ಕೋಲಾರ(ಮೇ 20): ನಾನು ಇದುವರೆಗೂ 20 ಲಕ್ಷ ಕೋಟಿ ನೋಡಿಲ್ಲ, ಒಂದು ಲಕ್ಷ ಹಣ ಕೈಗೆ ಕೊಟ್ರೆ ರಾತ್ರಿವರೆಗೂ ಎಣಿಸುತ್ತೇನೆ, 20 ಲಕ್ಷ ಕೋಟಿಗೆ ಎಷ್ಟುಸೊನ್ನೆ ಅಂತಾನೂ ಗೊತ್ತಿಲ್ಲ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಪ್ರಕಟಿಸಿರುವ ವಿಶೇಷ ಪ್ಯಾಕೇಜ್‌ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 10 ಸಾವಿರದ ವರೆಗೂ ಸರಾಗವಾಗಿ ಎಣಿಸಬಲ್ಲೆ. ಆನಂತರ ನನಗೇನೂ ಗೊತ್ತಿಲ್ಲ ಎಂದು ಟೀಕಿಸಿದರು.

ರಾಹುಲ್‌ ಹೇಳಿಕೆಗೆ ಸಮರ್ಥನೆ

ಹಾಗಾದರೆ ಇದು ಬೋಗಸ್ಸೇ ಎಂದು ಕೇಳಿದ ಪ್ರಶ್ನೆಗೂ ನಾನು ಅಂತಹ ಕಠಿಣವಾದ ಭಾಷೆಯಿಂದಲೂ ಟೀಕಿಸಲಾರೆ. ರಾಹುಲ್‌ ಗಾಂಧಿ ಅವರು ರಾಷ್ಟ್ರಮಟ್ಟದ ನಾಯಕರು, ಅವರು ನೀಡಿರುವ ಹೇಳಿಕೆ ಬಗ್ಗೆ ತಜ್ಣರ ಬಳಿ ಚರ್ಚಿಸಿ ಪ್ರತಿಕ್ರಿಯೆ ನೀಡಿರುತ್ತಾರೆ. ಅವರ ನೀಡಿರುವ ಹೇಳಿಕೆಯನ್ನು ಸಮರ್ಥನೆ ಮಾಡುತ್ತೇನೆ ಅಷ್ಟೇ ಎಂದರು.

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ

ರಾಜಕಾರಣದಲ್ಲಿ ಹೇಳಿದಂತೆ ನಡೆದುಕೊಂಡ್ರೆ ಶ್ರೀರಾಮಚಂದ್ರ ಆಗ್ತೇವೆ. ರಾಜಕಾರಿಣಿಗಳು ಅಂದ್ಮೇಲೆ ಹೇಳಿದಂಗೆ ನಡೆದುಕೊಳ್ಳಬೇಕು ಅಂತೇನು ಇಲ್ವಲ್ಲಾ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಇದೇ ಕಡೆ ಚುನಾವಣೆ ಅಂತ ಹೇಳಿದ್ದು ನಿಜ. ಆದರೆ ಇನ್ನೂ ಸಮಯ ಇದೆಯಲ್ಲಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಿಡುವುದನ್ನು ಆಮೇಲೆ ನೋಡಿಕೊಳ್ಳೋಣ ಎಂದರು.

ನಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು

ಇತ್ತೀಚೆಗೆ ತಮ್ಮ ತೋಟದಲ್ಲಿ ಪೈಪುಗಳನ್ನು ಹೊತ್ತು ಕೆಲಸ ಮಾಡುತ್ತಿದ್ದ ಅವರನ್ನು ನಿಮಗೆ ಕೂಲಿ ಕೆಲಸ ಮಾಡುವವರು ಸಿಗಲಿಲ್ಲವೇ ನೀವೇ ಪೈಪುಗಳನ್ನು ಹೊರುತ್ತಿದ್ದಿರಿ ಎಂದು ಕೇಳಿದ ಪ್ರಶ್ನೆಯ ನಯವಾಗಿಯೇ ಉತ್ತರಿಸಿದ ಅವರು ಅವತ್ತು ತೋಟದಲ್ಲಿ ಪೈಪುಗಳನ್ನು ಅಳವಡಿಸುವ ಕೆಲಸವಿತ್ತು ನಾವು ನಾಲ್ಕೈದು ಜನರು ಒಟ್ಟಾಗಿ ಸೇರಿ ಕೆಲಸ ಮಾಡಿಕೊಂಡೆವು. ಯಾರೋ ಮೊಬೈಲ್‌ನಲ್ಲಿ ಹಿಡಿದು ಅದನ್ನು ಹರಿಯ ಬಿಟ್ಟಿದ್ದಾರೆ ನಮ್ಮ ಕೆಲಸ ನಾವೇ ಮಾಡಿಕೊಂಡರೆ ಏನಿದೆ ತಪ್ಪು ಎಂದರು.

ಗಲ್ಫ್‌ನಿಂದ 2ನೇ ಸುತ್ತಿನಲ್ಲಿ 49 ಮಂದಿ ಊರಿಗೆ: ನೇರವಾಗಿ ಕ್ವಾರಂಟೈನ್‌ಗೆ

ನಾನು ಪಾಯಖಾನೆ ಮಾಡಿಕೊಂಡರೆ ಅದನ್ನು ನಾನೇ ತೊಳೆದುಕೊಳ್ಳಬೇಕು, ನನಗೂ ಕೈಕಾಲು ಗಟ್ಟಿಯಾಗಿದೆಯಲ್ಲಾ, ಅಂಗವಿಕಲನಾಗಿದ್ರೆ, ವಯಸ್ಸಾಗಿದ್ರೆ ಬೇರೆಯವ್ರು ಬಂದು ತೊಳಿಬೇಕು, ನಾನೀಗ ಚೆನ್ನಾಗಿಯೇ ಇದ್ದೇನಲ್ಲವೇ ಎಂದರು.