'ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೆ'

ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್‌ ಅಧಿಕಾರ ಸ್ವೀಕಾರ ಸಮಾರಂಭವನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಓದುವ ಮೂಲಕ ಮತ್ತು ಟಿ.ವಿ. ಪರದೆ ಮೂಲಕ ನೋಡಲು ಅವಕಾಶ ಕಲ್ಪಿಸಿ ಯಶಸ್ವಿಸಗೊಳಿಸಬೇಕು: ಡಿ.ಆರ್‌.ಪಾಟೀಲ 

Former MLA D R Patil Talks Over Congress Party

ಬಾಗಲಕೋಟೆ(ಜೂ.04): ವಿಧಾನಸಭೆ ಹಾಗೂ ಲೋಕಸಭಾ ಚುನಾವಣಾ ನಂತರ ಕಾಂಗ್ರೆಸ್‌ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗಿತ್ತು. ಈಗ ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರು ಹಾಗೂ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲವಾಗುತ್ತಿದ್ದು ಬರುವ ದಿನಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದು ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಶಾಸಕ ಡಿ.ಆರ್‌.ಪಾಟೀಲ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಜರುಗಿದ ನೂತನ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವಭಾವಿಯಾಗಿ ಬ್ಲಾಕ್‌ ಅಧ್ಯಕ್ಷರುಗಳ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭವನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಓದುವ ಮೂಲಕ ಮತ್ತು ಟಿ.ವಿ. ಪರದೆ ಮೂಲಕ ನೋಡಲು ಅವಕಾಶ ಕಲ್ಪಿಸಿ ಯಶಸ್ವಿಸಗೊಳಿಸಬೇಕು ಎಂದರು.

ಕನ್ನಡಪ್ರಭದ ‘ಸುಳ್‌ ಸುದ್ದಿ’ ಮಜವಾಗಿರುತ್ತೆ ಎಂದ ಸಚಿವ ಸುರೇಶ್‌ ಕುಮಾರ್‌

ಪ್ರತಿ ವಾರ್ಡ್‌ ಮಟ್ಟದಲ್ಲಿ ಮತ್ತು ಗ್ರಾಮಗಳಲ್ಲಿ ಆಯೋಜಿಸಿದ ಟಿ.ವಿ. ಪರದೆಯ ಮೂಲಕ ಪ್ರತಿಯೊಬ್ಬರು ವೀಕ್ಷಿಸಲು ವ್ಯವಸ್ಥೆ ಮಾಡಿದ್ದನ್ನು ಚಿತ್ರೀಕರಣ ಅಥವಾ ಛಾಯಾ ಚಿತ್ರಗಳನ್ನು ಸೆರೆ ಹಿಡಿದು ಜಿಲ್ಲಾಧ್ಯಕ್ಷರಿಗೆ ತಲುಪಿಸುವ ಜವಾಬ್ದಾರಿಯನ್ನು ಕಾರ್ಯಕರ್ತರು ಮಾಡಬೇಕು ಮತ್ತು ಪಕ್ಷವನ್ನು ಈಗಿನಿಂದಲೇ ಬೇರುಮಟ್ಟದಿಂದ ಸಂಘಟನೆಯಲ್ಲಿ ತೊಡಗಿಸಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಕೋರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನಾನು ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಪಡೆದ ನಂತರ ನೂತನ ಕಾಂಗ್ರೆಸ್‌ ಪಕ್ಷದ ಕಚೇರಿಯ ಕಟ್ಟಡ ಕಾಮಗಾರಿ ಪ್ರಾರಂಭಿಸಿದ್ದೇನೆ. ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರ ಬಾಗಲಕೋಟೆ ಬಂದಂತಹ ಸಂದರ್ಭದಲ್ಲಿ ಎಲ್ಲ ಜಿಲ್ಲೆಯ ಹಿರಿಯ ಮುಖಂಡರ ನೇತೃತ್ವದಲ್ಲಿ ಲಡ್ಡು ಮುತ್ಯಾ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೇನೆ. ತಾವು ಕೆಪಿಸಿಸಿ ವತಿಯಿಂದ ಕೊಡತಕ್ಕ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಿಕೊಡುವ ಭರವಸೆ ನೀಡಿದರು.

ನೂತನ ಕೆಪಿಸಿಸಿ ಅಧ್ಯಕ್ಷರ ಸ್ವೀಕಾರ ಸಮಾರಂಭಕ್ಕೆ ಬೇಕಾಗುವ ಎಲ್ಲ ಪೂರ್ವಸಿದ್ಧತೆಯನ್ನು ಮಾಡಿಕೊಡಲಾಗಿದೆ. ಸಮಾರಂಭ ಮುಂದೂಡಿದ ಕಾರಣ ನಂತರ ತಿಳಿಸಿದ ದಿನಾಂಕವನ್ನು ತಮಗೆ ತಿಳಿಸುತ್ತೇನೆ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಎಚ್‌.ವೈ. ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿಗಳಾದ ಫಾರಸ್‌ಮಲ್‌ ಜೈನ್‌ ಮಾತನಾಡಿ, ಪಕ್ಷದ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಯಶಸ್ವಿಗೊಳಿಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬಾಯಕ್ಕ ಮೇಟಿ, ಕಮಲಾ ಮರಿಸ್ವಾಮಿ, ಪ್ರಭಾವತಿ ಚವಡಿ, ಶೃತಿ ಕಮತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ, ಎಸ್‌.ಸಿ.ಘಟಕದ ಅಧ್ಯಕ್ಷ ರಾಜು ಎಸ್‌.ಮನ್ನಿಕೇರಿ, ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ವಾಸನದ, ಬ್ಲಾಕ್‌ ಅಧ್ಯಕ್ಷರುಗಳಾದ ಎಸ್‌.ಎನ್‌.ರಾಂಪೂರ, ಹಾಜಿಸಾಬ ದಂಡಿನ, ಹಣಮಂತ ಕಾಖಂಡಕಿ, ಸಂಗಣ್ಣ ಮುಧೋಳ, ರಾಜು ಜವಳಿ, ಮಲ್ಲಣ್ಣ ಎಲಿಗಾರ, ಜಿಪಂ ಸದಸ್ಯ ಮಗಿಯಪ್ಪ ದೇಗಿನಾಳ, ಅರುಣ ಬಿಜ್ಜಳ, ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮಹೇಶ ಹೊಸಗೌಡರ, ಆನಂದ ಶಿಲ್ಪಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಎನ್‌.ಬಿ.ಗಸ್ತಿ, ಚಂದ್ರಶೇಖರ ರಾಠೋಡ, ಸಂತೋಷ ಬಗಲಿದೇಸಾಯಿ, ಎಂ.ಎಲ್‌.ಕೆಂಪಲಿಂಗಣ್ಣವರ, ಅಬುಶಾಂ ಖಾಜಿ, ರಸೂಲ್‌ ಮುಜಾವರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು. 
 

Latest Videos
Follow Us:
Download App:
  • android
  • ios