ಕೊಪ್ಪಳ(ಡಿ.05): ಸಂವಿಧಾನವನ್ನು ಬದಲಾಯಿಸುತ್ತೇವೆ, ಸುಟ್ಟು ಹಾಕುತ್ತೇನೆ ಎಂದೆಲ್ಲಾ ಮಾತನಾಡಿದ್ದ ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯನಿಗೆ ಒದಕಿ (ಒದೆ) ಬಿದ್ದಾಗಲೇ ಸಂವಿಧಾನ ನೆನಪಾಗಿದ್ದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇಲ್ಲಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಪಂ ಚುನಾವಣೆಯ ಕಾಂಗ್ರೆಸ್‌ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡುತ್ತ, ಪಶ್ಚಿಮ ಬಂಗಾಲದಲ್ಲಿ ಬಿಸ್ಕಿಟ್‌ (ಪೆಟ್ಟು) ಬಿದ್ದಾಗಲೇ ಅವರಿಗೆ ಸಂವಿಧಾನ ನೆನಪಾಯಿತು ಎಂದು ಹೇಳಿದ್ದಾರೆ. 

ಕೊಪ್ಪಳದಲ್ಲಿ ಮರಗಳು ಒಣಗುವುದನ್ನು ನೋಡಿ ಬೆಚ್ಚಿ ಬಿದ್ದ ಜನ..!

ಇಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ, ಸಂವಿಧಾನದ ಆಶಯ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಬರೋಬ್ಬರಿ ಒದಕಿ ಯಾವಾಗ ಬಿದ್ದವೋ ಆವಾಗ ಅವರಿಗೆ ಸಂವಿಧಾನ ನೆನಪಾಯಿತು ಎಂದು ಪುನರುಚ್ಚರಿಸಿದ್ದಾರೆ.