ಮಡಿಕೇರಿ(ಜೂ.24): ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಲು ಹುಣಸೂರಿನಿಂದ ಆಗಮಿದ್ದ ಸುಬ್ರಮಣಿ (31) ನೀರಿನಲ್ಲಿ ಮುಳುಗಿ ಮೃತ​ಪ​ಟ್ಟಘಟನೆ ಸೋಮವಾರ ಮುಂಜಾನೆ ನಡೆ​ದಿ​ದೆ.

ಹುಣಸೂರಿನಿಂದ ಬಂದಿದ್ದ ಕುಟುಂಬವೊಂದು ನೀರಿಗೆ ಇಳಿದಿದ್ದಾಗ ಮಣಿಕಂಠ ಎಂಬಾತ ಮುಳುಗತೊಡಗಿದ. ಆತನನ್ನು ಮೇಲೆತ್ತಲು ಹೋದ ಸಹೋದರ ಸುಬ್ರಮಣಿ ಮುಳುಗಿ ಮೃತರಾಗಿದ್ದಾರೆ. ಜೊತೆಯಲ್ಲಿದ್ದ ಪ್ರಮೀಳಾ ಮತ್ತು ಯಶೋದಾ ಕೂಡ ನೀರಲ್ಲಿ ಮುಳುಗಿದ್ದರು. ಕೂಡಲೇ ನೆರವಿಗಾಗಿ ಬೊಬ್ಬೆ ಹೊಡೆದಾಗ ಸ್ಥಳೀಯರಾದ ಗೋಪಾಲ್‌ ಅವರು ಈರ್ವರು ಮಹಿಳೆಯರನ್ನು ರಕ್ಷಿಸಿದರೂ, ಸುಬ್ರಮಣಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ನಿವೃತ್ತ ಎಎಸ್‌ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಮಣಿ​ಕಂಠ ಮತ್ತು ಮೃತ ಸುಬ್ರಮಣಿ ಇಬ್ಬರೂ ಕಾರ್‌ ಮೆಕ್ಯಾನಿಕ್‌ಗಳಾಗಿ ಹುಣಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಮೀಳಾ ಮತ್ತು ಯಶೋಧಾ ಅವರನ್ನು ಗಂಭೀರ ಸ್ಥಿತಿಯಲ್ಲಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವಾಲಯ ಸಮಿತಿ ಸ್ಪಷ್ಟನೆ: ಹುಣಸೂರು ಮೂಲದ ಕುಟುಂಬವು ಭಾಗಮಂಡಲಕ್ಕೆ ಸೋಮವಾರ ಆಗಮಿಸಿದೆ. ಪೂಜೆಗೆಂದು ದೇವಸ್ಥಾನಕ್ಕೆ ಹೋಗುವ ಮುಂಚಿತವಾಗಿ ಅವರ ಸಂಪ್ರದಾಯದಂತೆ ನೀರಿನಲ್ಲಿ ಮುಳುಗೆದ್ದು, ದೇವಸ್ಥಾನಕ್ಕೆ ಹೋಗುವ ನಿಟ್ಟಿನಲ್ಲಿ ನದಿಗೆ ಇಳಿದಿದ್ದಾರೆ. ಈ ಬಗ್ಗೆ ದೇವಸ್ಥಾನದ ಸಂಪ್ರದಾಯ ಇಲ್ಲ. ಕುಟುಂಬದ ಸದಸ್ಯರು ಪಿಂಡ ಪ್ರದಾನ, ಕೇಶ ಮುಂಡನಕ್ಕಾಗಿ ಭಾಗಮಂಡಲಕ್ಕೆ ಆಗಮಿಸಿಲ್ಲ. ಇವರ ಮನೆಯ ಓರ್ವ ಸದಸ್ಯ ಕಳೆದ ವರ್ಷ ಮೃತಪಟ್ಟಿದ್ದು, ಈ ಸಂಬಂಧ ವರ್ಷದ ಪೂಜೆಗೆಂದು ಭಾಗಮಂಡಲಕ್ಕೆ ಆಗಮಿಸಿದ್ದರು.

ಎಡ ಅಂಗೈ ಕಳೆ​ದು​ಕೊಂಡರೂ ಮಾಸ್ಕ್‌ ಹೊಲೀತಾಳೆ ದಿವ್ಯಾಂಗ ಬಾಲಕಿ..!

ನದಿಗೆ ಇಳಿದ ವೇಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರ ಕುಟುಂಬದ ಸದಸ್ಯರು ಕಾಪಾಡಲು ನೀರಿಗೆ ಇಳಿದಿದ್ದಾರೆ. ನದಿಗೆ ಇಳಿದು ನೀರಿನಲ್ಲಿ ಮುಳುಗುತ್ತಿದ್ದ ಒಟ್ಟು ಮೂರು ಮಂದಿಯನ್ನು ದೇವಸ್ಥಾನ ಕಾವಲು ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ರಕ್ಷಿಸಲು ಪ್ರಯತ್ನಿಸಿದರೂ, ನೀರಿನಲ್ಲಿ ಮುಳುಗಿದ್ದ ಸುಬ್ರಮಣಿ ಎಂಬುವವರು ಅಷ್ಟರಲ್ಲೇ ಮೃತರಾಗಿರುವುದು ಕಂಡುಬಂದಿದೆ. ರಕ್ಷಿಸಲ್ಪಟ್ಟಇಬ್ಬರು ಸದಸ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಶ್ರೀ ಭಗಂಡೇಶ್ವರ ಸಮೂಹ ದೇವಾಲಯದ ಕಾರ್ಯನಿರ್ವಹಣಾಧಿ​ಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.