ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನದವರೆಗೂ ಲಾಕ್‌ಡೌನ್‌ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಅಪಾಯಕ್ಕೆ ನಾವುಗಳೇ ಆಹ್ವಾನ ನೀಡಬಾರದು ಎಂದು ಮಾಜಿ ಶಾಸಕ, ಮಾಜಿ ಶಾಸಕರ ವೇದಿಕೆ ರಾಜ್ಯಾಧ್ಯಕ್ಷ ಎಚ್‌.ಎಂ.ಚಂದ್ರಶೇಖರಪ್ಪ ಒತ್ತಾಯಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.06): ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿದಲ್ಲಿ ಶಿವಮೊಗ್ಗ ಹಸಿರು ವಲಯದಿಂದ ಕೆಂಪು ವಲಯಕ್ಕೆ ಹೋಗುವ ಅಪಾಯ ಇದೆ. ಹೀಗಾಗಿ ಲಾಕ್‌ಡೌನ್‌ ಇನ್ನಷ್ಟುಬಿಗಿ ಮಾಡಬೇಕು ಎಂದು ಮಾಜಿ ಶಾಸಕ, ಮಾಜಿ ಶಾಸಕರ ವೇದಿಕೆ ರಾಜ್ಯಾಧ್ಯಕ್ಷ ಎಚ್‌.ಎಂ.ಚಂದ್ರಶೇಖರಪ್ಪ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನದವರೆಗೂ ಲಾಕ್‌ಡೌನ್‌ ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ಅಪಾಯಕ್ಕೆ ನಾವುಗಳೇ ಆಹ್ವಾನ ನೀಡಬಾರದು ಎಂದು ಎಚ್ಚರಿಸಿದರು. ಕೊರೋನಾ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ. ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ಕೊರೋನಾ ವೈರಸ್‌ ಹರಡದಂತೆ ಹಗಲಿರುಳು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಕೊರೋನಾದಿಂದ ಹಾಪ್‌ಕಾಮ್ಸ್‌ಗೆ ತಿರುಗಿದ ಶುಕ್ರದೆಶೆ!

ಬೆಂಗಳೂರಿನಲ್ಲಿರುವ ಕೈಗಾರಿಕೆಗಳನ್ನು ರಾಜ್ಯದ ಬೇರೆಡೆಗೂ ಸ್ಥಳಾಂತರಿಸಬೇಕು. ಬೆಂಗಳೂರಿನಿಂದ ಕಾರ್ಮಿಕರನ್ನು ಉಚಿತವಾಗಿ ಅವರವರ ಊರುಗಳಿಗೆ ಕಳುಹಿಸುತ್ತಿರುವಂತೆ ಜಿಲ್ಲೆಯಲ್ಲಿರುವ ಕಾರ್ಮಿಕರನ್ನು ಅವರವರ ಸ್ವಗ್ರಾಮಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಬೇಕು. ಯುಗಾದಿಗ ಹಬ್ಬಕ್ಕೆಂದು ಊರುಗಳಿಗೆ ಬಂದವರನ್ನು ಅವರ ಕೆಲಸದ ಸ್ಥಳಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಬೇಕು. ಪಾಲಿಕೆಯಿಂದ ಬಡವರಿಗೆ ಇನ್ನೂ ಹೆಚ್ಚಿನ ದಿನಸಿ ಕಿಟ್‌ ವಿತರಿಸಬೇಕು ಎಂದು ಆಗ್ರಹಿಸಿದರು. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದೆಲ್ಲೆಡೆ ಗುಂಡಿ ತೆಗೆಯಲಾಗಿದೆ. ಇವುಗಳನ್ನು ಕೂಡಲೇ ಮುಚ್ಚಬೇಕು. ಕಾಮಗಾರಿಯನ್ನು ಆದಷ್ಟುಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಮದ್ಯ ನಿಷೇಧ:

ಮಾಜಿ ಶಾಸಕ ಜಿ.ಡಿ.ನಾರಾಯಣಪ್ಪ ಮಾತನಾಡಿ, ರಾಜ್ಯದಲ್ಲಿ ಮದ್ಯ ನಿಷೇಧ ಮುಂದುವರಿಸಬೇಕಿತ್ತು. ಮದ್ಯದಿಂದ ಲಿವರ್‌ಗೆ ಹಾನಿಯಾಗುತ್ತದೆ. ಈ ಸಂದರ್ಭದಲ್ಲಿ ವ್ಯಸನದಿಂದ ದೂರಾಗಲು ಅವಕಾಶವಿತ್ತು. ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದರು.