Dharwad ಕಾಂಗ್ರೆಸ್‌ನಲ್ಲಿ ಜೀವ ಬೆದರಿಕೆ: ಪ್ರಕರಣ ವಿಚಾರಣೆಯಾದ್ರೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ!
ಭೀಮೋತ್ಸವ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪೋಟೋ ಹಾಕದ್ದಕ್ಕೆ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಮತ್ತು ಯೂಥ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಅವರ ಮನೆಗೆ ಹೋಗಿ ಮಾರಕಾಸ್ತ್ರಗಳನ್ನ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಮೇ.15): ಧಾರವಾಡ (Dharwad) ಕಾಂಗ್ರೆಸ್‌ನಲ್ಲಿ ನಾಯಕರುಗಳ (Congress Leaders) ಮುಸುಕಿನ ಗುದ್ದಾಟ ನಡೆದಿದೆ. ಮೇ 12 ರಂದು ಭೀಮೋತ್ಸವ ಕಾರ್ಯಕ್ರಮದ (Bhimotsava Program) ಬ್ಯಾನರ್‌ನಲ್ಲಿ (Banner) ಮಾಜಿ ಸಚಿವ ವಿನಯ್ ಕುಲಕರ್ಣಿ (Former Minister Vinay Kulkarni) ಅವರ ಪೋಟೋ ಹಾಕದ್ದಕ್ಕೆ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಮತ್ತು ಯೂಥ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಅವರ ಮನೆಗೆ ಹೋಗಿ ಮಾರಕಾಸ್ತ್ರಗಳನ್ನ ತೋರಿಸಿ ಜೀವ ಬೆದರಿಕೆ (Life Threat) ಹಾಕಿರುವ ಘಟನೆ ಮೆಹಬೂಬ್ ನಗರದಲ್ಲಿ ಮೇ 12 ರಂದು ರಾತ್ರಿ 11 ಘಂಟೆಗೆ ನಡೆದಿದೆ.
ಏನಿದು ಪ್ರಕರಣ : ಮೇ 12ರಂದು ಧಾರವಾಡದಲ್ಲಿ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಪೋಟೋವನ್ನ ಫೈರೋಜ್ ಖಾನ್ ಪಠಾಣ್, ಮತ್ತು ಯೂತ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಅವರು ಬ್ಯಾನರ್‌ನಲ್ಲಿ ಪೋಟೋ ಹಾಕಿಸಿದಕ್ಕೆ ಇಬ್ಬರನ್ನ ಕಾಂಗ್ರೆಸ್ ಮುಖಂಡ ಮೈನುದ್ದಿನ್ ಮತ್ತು ಕಾಂಗ್ರೆಸ್ ಮುಂಖಂಡ ಇಸ್ಮಾಯಿಲ್ ತಮಾಟಗಾರ ಸಹೋದರರು ಫೋನ್‌ನಲ್ಲಿ ಜೀವ ಬೆದರಿಕೆ ಹಾಕಿ ಮತ್ತು ಮನೆಗೆ 20 ಜನರ ಗುಂಪೊಂದು ಕರೆದುಕ್ಕೊಂಡು ಬಂದು ಫೈರೋಜ್ ಪಠಾಣಗೆ ಧಮ್ಕಿ ಹಾಕಿದ್ದಾರೆ. ಇನ್ನು ಪೋನ್‌ನಲ್ಲಿ ಮಾಜಿ ಸಚಿವರಿಗೆ ಅವ್ಯಾಶ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಧಾರವಾಡ ಕಾಂಗ್ರೆಸ್‌ನಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡು ನಿಂದಿಸಿರುವ ಘಟನೆ ನಡೆದಿದೆ.
ವಿನಯ ಕುಲಕರ್ಣಿ ಪೋಟೋ ಹಾಕಿಲ್ಲವೆಂದು ಪಂಚಮಸಾಲಿ ಮುಖಂಡರ ಪ್ರತಿಭಟನೆ
ಇನ್ನು ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಘಟನೆಯ ಬಗ್ಗೆ ಮಾಹಿತಿಯನ್ನ ನೀಡಲಾಗಿದೆ. ಕೆಲ ಕಾಂಗ್ರೆಸ್ ಮುಖಂಡರಿಗೆ ಅಂಜಿಕೊಂಡಿರುವುದರಿಂದ ಪ್ರಕರಣವನ್ನ ದಾಖಲಿಸಿಲು ಹಿಂದೇಟು ಹಾಕಿದ್ದರು. ಬಳಿಕ ಉಪನಗರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ 14 ಜನರ ವಿರುದ್ದ ಸ್ವಯಂ ಪ್ರೆರಿತ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ನಮೂದಿಸಿರುವ ಹೆಸರುಗಳನ್ನ ನೋಡೋದಾದ್ರೆ ಫೈರೋಜ್ ಪಠಾಣ್, ಅಬ್ದುಲ್ ದೇಸಾಯಿ, ಮೂನೂದ್ದಿನ ನಧಾಪ್, ತೌಸಿಪ್ ಶೇಖ್, ಕೃಷ್ಣಾ ಗುಮ್ಮಗೋಳ್, ಅಜ್ಗರ್ ಮುಲ್ಲಾ, ಇಕ್ಬಾಲ್ ತಮಾಟಗಾರ, ಅಲ್ತಫ್ ತಮಾಟಗಾರ, ಜಾವೇದ್ ತಮಾಟಗಾರ, ಶಮೀನ್ ಕಾಠೆವಾಡೆ,ಅಬ್ಬಾಸ ಮುಲ್ಲಾ, ವರುಣ ಸಾಂಬ್ರಾಣಿ, ಸಿದ್ದಯ್ಯ ಭಾವಿ, ಸಮಿವುಲ್ಲಾ ಬಳ್ಳಾರಿ ಈ 14 ಜನರ ಮೆಲೆ ಸೋಮೋಟೋ ಕೇಸ್‌ನ್ನ ಧಾರವಾಡ ಉಪನಗರ ಪೋಲಿಸರು ದಾಖಲಿಸಿಕೊಂಡಿದ್ದಾರೆ.
ಧಾರವಾಡದಲ್ಲಿ ಬಸವೇಶ್ವರ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಬೊಮ್ಮಾಯಿ
ಒಬ್ಬರಿಗೋಬ್ಬರು ಬೈದಾಡುವ ನೆಪದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರುಗಳನ್ನ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಕುರಿತು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಅವರನ್ನ ಕೇಳಿದರೆ ಈ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಉತ್ತರ ನೀಡುತ್ತಿದ್ದಾರೆ. ಆದರೆ ಧಾರವಾಡದಲ್ಲಿ ಬ್ಯಾನರ್‌ನಲ್ಲಿ ಪೋಟೋ ಹಾಕಿರುವ ವಿಚಾರಕ್ಕಾಗಿ ಒಬ್ಬರಿಗೊಬ್ಬರು ಬೆದರಿಕೆ ಹಾಕೋ ಮಟ್ಟಕ್ಕೆ ಹೋಗುತ್ತಿದ್ದಾರೆ. ಇನ್ನಾದರೂ ಉಪನಗರ ಪೋಲಿಸರು ಎಚ್ಚೆತ್ತುಕೊಂಡು ಪ್ರಚೋದನಕಾರಿ ಘಟನೆಯ ಮಾಡುವವರಿಗೆ ಬ್ರೇಕ್ ಹಾಕಬೇಕಿದೆ.