ನನ್ನ ಕ್ಷೇತ್ರದ ಜನರು ಮಾನವೀಯತೆ ಮತ್ತು ಅಭಿವೃದ್ಧಿ ಆಧಾರದಲ್ಲಿ ನನ್ನನ್ನ ಆಯ್ಕೆ ಮಾಡಿದ್ದಾರೆ| ಕಲ್ಲಡ್ಕ ಪ್ರಭಾಕರ ಭಟ್ ನನ್ನ ಕ್ಷೇತ್ರದವರಲ್ಲ, ಅವರು ಹೊರಗಿನವರು| ಭಾರತದ ಒಂದು ಪ್ರದೇಶವನ್ನ ಪಾಕಿಸ್ತಾನ ಅಂತ ಕರೆದರೆ ಅದು ದೇಶದ್ರೋಹ| ಉಳ್ಳಾಲ ಕ್ಷೇತ್ರದಲ್ಲಿ ಈ ಹಿಂದೆ ಬೇರೆ ಧರ್ಮದವರು ಕೂಡ ಶಾಸಕರಾಗಿದ್ದಾರೆ: ಯು.ಟಿ.ಖಾದರ್|
ಮಂಗಳೂರು(ಜ.30): ಕಲ್ಲಡ್ಕ ಪ್ರಭಾಕರ ಭಟ್ ಮತ್ತೆ ಮಾತಾನಾಡಿದ್ದಾರೆ. ಅದಕ್ಕೆ ಮಹತ್ವ ಕೊಡುವುದಿಲ್ಲ. ಈ ಹಿಂದೆ ಅವರು ತುಳುನಾಡಿನ ಕೊರಗಜ್ಜ ದೈವ ಮತ್ತು ಪಾತ್ರಿಯನ್ನು ದೂಷಿಸಿದ್ದರು. ಕಲ್ಲಡ್ಕ ಪ್ರಭಾಕರ ಭಟ್‌ಗೆ ಕೊರಗಜ್ಜ ದೈವದ ಶಾಪ ತಟ್ಟಿದೆ. ಹೀಗಾಗಿ ಅವರು ನಿಮಿಷಕ್ಕೊಂದು ದೇಶಕ್ಕೆ ಮತ್ತು ಸಮಾಜಕ್ಕೆ ಮಾರಕವಾಗುವ ವಿಚಾರಗಳನ್ನ ಮಾತನಾಡುತ್ತಾರೆ. ಅವರಿಗೆ ಸರ್ವಧರ್ಮದ ದೇವರು ಒಳ್ಳೆಯ ಬುದ್ದಿ ಕೊಡಲಿ ಅಷ್ಟೇ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ.
ಉಳ್ಳಾಲ ಪಾಕಿಸ್ತಾನ, ಮುಸ್ಲಿಮೇತರ ಶಾಸಕರನ್ನ ತಾಕತ್ತಿದ್ರೆ ಆಯ್ಕೆ ಮಾಡಿ ಕಲ್ಲಡ್ಕ ಭಟ್ ಹೇಳಿಕೆಗೆ ಇಂದು(ಶನಿವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಯು.ಟಿ.ಖಾದರ್, ನನ್ನ ಕ್ಷೇತ್ರದ ಜನರು ಮಾನವೀಯತೆ ಮತ್ತು ಅಭಿವೃದ್ಧಿ ಆಧಾರದಲ್ಲಿ ನನ್ನನ್ನ ಆಯ್ಕೆ ಮಾಡಿದ್ದಾರೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ ನನ್ನ ಕ್ಷೇತ್ರದವರಲ್ಲ, ಅವರು ಹೊರಗಿನವರು. ಭಾರತದ ಒಂದು ಪ್ರದೇಶವನ್ನ ಪಾಕಿಸ್ತಾನ ಅಂತ ಕರೆದರೆ ಅದು ದೇಶದ್ರೋಹವಾಗುತ್ತದೆ. ಉಳ್ಳಾಲ ಕ್ಷೇತ್ರದಲ್ಲಿ ಈ ಹಿಂದೆ ಬೇರೆ ಧರ್ಮದವರು ಕೂಡ ಶಾಸಕರಾಗಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಪ್ರತಿಭಟನೆಯಿಂದ ಗಡಗಡ ನಡುಗುತ್ತಿದ್ದೇನೆ: ಡಿಕೆಶಿ ವ್ಯಂಗ್ಯ
ಕೋವಿಡ್ ಬಂದಾಗ ಕಲ್ಲಡ್ಕ ಪ್ರಭಾಕರ ಭಟ್ ಎಲ್ಲಿದ್ದರು?, ಯಾರಾದ್ರೂ ಹಿಂದೂ ಸಹೋದರ ಹೇಗಿದ್ದಾನೆ ಅಂತ ಆಸ್ಪತ್ರೆಗೆ ಹೋಗಿ ನೋಡಿದ್ರಾ?, ಯಾರಾದರೂ ಜನಸಾಮಾನ್ಯರ ಕಣ್ಣೊರೆಸುವ ಕೆಲಸ ಕಲ್ಲಡ್ಕ ಭಟ್ ಮಾಡಿದ್ರಾ, ಕೋವಿಡ್ ಅಂತ್ಯಸಂಸ್ಕಾರದ ವೇಳೆ ಕಲ್ಲಡ್ಕ ಭಟ್ ಯಾಕೆ ಮನೆಯಿಂದ ಹೊರಗೆ ಬರಲಿಲ್ಲ?, ಆವತ್ತು ಅಂತ್ಯಸಂಸ್ಕಾರ ಮಾಡಿದ್ದು ನಮ್ಮ ಕಾಂಗ್ರೆಸ್ ಕಾರ್ಯಕರ್ತರು. ಉಳ್ಳಾಲದ ಜನ ಕಷ್ಟದಲ್ಲಿದ್ದಾಗ ಇವರು ಬಂದು ಕಷ್ಟ ಆಲಿಸಿಲ್ಲ. ಮೊನ್ನೆ ಗ್ರಾ.ಪಂ ಚುನಾವಣೆ ಮೊದಲು ಒಂದು ಗ್ರಾಮದಲ್ಲಿ ಮಾತನಾಡಿದ್ರು, ಅಲ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಸೊನ್ನೆ ಸಿಕ್ಕು ಸೋತಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಹರಿಹಾಯ್ದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 30, 2021, 12:20 PM IST