ಶಿವಮೊಗ್ಗ(ಸೆ.09): ಹೊಸನಗರ ತಾಲೂಕಿನ ಸುತ್ತಾ ಸೇತುವೆ ಮೇಲೆ ನೀರು ನಿಂತು ಹತ್ತಾರು ಗ್ರಾಮಗಳ ಸಂಪರ್ಕಕ್ಕೆ ಕಡಿತಗೊಂಡಿದ್ದ ಹಿನ್ನೆಲೆಯಲ್ಲಿ ಸೇತುವೆ ಸ್ಥಳಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಸುತ್ತಾದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ತರಲಾಗಿದೆ. ಅಲ್ಲದೆ 10 ಕೋಟಿ ರು. ಹಣ ಕೂಡ ತೆಗೆದಿಡಲಾಗಿದೆ. ಆದರೆ ಸೇತುವೆ ಕಾಮಗಾರಿ ಚಾಲನೆ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗ: ಹೊಸ ಟ್ರಾಫಿಕ್ ರೂಲ್ಸ್, ಎರಡು ದಿನದಲ್ಲಿ 84,800 ರು. ದಂಡ ವಸೂಲಿ..!

ಲೋಕಲ್‌ ಅಧಿಕಾರಿಗಳು ಹೆಣದಂತಾಗಿದ್ದಾರೆ. ಕಾಮಗಾರಿ ಏನಾಯ್ತು ಎಂಬುದರ ಕುರಿತು ಗಮನವೇ ಹರಿಸುವುದಿಲ್ಲ. ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡು ಯಾವುದೇ ಪ್ರಯೋಜನವಿಲ್ಲ ಎಂದು ಸಿಡಿಮಿಡಿಗೊಂಡರು.

ಸುತ್ತಾ ಸೇತುವೆ ಶಿಥಿಲಗೊಂಡಿದ್ದು ಹೊಸ ಸೇತುವೆಗೆ ಸಾಕಷ್ಟುವರ್ಷಗಳಿಂದ ಬೇಡಿಕೆ ಇದ್ದ ಕಾರಣ ನೂತನ ಸೇತುವೆ ಮಂಜೂರುಗೊಂಡಿದೆ. ನಾನೇ ಬೆನ್ನು ಹತ್ತಿ ಕಾಮಗಾರಿ ಮಾಡಿಸುತ್ತೇನೆ ಎಂದು ಕಾಗೋಡು ಭರವಸೆ ನೀಡಿದರು.

6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ : ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ

ಅಲ್ಲದೆ ಶಿವಮೊಗ್ಗ ಭಾಗದ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಮಾಜಿ ಸಚಿವರು, ಕೂಡಲೇ ಕಾಮಗಾರಿ ಸಂಬಂಧ ಟೆಂಡರ್‌ ಕರೆಯುವಂತೆ ತಾಕೀತು ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ. ನಾಗರಾಜ, ಕಾರ್ಯದರ್ಶಿ ಸದಾಶಿವ ಶೆಟ್ಟಿ, ಪಟ್ಟಣ ಪಂಚಾಯ್ತಿ ಸದಸ್ಯ ಅಶ್ವಿನ್‌ ಕುಮಾರ್‌, ಪ್ರಮುಖರಾದ ಏರಗಿ ಉಮೇಶ್‌, ಪ್ರಭಾಕರರಾವ್‌, ಶ್ರೀನಿವಾಸ ಕಾಮತ್‌, ನಾಗರಾಜಗೌಡ, ಮತ್ತಿತರರು ಹಾಜರಿದ್ದರು.