* ಕಾಂಗ್ರೆಸ್‌ನಿಂದ ಮೂರು ಬಾರಿ ಪ್ರತಿನಿಧಿಸಿದ್ದ ಕಲ್ಲೂರ* ಕರ್ನಾಟಕ ಭೂಸೇನಾ ನಿಗಮದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಕಲ್ಲೂರ* ಬೆಳ್ಳಿ ಪಂಪ್‌ಸೆಟ್‌ ಕಲ್ಲೂರ ಎಂದೇ ಖ್ಯಾತರಾಗಿದ್ದ ಮಾಜಿ ಶಾಸಕ

ವಿಜಯಪುರ(ಮೇ.15): ಮಾಜಿ ಶಾಸಕ ಆರ್‌.ಆರ್‌.ಕಲ್ಲೂರ(91) ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನರಾದರು.

1978, 1983 ಹಾಗೂ 1989 ರಲ್ಲಿ ಇಂಡಿ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಮೂರು ಬಾರಿ ಪ್ರತಿನಿಧಿಸಿದ್ದರು. ಕರ್ನಾಟಕ ಭೂಸೇನಾ ನಿಗಮದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. 

ರಾಜ್ಯದ ಮೊದಲ ಮಹಿಳಾ ಶಿಲ್ಪಿ ಕೊರೋನಾಗೆ ಬಲಿ

ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್‌ ಅವರ ಕಟ್ಟಾಶಿಷ್ಯ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಇಂಡಿಗೆ ಆಗಮಿಸಿದ್ದಾಗ 9 ಕೆ.ಜಿ. ಬೆಳ್ಳಿ ಕಿರೀಟ ಕೊಡುಗೆ ನೀಡಿದ್ದರು. ಹೀಗಾಗಿ ಅವರು ಬೆಳ್ಳಿ ಪಂಪ್‌ಸೆಟ್‌ ಕಲ್ಲೂರ ಎಂದೇ ಖ್ಯಾತರಾಗಿದ್ದರು.