ರಾಜ್ಯದ ಮೊದಲ ಮಹಿಳಾ ಶಿಲ್ಪಿ ಕೊರೋನಾಗೆ ಬಲಿ

*ಬೆಂಗಳೂರಿನಲ್ಲಿ ಕನಕಮೂರ್ತಿ ನಿಧನ
* ಅನೇಕ ಮಹಾನ್‌ ಚೇತನಗಳ ಪ್ರತಿಮೆಗಳನ್ನು ನಿರ್ಮಿಸಿ ಹೆಸರುವಾಸಿಯಾಗಿದ್ದ ಕನಕಮೂರ್ತಿ
* ಕನಕಮೂರ್ತಿ ಅವರಿಗೆ ಕರ್ನಾಟಕ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ
 

Karnatakas First Woman Sculptor Kanakamurthy Passed Away due to Coronavirus grg

ಬೆಂಗಳೂರು(ಮೇ.14): ರಾಜ್ಯದ ಮೊದಲ ಮಹಿಳಾ ಶಿಲ್ಪಿ ಎಂದೇ ಖ್ಯಾತಿ ಗಳಿಸಿದ್ದ ಕನಕಮೂರ್ತಿ ಅವರು (79) ಗುರುವಾರ ಬೆಳಗ್ಗೆ ಕೋವಿಡ್‌ನಿಂದಾಗಿ ನಿಧನರಾದರು. 

Karnatakas First Woman Sculptor Kanakamurthy Passed Away due to Coronavirus grg

ಬೆಂಗಳೂರಿನ ಲಾಲ್‌ಬಾಗ್‌ ಬಳಿಯ ಕುವೆಂಪು ಪ್ರತಿಮೆ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಸಮೀಪದ ರೈಟ್‌ ಸೋದರರ ಪ್ರತಿಮೆ, ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಷಿ, ಕೆ.ಎಂ. ಮುನ್ಷಿ ಸೇರಿದಂತೆ ಅನೇಕ ಮಹಾನ್‌ ಚೇತನಗಳ ಪ್ರತಿಮೆಗಳನ್ನು ನಿರ್ಮಿಸಿ ಹೆಸರುವಾಸಿಯಾಗಿದ್ದರು. ಬಾಣಸವಾಡಿಯಲ್ಲಿರುವ 11 ಅಡಿ ಆಂಜನೇಯನ ಪ್ರತಿಮೆ ಅವರ ಇನ್ನೊಂದು ಮುಖ್ಯ ಸಾಧನೆ. ಅವರಿಗೆ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ.

"

ಕಲಬುರಗಿ: ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್ ಕೋವಿಡ್‌ಗೆ ಬಲಿ

ನಗರದ ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತಿ ನಾರಾಯಣ ಮೂರ್ತಿ, ಮಗಳು ಸುಮತಿ ಸೇರಿದಂತೆ ಅಪಾರ ಶಿಷ್ಯ ವರ್ಗವನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Karnatakas First Woman Sculptor Kanakamurthy Passed Away due to Coronavirus grg

1942ರ ಡಿ.2ರಂದು ಟಿ. ನರಸೀಪುರದಲ್ಲಿ ಜನಿಸಿದ ಅವರು, ಬಾಲ್ಯದಲ್ಲಿಯೇ ಶಿಲ್ಪಕಲೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಅವರ ಗುರು ವಾದಿರಾಜ್‌ ಬಳಿ ಪ್ರತಿರೋಧವನ್ನು ಎದುರಿಸಿ ಶಿಲ್ಪ ಕಲೆ ಕಲಿತು ನಾಡಿನ ಪ್ರಮುಖ ಶಿಲ್ಪಿ ಎನಿಸಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 
 

Latest Videos
Follow Us:
Download App:
  • android
  • ios