ಚುನಾವಣೆ ಸ್ಪರ್ಧೆ ವಿಚಾರ: ಗುರು ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟು ಕೊಡಲು ಮುಂದಾದ ಶಿಷ್ಯ..!
* ನನಗ ತಿಳಿದಂಗ ಸಾಹೇಬ್ರು ಗುಟ್ಟು ಬಿಟ್ಟುಕೊಟ್ಟಿಲ್ಲ
* ಬಾಗಲಕೋಟೆಯಲ್ಲಿ ಸ್ಪರ್ಧೆ ಮಾಡೋದು ಅವರ ಮರ್ಜಿ
* ಎಲ್ಲಿ ನಿಲ್ಲಬೇಕು ಅಂತಾ ಡಿಸೈಡ್ ಮಾಡೋದು ಅವರೇ
ಬಾಗಲಕೋಟೆ(ಜೂ.13): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಾಗಲಕೋಟೆ ಕ್ಷೇತ್ರಕ್ಕೆ ಸ್ವಾಗತಿಸುತ್ತೇನೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕೂಡಾ ಅವರಿಗೆ ನನ್ನ ಕ್ಷೇತ್ರಕ್ಕೆ ಅಹ್ವಾನಿದ್ದೆ, ನಾನು ಸಿದ್ದರಾಮಯ್ಯ ಅವರನ್ನ ಕರೆಯುತ್ತೇನೆ, ಅವರು ಏನ್ ಮಾಡ್ತಾರೆ ಗೊತ್ತಿಲ್ಲ. ಕಾಂಗ್ರೆಸ್‌ನ ಎಲ್ಲ 224 ಕ್ಷೇತ್ರದ ಸದಸ್ಯರೂ ಕೂಡ ಸಿದ್ದರಾಮಯ್ಯ ಅವರಿಗೆ ಅಹ್ವಾನ ನೀಡುತ್ತಾರೆ ಎಂದು ಮಾಜಿ ಸಚಿವ ಎಚ್.ವೈ.ಮೇಟಿ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮುಂಬರುವ ವಿಧಾನಸಭೆಗೆ ಸ್ಪರ್ಧೆ ವಿಚಾರದ ಬಗ್ಗೆ ಇಂದು(ಭಾನುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾದಾಮಿ ಕ್ಷೇತ್ರಕ್ಕೆ ಆಯ್ಕೆ ಆಗಿದ್ದೇನೆ, ನಾ ಅಲ್ಲೆ ಇರ್ತಿನಿ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ನಿನ್ನೆ ನಮ್ಮ ಜೊತೆ ಮಾತನಾಡುವಾಗ ನಾ ಬಾದಾಮಿಯಲ್ಲೇ ಇರ್ತಿನಿ ಅಂತ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಗುಳೇದಗುಡ್ಡ: 'ಸಿದ್ದರಾಮಯ್ಯ ಬಗ್ಗೆ ಮಾತಾಡುವ ನೈತಿಕತೆ ಶೀಲವಂತರಿಗಿಲ್ಲ'
ಸಿದ್ದರಾಮಯ್ಯ ಬಿಟ್ಟು ಕೊಡಲಿಲ್ಲ ಅಂದ್ರೆ ಹೇಗೆ?
ಸಿದ್ದರಾಮಯ್ಯ ಬಾಗಲಕೋಟೆಗೆ ಬಂದ್ರೂ ಸ್ವಾಗತ ಮಾಡ್ತೇನೆ, ಕ್ಷೇತ್ರ ಬಿಟ್ಟು ಕೊಡ್ತೇನೆ. ನಾನು ಇಷ್ಟೆಲ್ಲ ರಾಜಕೀಯವಾಗಿ ಬೆಳದಿದ್ದೇ ಅವರಿಂದ, ಅವರಿಗೆ ಬಿಟ್ಟು ಕೊಡಲಿಲ್ಲ ಅಂದ್ರೆ ಹೇಗೆ?.ರಾಜ್ಯದಲ್ಲಿ ನನ್ನನ್ನ ಗುರುತಿಸಿದ್ದೇ ಸಿದ್ದರಾಮಯ್ಯ ಅವರು. ನಾಲ್ಕು ಸಲ ಶಾಸಕ, ಒಂದು ಬಾರಿ ಎಂಪಿ ಆಗಬೇಕಾದರೆ ಸಿದ್ದರಾಮಯ್ಯ ಅವರೇ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ 224 ಕ್ಷೇತ್ರದ ಕಾಂಗ್ರೆಸ್ ಸದಸ್ಯರು ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ಸಿದ್ಧರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ನನ್ನ ಬಾಗಲಕೋಟೆ ಕ್ಷೇತ್ರಕ್ಕೆ ಅಹ್ವಾನ ನೀಡಿದ್ದೆ, ನಾನು ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ರೆಡಿಯಾಗಿದ್ದೆ, ಎಲ್ಲರೂ ಅವರನ್ನ ಕರೆಯುತ್ತಾರೆ ಅವರು ಎಲ್ಲಿ ನಿಲ್ಲಬೇಕು ಅಂತಾ ಡಿಸೈಡ್ ಮಾಡೋದು ಅವರೇ ಎಂದು ಹೇಳಿದ್ದಾರೆ.
ಈಗ ಬಾದಾಮಿ ಕ್ಷೇತ್ರದಲ್ಲಿದ್ದೇನೆ, ಅಲ್ಲೇ ಇರ್ತಿನಿ ಅಂತಾ ಹೇಳಿದ್ದಾರೆ. ಬಾದಾಮಿಯಲ್ಲಿ ಕಡಿಮೆ ಅಂತರದ ಗೆಲುವು ಸಾಧಿಸಿದ್ರು ಅಂತ ಅವರಿಗೆ ಭಯವಿಲ್ಲ. ಈಗ ಸದ್ಯ ಬಾದಾಮಿಯಲ್ಲಿ ಇದ್ದೀನಿ ಮುಂದೆ ನೋಡೋಣ ಅಂದಿದ್ದಾರೆ. ನನಗ ತಿಳಿದಂಗ ಸಾಹೇಬ್ರು ಗುಟ್ಟು ಬಿಟ್ಟುಕೊಟ್ಟಿಲ್ಲ. ಅವರ ಬಗ್ಗೆ ಏನು ಹೇಳಲಿಕ್ಕೆ ಆಗಲ್ಲ. ಬಾದಾಮಿ ಅಂತಾನು ಹೇಳಲ್ಲ, ಚಾಮರಾಜಪೇಟೆ ಅಂತಾನೂ ಹೇಳೋಕಾಗಲ್ಲ. ಅದು ಅವರ ಮರ್ಜಿ ಎಂದು ಎಚ್.ವೈ. ಮೇಟಿ ಹೇಳಿದ್ದಾರೆ.