ಬೆಳಗಾವಿ(ಅ.30): ಉಮೇಶ ಕತ್ತಿ ಮಂತ್ರಿನೇ ಆಗಲಿಲ್ಲ. ಇನ್ನು ಮುಖ್ಯಮಂತ್ರಿ ಹೇಗೆ ಆಗುತ್ತಾರೆ ಎಂದು ಮಾಜಿ ಸಂಸದ ರಮೇಶ ಕತ್ತಿ ಅವರು ಪ್ರಶ್ನಿಸಿದ್ದಾರೆ. 

ಗುರು​ವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ ಕತ್ತಿ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಬೇಕೆಂಬುದು ಈ ಭಾಗದ ಜನತೆಯ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ.

ಭೀಕರ ಪ್ರವಾಹ: 'ಮನೆ ನಿರ್ಮಿಸಿಕೊಳ್ಳದಿದ್ದರೆ ಹಣ ವಾಪಸ್‌' 

ಮುಖ್ಯಮಂತ್ರಿ ಸ್ಥಾನಕ್ಕೆ ಉಮೇಶ ಕತ್ತಿ ಹೆಸರು ಮುಂಚೂಣಿಯಲ್ಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ ಕತ್ತಿ, ಉಮೇಶ ಕತ್ತಿ ಮಂತ್ರಿನೇ ಆಗಲಿಲ್ಲ. ಇನ್ನು ಮುಖ್ಯಮಂತ್ರಿ ಹೇಗೆ ಆಗುತ್ತಾರೆ. ಸಿಪಾಯಿ ಆಗಲಿಕ್ಕೆ ಆಗುತ್ತಿಲ್ಲ. ಇನ್ನು ಡಿಸಿ ಆಗುತ್ತಾನೆಯೇ? ಎಂದು ಚಟಾಕಿ ಹಾರಿಸಿದ್ದಾರೆ.