುವಕ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು

ಈ ಕಾರಣದಿಂದ ಜಿಲ್ಲಾ ಆಟೋ ಚಾಲಕರ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮತ್ತು ಆಯಾ ತಾಲೂಕಿನ ಆಟೋ ಸಂಘದ ಅಧ್ಯಕ್ಷರ ಸಹಾಯದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಅಂಗವಿಕಲ ಬಡ ಮತ್ತು ಬಸ್‌ ಮತ್ತು ವಾಹನ ಸೌಲಭ್ಯ ಇಲ್ಲದೇ ಇರುವ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ನಡೆಯುವ ಜೂ. 25ರಿಂದ ಜು. 3ರವರೆಗೆ ಉಚಿತ ಆಟೋ ವ್ಯವಸ್ಥೆ ಮಾಡಲು ಉದ್ದೇಶಿದೆ.

ವಿಶ್ವನಾಥ ಗೌಡ, ಶಿರಸಿ 9880179177, ಸಂತೋಷ ನಾಯ್ಕ, ಯಲ್ಲಾಪುರ 6363741649, ಆರ್‌.ಜಿ ನಾಯ್ಕ, ಕುಮಟಾ 9449725444, ಶಿವರಾಜ ಮೇಸ್ತಾ ಹೊನ್ನಾವರ 9880380092, ಕೃಷ್ಣ ನಾಯ್ಕ, ಮುರ್ಡೇಶ್ವರ 9448408713, ಕೃಷ್ಣ ನಾಯ್ಕ ಅರಸಕೇರಿ, ಭಟ್ಕಳ 9916279102, ಭೈರವ ಡಿ ನಾಯ್ಕ, ಅಂಕೋಲಾ 9448530751, ಉದಯ ನಾಯ್ಕ, ಕಾರವಾರ 9986844217, ಬಾಬಾಸಾಬ ದಾಂಡೇಲಿ 8880233797, ಚಂದ್ರು, ಹಳಿಯಾಳ 8861232649, ರೊಬೊರ್ಟ ಲೋಬೋ 9845165506, ನಂದಾ ನಾಯ್ಕ ಸಿದ್ಧಾಪುರ 9880604175 ಆಯಾ ತಾಲೂಕಿನಲ್ಲಿ ವಿದ್ಯಾರ್ಥಿ ಪಾಲಕರು ಸಂಪರ್ಕ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.