ಬೆಂಗಳೂರು(ನ. 12) ಅದರ್ ಬಾಹರ್ ಸೇರಿದಂತೆ ಜೂಜಾಟದಲ್ಲಿ ತೊಡಗಿದ್ದ ಖದೀಮರ ಮೇಲೆ ಪೊಲೀಸರು ದಾಳಿ ಮಾಡಿ ದಸ್ತಗಿರಿ ಮಾಡುವುದು ಸಾಮಾನ್ಯ ಸುದ್ದಿ. ಆದರೆ ಇಲ್ಲಿ  ಪೊಲೀಸರೆ ಜೂಜಾಟದಲ್ಲಿ ಮೈಮರೆತಿದ್ದರು.

ಪೊಲೀಸ್ ಸಿಬ್ಬಂದಿಗಳೇ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ ಪ್ರಕರಣ ಬೆಳಕಿಗೆ ಬಂದಿದ್ದರು ಉಪ್ಪಾರಪೇಟೆ ಠಾಣೆಯ ಇಬ್ಬರು ಕಾನ್ಸ್ಟೇಬಲ್ ಗಳನ್ನು ಅಮಾನತು  ಮಾಡಲಾಗಿದೆ.

ಎಕ್ಕ..ರಾಜ..ರಾಣೀ ಎನ್ನುತ್ತಲೇ ಪ್ರಾಣ ಬಿಟ್ಟ

ಮಲ್ಲೇಶ್ ಹಾಗೂ ಗವಿಸಿದ್ದೇಶ್ ಅಮಾನತುಗೊಂಡಿದ್ದಾರೆ. ಅಕ್ಟೋಬರ್ 19ರಂದು ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣ ದಾಖಲಾಗಿತ್ತು.

ಅಂದರ್ ಬಾಹರ್ ಆಡುತ್ತಿದ್ದ ಹೋಟೆಲ್ ರೂಮ್ ಮೇಲೆ ಪುಟ್ಟೇನಹಳ್ಳಿ ಪೊಲೀಸರು ದಾಳಿ ಮಾಡಿದ್ದಾಗ ಈ ಪೊಲೀಸ್ ಅಧಿಕಾರಿಗಳು ಸಿಕ್ಕಿಬಿದ್ದಿದ್ದರು.