ರೈತರ ವಿರುದ್ಧ ನಡೆದುಕೊಂಡ ಕಾಂಗ್ರೆಸ್ ಸರ್ಕಾರ ಉಳಿಯದು: ಡಾ.ಕೆ.ಅನ್ನದಾನಿ
ಅಧಿಕಾರಕ್ಕೆ ಬರುವ ಮುನ್ನ ಅನ್ನದಾತರ ಪರವಿರುವುದಾಗಿ ಭರವಸೆ ಕೊಟ್ಟಿದ್ದರು. ಈಗ ಬೆಳೆ ಹಾಕದಂತೆ ರೈತರಿಗೆ ನೋಟಿಸ್ ಕೊಡುತ್ತಿದ್ದಾರೆ. ನಮ್ಮ ರೈತರ ಒಂದು ಬೆಳೆಗೆ ನೀರು ಕೊಡದೆ ತಮಿಳುನಾಡಿನವರ ಮೂರನೇ ಬೆಳೆಗೆ ನೀರು ಹರಿಸುತ್ತಿದ್ದಾರೆ: ಮಾಜಿ ಶಾಸಕ ಡಾ.ಕೆ.ಅನ್ನದಾನಿ
ಮಂಡ್ಯ(ಅ.04): ರೈತರ ವಿರುದ್ಧ ನಡೆದುಕೊಂಡ ಸರ್ಕಾರ ಉಳಿದಿರುವ ನಿದರ್ಶನಗಳಿಲ್ಲ. 135 ಸ್ಥಾನಗಳಲ್ಲಿ ಗೆದ್ದಿರುವುದಾಗಿ ಕಾಂಗ್ರೆಸ್ ಸರ್ಕಾರ ಅಹಂಕಾರ ಪ್ರದರ್ಶಿಸುತ್ತಿದೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಾ ರೈತರ ತಾಳ್ಮೆ ಪರೀಕ್ಷಿಸುತ್ತಿದೆ. ಪ್ರತಿ ಜಿಲ್ಲೆಯ ಅನ್ನದಾತರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.
ರೈತ ಹಿತರಕ್ಷಣಾ ಸಮಿತಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿ, ಅಧಿಕಾರಕ್ಕೆ ಬರುವ ಮುನ್ನ ಅನ್ನದಾತರ ಪರವಿರುವುದಾಗಿ ಭರವಸೆ ಕೊಟ್ಟಿದ್ದರು. ಈಗ ಬೆಳೆ ಹಾಕದಂತೆ ರೈತರಿಗೆ ನೋಟಿಸ್ ಕೊಡುತ್ತಿದ್ದಾರೆ. ನಮ್ಮ ರೈತರ ಒಂದು ಬೆಳೆಗೆ ನೀರು ಕೊಡದೆ ತಮಿಳುನಾಡಿನವರ ಮೂರನೇ ಬೆಳೆಗೆ ನೀರು ಹರಿಸುತ್ತಿದ್ದಾರೆ. ರೈತರ ಹೋರಾಟ ನಿರಂತರವಾಗಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರೈತರ ವಿರುದ್ಧ ನಡೆಯುವ ಯಾವ ಸರ್ಕಾರವೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ತಪ್ಪಿಸಲು, ಮಂಡ್ಯದಲ್ಲಿ ಹೆದ್ದಾರಿ ಸಿಬ್ಬಂದಿ ಮೇಲೆ ಹಲ್ಲೆ
ರೈತರು ಸುಮ್ಮನೆ ಕುಳಿತು ಹೋರಾಟ ಮಾಡುತ್ತಿದ್ದಾರೆ ಎಂದು ತಾಳ್ಮೆ ಪರೀಕ್ಷಿಸಬೇಡಿ. ಜಿಲ್ಲೆಯ ಜನರ ಬಳಿ ಗೆಲ್ಲಿಸಲು ಮನವಿ ಮಾಡಿದ್ದಿರಿ. ಜನರು ತಿರಸ್ಕರಿಸದೆ ನಿಮ್ಮನ್ನು ಗೆಲ್ಲಿಸಿದರು. ಡಿ.ಕೆ.ಶಿವಕುಮಾರ್ ನೀರಾವರಿ ಮಂತ್ರಿಯಾಗಿ ಜಿಲ್ಲೆಯ ಜನರ ಕಷ್ಟ ಏಕೆ ಕೇಳುತ್ತಿಲ್ಲ. ಜಿಲ್ಲೆಯ ಜನರು ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.