*  ಬೀದರ್‌ ನಗರದ ಇಸ್ಮಾಯಿಲ್ ಖಾದ್ರಿ ದರ್ಗಾ ಹತ್ತಿರದ ಕೆರೆಯಲ್ಲಿ ನಡೆದ ದುರ್ಘಟನೆ*  ಹೈದರಾಬಾದ್‌ ಮೂಲಕ ನಾಲ್ವರ ದುರ್ಮರಣ*  ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು 

ಬೀದರ್(ಅ.03): ಕೆರೆಯಲ್ಲಿ(Lake) ಈಜಲು ಹೋಗಿ ನಾಲ್ವರು ನೀರುಪಾಲಾದ ಘಟನೆ ಜಿಲ್ಲೆಯ ಹುಮನಾಬಾದ್(Humnabad0 ತಾಲೂಕಿನ ಘೋಡವಾಡಿಯಲ್ಲಿ ಇಂದು(ಭಾನುವಾರ) ನಡೆದಿದೆ. ಸೈಯದ್ ಅಕ್ಬರ್ ಉಸ್ಮಾನ್(17), ಮಹಮ್ಮದ್ ಖಾನ್(19), ಸೈಯದ್ ಜುನೈದ್ (15), ಮಹಮ್ಮದ್ ಫಾದಖಾನ್ ಸಲ್ಲೀಂ(18) ಮೃತ ದುರ್ದೈವಿಗಳಾಗಿದ್ದಾರೆ. 

ಇಸ್ಮಾಯಿಲ್ ಖಾದ್ರಿ ದರ್ಗಾ ಹತ್ತಿರದ ಕೆರೆಯಲ್ಲಿ ನಾಲ್ವರು ಈಜಲು ಹೋಗಿದ್ದರು. ಮೃತಪಟ್ಟ ನಾಲ್ವರು ಹೈದರಾಬಾದ್‌ನ(Hyderabad) ಬೊರಾಬಂಡಾ ನಿವಾಸಿಗಳು ಎಂದು ತಿಳಿದು ಬಂದಿದೆ. 

ದಾವಣಗೆರೆ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ನಾಲ್ವರ ಪೈಕಿ ಸೈಯದ್ ಅಕ್ಬರ್‌ನ ಶವ ಪತ್ತೆಯಾಗಿದೆ. ಉಳಿದವರ ಶವಗಳಿಗಾಗಿ ಅಗ್ನ ಶಾಮಕದಳದ ಸಿಬ್ಬಂದಿಯಿಂದ ಹುಡುಕಾಟ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಹುಮನಾಬಾದ್ ಪೊಲೀಸ್(Police) ಠಾಣೆ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.