ಲಕ್ಷ್ಮೇಶ್ವರ(ಮೇ.21): ಕಿಲ್ಲರ್‌ ಕೊರೋನಾ ಸೋಂಕು ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ದುಡಿದು ತಿನ್ನುವ ಜನರ ಬದುಕಿನ ಹಕ್ಕನ್ನು ಕೊರೋನಾ ಕಸಿದುಕೊಂಡಿರುವುದು ನೋವಿನ ಸಂಗತಿಯಾಗಿದ್ದು. ಬಡವರಿಗೆ ದವಸ ಧಾನ್ಯ ನೀಡಿ ಆಸರೆಯಾಗುವ ನಿಟ್ಟಿನಲ್ಲಿ ಪುರಸಭೆ ಸದಸ್ಯರ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ ಹೇಳಿದ್ದಾರೆ. 

ಪಟ್ಟಣದ 21 ನೇ ವಾರ್ಡಿನ ಸದಸ್ಯ ಫಿರ್ಧೋಶ್‌ ಆಡೂರ ಅವರು ಬುಧವಾರ 21 ನೇ ವಾರ್ಡಿನ ಬಡ ಜನತೆಗೆ ದಿನಸಿ ವಸ್ತು ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ನಿತ್ಯ ತಮ್ಮ ದುಡಿಮೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದವರ ಪಾಲಿಗೆ ಕೊರೋನಾ ಭಾರಿ ಕಂಟಕವಾಗಿದೆ. ಲಾಕ್‌ಡೌನ್‌ ಆದಾಗಿನಿಂದ ಬಡವರ ಬದುಕು ದುರ್ಬಲವಾಗಿದೆ. ದುಡಿಮೆ ಇಲ್ಲದೆ ಕುಟುಂಬವನ್ನು ಸಲಹುವ ಕಷ್ಟಬಡ ಜನೆತೆಗೆ ಎದುರಾಗಿದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪುರಸಭೆ ಸದಸ್ಯ ಫಿರ್ಧೋಶ ಆಡೂರ ಅವರು ಬಡವರ ಕಷ್ಟಕಂಡು ಅವರಿಗೆ ಬೇಕಾದ ಅಗತ್ಯ ದಿನಸಿ ವಸ್ತುಗಳನ್ನು ನೀಡುವ ಮೂಲಕ ಅವರ ಕಷ್ಟಗಳಿಗೆ ಸ್ಪಂಧಿಸುವ ಕಾರ್ಯ ಮಾಡಿರುವುದು ಸ್ತುತ್ಯಾರ್ಹವಾಗಿದೆ ಎಂದರು.

ಎಲ್ಲೋ ಬಸ್ ನಿಲ್ಲಸಿದ್ರೆ ಮಕ್ಕಳು, ಮಹಿಳೆಯರು ಏನ್ ಮಾಡ್ಬೇಕು? KSRTC ಅಧಿಕಾರಿಗೆ ಪ್ರಯಾಣಿಕರ ತರಾಟೆ

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಸ್‌. ದೊಡ್ಡಗೌಡ್ರ, ಪುರಸಭೆ ಸದಸ್ಯ ಫಿರ್ಧೋಶ್‌ ಆಡೂರ, ಮುಕ್ತಿಯಾರ್‌ ಗದಗ, ದಾದಾಮಿಯಾ ಮುಳಗುಂದ, ಫೈಮ್‌ ಪಲ್ಲಿ, ಇಮ್ತಿಯಾಜ್‌ ಪಲ್ಲಿ, ವಾಸಣ್ಣ ಪಾಟೀಲ ಕುಲಕರ್ಣಿ, ಹಾಸಂಪೀರ್‌ ಕಣಕೆ, ಖ್ವಾಜಾಹುಸೇನ್‌ ಮೋಮಿನ್‌, ಕಿರಣ ನವಲೆ, ನಜೀರ್‌ಅಹ್ಮದ್‌ ಗದಗ ಇದ್ದರು.