ಧಾರವಾಡ(ನ.15): ಜೂಜಾಟದಲ್ಲಿ ತೊಡಗಿದವರ ಪೈಕಿ ನಾಲ್ವರು ‌ಕಾನ್ಸಟೇಬಲ್‌ಗಳನ್ನ ಅಮಾನತು ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಡಿವೈಎಸ್ಪಿ ನಾಯಕ್‌ ಅವರು ದಾಳಿ ಮಾಡಿದ ವೇಳೆ ಪೊಲೀಸರ ಜೂಜಾಟ ಬಯಲಿಗೆ ಬಂದಿತ್ತು. ಗರಗ, ಧಾರವಾಡ ಗ್ರಾಮೀಣ ಠಾಣೆ ಹಾಗೂ ಡಿಎಆರ್ ಪೊಲೀಸರು ಸೇರಿ ಜೂಜಾಟ ನಡೆಸಿದ್ದರು. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಕೃಷ್ಣಕಾಂತ ಅವರು ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ ಬಾಗವಿ, ಆತ್ಮಾನಂದ ಬೆಟಗೇರಿ, ಇಸ್ಮಾಯಿಲ್ ಸಯ್ಯದನವರ್ ಹಾಗೂ ಮೈಯುದ್ದೀನ ಮುಲ್ಲಾ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಧಾರವಾಡ ತಾಲೂಕಿನ ಗರಗ ಗ್ರಾಮದ ಬಿಜೆಪಿ ಮುಖಂಡನ ಜೊತೆ ಸೇರಿ ಈ ಮೂವರು ಪೊಲೀಸರು ಜೂಜಾಟದಲ್ಲಿ ತೊಡಗಿದ್ದರು.

 ನಾವೇನು ಕಮ್ಮಿ... ಜೂಜಾಡುತ್ತಿದ್ದ ಉಪ್ಪಾರಪೇಟೆ ಪೊಲೀಸರು ಸಸ್ಪೆಂಡ್!

ಜೂಟಾಟವನ್ನ ತಡೆಯಬೇಕಾದ ಪೊಲೀಸರು ಇಂತಹ ಕೃತ್ಯದಲ್ಲಿ ಭಾಗಿಯಾಗಿರುವು ಮಾತ್ರ ವಿಪರ್ಯಾಸವೇ ಸರಿ. ಇಂತಹ ಪೊಲೀಸರಿಂದ ಇಡೀ ಇಲಾಖೆಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಸಾರ್ವಜನಿಕರ ಮಾತಾಗಿದೆ.