ಕೊಪ್ಪಳದಲ್ಲಿ ಮರಗಳು ಒಣಗುವುದನ್ನು ನೋಡಿ ಬೆಚ್ಚಿ ಬಿದ್ದ ಜನ..!
First Published Dec 4, 2020, 2:20 PM IST
ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.03): ಇದ್ದಕ್ಕಿದ್ದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿದೆ. ಕಳೆದೊಂದು ತಿಂಗಳಿಂದ ಅತೀ ಸಣ್ಣ ಮರವೂ ಸೇರಿದಂತೆ ದೊಡ್ಡ ದೊಡ್ಡ ಬೇವಿನ ಮರಗಳು ಏಕಾಏಕಿ ಒಣಗಲಾರಂಭಿಸಿದ್ದು, ಆತಂಕಕ್ಕೆ ಹುಟ್ಟಿಸಿದೆ.

ಇದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರವದವರಿಗೂ ಹೊಸ ಸಮಸ್ಯೆಯಾಗಿ ಕಾಣುತ್ತಿದೆ. ಮೊದಲ ಬಾರಿ ಇಂಥದ್ದೊಂದು ಸಮಸ್ಯೆಯನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಮಳೆಗಾಲ ಈಗಷ್ಟೇ ಮುಗಿದಿದ್ದು, ಆಗಾಗ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಹಸಿರಿನಿಂದ ಕಂಗೊಳಿಸಬೇಕಾದ ಬೇವಿನ ಮರಗಳು ಮಾತ್ರ ಏಕಾಏಕಿ ಒಣಗಲಾರಂಭಿಸಿವೆ.

ಯಾವುದಾದರೂ ಒಂದು ಬೇವಿನ ಮರ ಅಥವಾ ಒಂದು ಏರಿಯಾ ಬೇವಿನ ಮರ ಒಣಗುತ್ತಿದ್ದರೆ ಏನೋ ಸಮಸ್ಯೆ ಇದೆ ಎನ್ನಬಹುದಿತ್ತು. ಕೊಪ್ಪಳ, ಭಾಗ್ಯನಗರ, ಗಂಗಾವತಿ, ಕುಷ್ಟಗಿ ಸೇರಿದಂತೆ ಜಿಲ್ಲಾದ್ಯಂತ ಲಕ್ಷಾಂತರ ಬೇವಿನ ಮರಗಳು ಒಣಗಲಾರಂಭಿಸಿವೆ. ಕೆಲವೊಂದು ಈಗಾಗಲೇ ಸಂಪೂರ್ಣ ಒಣಗಿವೆ. ಈ ರೀತಿ ಬೇವಿನ ಮರಗಳು ಅಷ್ಟು ಸಂಪೂರ್ಣ ಒಣಗಿದರೆ ಪರಿಸರದ ಅಸಮತೋಲನ ಅಥವಾ ಏರುಪೇರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?