ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ತಪ್ಪಿಸಲು, ಮಂಡ್ಯದಲ್ಲಿ ಹೆದ್ದಾರಿ ಸಿಬ್ಬಂದಿ ಮೇಲೆ ಹಲ್ಲೆ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ದುಬಾರಿ ಟೋಲ್ ಶುಲ್ಕವನ್ನು ತಪ್ಪಿಸಲು ಕಾರಿನ ಮಾಲೀಕರು ಹೆದ್ದಾರಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಒನ್ ವೇನಲ್ಲಿ ಸಾಗಿದ್ದಾರೆ.
ಮಂಡ್ಯ (ಅ.03): ಕರ್ನಾಟಕದ ಏಕೈಕ ಎಕ್ಸ್‌ಪ್ರೆಸ್‌ವೇ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿನ ದುಬಾರಿ ಟೋಲ್ (Bangalore Mysore Expressway toll) ಕಟ್ಟುವುದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಂಡ್ಯ ಪಾಸಿಂಗ್ ಕಾರಿನ ಪ್ರಯಾಣಿಕರು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿದ್ದ ಹೋಮ್ ಗಾರ್ಡ್ ಮೇಲೆ ಹಲ್ಲೆ ಮಾಡಿ ಒನ್‌ವೇ ರಸ್ತೆಯಲ್ಲಿ ಯೂ ಟರ್ನ್ ಹೋಗಿರುವ ಘಟನೆ ನಡೆದಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಆಗಿಂದಾಗ್ಗೆ ಇಂತಹ ಅವಾಂತರಗಳು ನಡೆಯುತ್ತಲೇ ಇವೆ. ಈ ದಶಪಥ ಹೆದ್ದಾರಿಯಲ್ಲಿ ದುಬಾರಿ ಟೋಲ್ ವಿಧಿಸಲಾಗುತ್ತದೆ. ಆದ್ದರಿಂದ ಕಾರು ಹಾಗೂ ಇತರೆ ವಾಹನಗಳ ಚಾಲಕರು ಹೆದ್ದಾರಿಯಲ್ಲಿ ಬಂದರೂ ಟೋಲ್‌ನಿಂದ ತಪ್ಪಿಸಿಕೊಳ್ಳಲು ಹಲವು ಉಪಾಯಗಳನ್ನು ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವವರು ಕಣಿಮಿಣಿಕೆ ಟೋಲ್ ತಪ್ಪಿಸಿಕೊಂಡು ಚನ್ನಪಟ್ಟಣದ ಬಳಿ ಹೆದ್ದಾರಿಗೆ ಹೋಗಿ ಶ್ರೀರಂಗಪಟ್ಟಣದ ಗೌರಿಪುರ ಬಳಿ ಹೊರಗೆ ಬರುತ್ತಾರೆ. ಇನ್ನು ಮೈಸೂರಿನಿಂದ ಬೆಂಗಳೂರಿಗೆ ಬರುವವರು ಗೌರಿಪುರದ ಬಳಿ ಹೆದ್ದಾರಿಗೆ ಸೇರ್ಪಡೆಯಾಗಿ ನಂತರ ಚನ್ನಪಟ್ಟಣದ ಬಳಿ ಸರ್ವಿಸ್ ರಸ್ತೆಗೆ ಬರುತ್ತಾರೆ. ಹೀಗೆ ಟೋಲ್‌ನಿಂದ ವಂಚನೆ ಮಾಡುವುದಕ್ಕೆ ವಾಹನ ಸವಾರರು ಉಪಾಯ ಮಾಡಿಕೊಂಡಿದ್ದಾರೆ.
ಗೋಕಾಕ ಪಟ್ಟಣದಲ್ಲಿ ಬೆಚ್ಚಿ ಬೀಳಿಸೋ ಸಾಮೂಹಿಕ ಅತ್ಯಾಚಾರ: ರಾತ್ರಿಯಿಡೀ 6 ಕಾಮುಕರ ದಾಳಿಗೆ ನಲುಗಿದ ಮಹಿಳೆ
ಬೆಂಗಳೂರಿನಿಂದ ಟೋಲ್ ಕಟ್ಟಿ ಮೈಸೂರು ಮಾರ್ಗದೆಡೆಗೆ ಹೋಗುವ ವಾಹನಗಳ ಸಂಖ್ಯೆ ಕಡಿಮೆಯಿದ್ದರೂ ಮಂಡ್ಯದ ಬಳಿ ಹಾದುಹೋಗುವ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಮಾಡುವ ವಾಹನಗಳ ಸಂಖ್ಯೆ 3 ಪಟ್ಟು ಹೆಚ್ಚಾಗಿರುತ್ತದೆ. ದುಬಾರಿ ಟೋಲ್ ವಿಧಿಸಿ ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೆಚ್ಚ ವಸೂಲಿಗೆ ಮುಂದಾದ ಕೇಂದ್ರ ಸರ್ಕಾರಕ್ಕೆ ಟೋಲ್ ಸಂಗ್ರಹದ ಬಗ್ಗೆ ತಲೆನೋವು ಶುರುವಾಗಿದೆ. ಇನ್ನು ಟೋಲ್ ಪಾವತಿಯಿಂದ ಯಾವೊಂದು ವಾಹನಗಳೂ ವಂಚನೆ ಮಾಡಬಾರದು ಎನ್ನುವ ಉದ್ದೇಶದಿಂದ ಎಕ್ಸ್‌ಪ್ರೆಸ್ ವೇನಿಂದ ಸರ್ವಿಸ್ ರಸ್ತೆಗೆ ಯೂಟರ್ನ್ ಮಾಡಿ ಹೊರಗೆ ಬರದಂತೆ ಕೆಲವು ಕಡೆಗಳಲ್ಲಿ ಹೋಮ್ ಗಾರ್ಡ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆದರೆ, ಇದನ್ನು ಲೆಕ್ಕಿಸದ ವಾಹನ ಸವಾರರು ಹೋಮ್ ಗಾರ್ಡ್ ಅಡ್ಡಗಟ್ಟಿರುವ ಬ್ಯಾರಿಕೇಡ್ ತೆಗೆದು, ಅವರ ಮೇಲೆಯೇ ಹಲ್ಲೆ ಮಾಡಿ ಏಕಮುಖ ಸಂಚಾರದಲ್ಲಿ ಕಾರು ಚಲಾಯಿಸಿಕೊಂಡು ಓಡಾಡುತ್ತಿರುವ ಘಟನೆಗಳು ನಡೆಯುತ್ತಿದೆ.
ಬೆಂಗಳೂರಿನಲ್ಲಿ ಶಾಲಾ ಸಮಯ ಬದಲಾವಣೆ: ಮಕ್ಕಳನ್ನು ಬೇಗನೆ ಎಬ್ಬಿಸಿ ಶಾಲೆಗೆ ಕಳಿಸುವುದು ಪೋಷಕರ ಜವಾಬ್ದಾರಿ!
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನ ನಿಯಮಗಳನ್ನು ಪಾಲಿಸಲು ಹೇಳಿದ ಹೋಂ ಗಾರ್ಡ್ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆಯು ಮಂಡ್ಯದ ಶ್ರೀರಂಗಪಟ್ಟಣದ ಗೌರಿಪುರ ಬಳಿ ನಡೆದಿದೆ. ಮೈಸೂರು ಕಡೆಯಿಂದ ಬರ್ತಾ ಇದ್ದ ಶಿಫ್ಟ್ ಕಾರು, ಟೋಲ್ ತಪ್ಪಿಸಲು ಯುಟರ್ನ್ ಮಾಡಿದ್ದಾರೆ. ಈ ವೇಳೆ ಕಾರು ಅಥವಾ ಬೇರೆಯಾವುದೇ ವಾಹನಗಳು ಈ ಮಾರ್ಗದಲ್ಲಿ ಹೋಗೋ ಹಾಗಿಲ್ಲ. ಒಂದು ವೇಳೆ ಈ ದಾರಿಯಲ್ಲಿ ಹೋದರೆ ಅಪಘಾತವಾಗುತ್ತೆ ಎಂದು ಹೇಳಿದ ಹೋಂ ಗಾರ್ಡ್ ಹೇಳಿದ್ದಾರೆ. ಇವರ ಮಾತನ್ನು ಕೇಳದೇ ಅಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್ ತೆಗೆದು ಕಾರು ಚಲಿಸಲು ಮುಂದಾಗಿದ್ದಾರೆ. ಜೊತೆಗೆ, ಕಾರು ಅಡ್ಡಗಟ್ಟಿದ ಹೋಮ್ ಗಾರ್ಡ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕಾರಿನ ಸವಾರರು ನಂತರ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಪೊಲೀಸರಿಗೆ ಹೇಳುವುದಾಗಿ ತಿಳಿಸಿದರೆ, ಯಾವ ಪೊಲೀಸ್‌ಗೆ ಬೇಕಾದ್ರು ಹೇಳಿಕೋ ಎಂದು ಅವಾಜ್ ಹಾಕಿದ್ದಾರೆ.